ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುನಿಲ್ ಕುಮಾರ್ ಈ ಬಾರಿ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹೊಸ ಆಲೋಚನೆಯೊಂದನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದು, ಅದರ ಕಾರ್ಯಾನುಷ್ಠಾನದ ಬಗ್ಗೆ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.
ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಕೇವಲ ನವೆಂಬರ್ 1ಕ್ಕೆ ಮಾತ್ರ ಸೀಮಿತಗೊಳಿಸದೆ ಬಹುಕಾಲ ಪರಿಣಾಮ ಬೀರುವ ಕಾರ್ಯಕ್ರಮಗಳನ್ನು ರೂಪಿಸಲು ಸಚಿವರು ಮುಂದಾಗಿದ್ದಾರೆ. ಕನ್ನಡ ರಾಜ್ಯೋತ್ಸವವನ್ನು ಅನುದಿನದ ಉತ್ಸವದಂತೆ ರಾಜ್ಯ ಸೇರಿದಂತೆ ವಿದೇಶಗಳಲ್ಲಿಯೂ ಕನ್ನಡದ ಘಮ ಪಸರಿಸುವಂತೆ ಮಾಡಲು ಸಚಿವರು ಯೋಜನೆ ರೂಪಿಸಿದ್ದಾರೆ.
ಈ ಬಾರಿ “ಮಾತಾಡ್ ಮಾತಾಡ್ ಕನ್ನಡ” ವೆನ್ನುವ ಅಭಿಯಾನದಡಿ ಕನ್ನಡ ಮತ್ತಷ್ಟು ಶೋಭೆಗೊಳ್ಳಲಿದೆ. ಈ ಕಾರ್ಯಕ್ರಮದ ರೂಪುರೇಷೆಗಳನ್ನು ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಸಚಿವಾಲಯದ ಕಾರ್ಯಚಟುವಟಿಕೆಯ ಬಗ್ಗೆ ಜನರಲ್ಲಿ ಕುತೂಹಲ ವ್ಯಕ್ತವಾಗಿದೆ.
ಸುನೀಲ್ ಕುಮಾರ್ ಸಚಿವರಾದ ಆರಂಭದಲ್ಲಿಯೇ ಇಲಾಖೆಯ ಯಂತ್ರವನ್ನು ಚುರುಕುಗೊಳಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಮಾದರಿಯನ್ನು ಬದಲಾಯಿಸಿ ಜನರಿಂದಲೇ ಪುರಸ್ಕೃತರ ಆಯ್ಕೆ ನಡೆಸಲು ಪಾರದರ್ಶಕ ಹಾದಿಯನ್ನು ಹಾಕಿಕೊಟ್ಟರು.ಇದೀಗ ಕನ್ನಡ ರಾಜ್ಯೋತ್ಸವ ಎಲ್ಲರ ಮನೆಮನ ತಲುಪಿಸಲು ಮುಂದಾಗಿದ್ದಾರೆ.
Special Programme Devised for Kannada Rajyotsava Minister Sunil Kumar
ಇದನ್ನೂ ಓದಿ: ನಾಡಗೀತೆಗೆ ಸಂಗೀತ ಆಯೋಜನೆಯ ಕುರಿತು ನಿರ್ಧಾರ ಶೀಘ್ರ: ಸುನಿಲ್ ಕುಮಾರ್
ಇದನ್ನೂ ಓದಿ: ತಾಲಿಬಾನಿಗಳ ಭಯೋತ್ಪಾದನೆ ವಿರುಧ್ದ ಎಲ್ಲಾ ರಾಷ್ಟ್ರಗಳು ಒಟ್ಟಾಗಬೇಕು : ಸಚಿವ ಸುನಿಲ್ ಕುಮಾರ್
Discussion about this post