ಪ್ಯಾರಿಸ್: ಫ್ರಾನ್ಸ್‌ನಲ್ಲಿ ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಮೂರನೇ ದಿನವೂ ಅಧಿಕ ಮಟ್ಟದಲ್ಲಿ ಇದೆ. ಕಳೆದ 24 ತಾಸಿನಲ್ಲಿ 15 ಜನರು ಪ್ಯಾರಿಸ್‌ನಲ್ಲಿ ಆಸ್ಪತ್ರೆ ಸೇರಿದ್ದಾರೆ. ಕಳೆದ ಎರಡು ತಿಂಗಳಿಂದ ಕೋವಿಡ್ ಸನ್ನಿವೇಶ ಸುಧಾರಿಸಿತ್ತು. ಈಗ ಏಕಾಏಕಿ ಹೆಚ್ಚಳ ಕಾಣುತ್ತಿದೆ. ಇದು ಐದನೇ ಅಲೆಯ ಮುನ್ಸೂಚನೆ ಎಂದು ಕೆಲವು ತಜ್ಞರು ಎಚ್ಚರಿಕೆ ನೀಡಿದ್ದಾರೆ.
2020ರ ನವೆಂಬರ್‌ನಲ್ಲಿ 33,497 ಇದ್ದ ಸೋಂಕಿತರ ಸಂಖ್ಯೆ, ಈಗ ಐದು ಪಟ್ಟು ತಗ್ಗಿದೆ. 6,483ಕ್ಕೆ ಇಳಿದಿದೆ. ಆದರೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ಏರಿಕೆ ಆಗಿದೆ ಎಂದು ತಿಳಿಸಿದೆ. ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಶೇ. 0.71 ಇದ್ದ ಸೋಂಕು ಪುನರುತ್ಪತ್ತಿ ದರವು ಅಕ್ಟೋಬರ್‌ನಲ್ಲಿ ಶೇ. 1ಕ್ಕಿಂತ ಹೆಚ್ಚಾಗಿದೆ. ಬ್ರಿಟನ್ ಸೇರಿದಂತೆ ಯುರೋಪ್‌ನ ಇತರೆಡೆ ಸೋಂಕು ಅಧಿಕ ಮಟ್ಟದಲ್ಲಿ ಇರುವುದು ಇದಕ್ಕೆ ಕಾರಣ ಎಂದು ಫ್ರಾನ್ಸ್‌ನ ಆರೋಗ್ಯ ಇಲಾಖೆ ಹೇಳಿದೆ.
ಕಳೆದ 24 ತಾಸಿನಲ್ಲಿ 5,934 ಹೊಸ ಪ್ರಕರಣಗಳು ವರದಿಯಾಗಿದ್ದು, ಕಳೆದ ವಾರದ ಸರಾಸರಿಗೆ ಹೋಲಿಸಿದರೆ ತುಸು ಹೆಚ್ಚಳ ಕಂಡಿದೆ. ಕೊರೊನಾ ಸೋಂಕು ಪ್ರಸರಣ ಕಾಣಿಸಿಕೊಂಡ ನಂತರ ಫ್ರಾನ್ಸ್ನಲ್ಲಿ 70 ಲಕ್ಷ ಜನರು ಈ ವ್ಯಾಧಿಗೆ ಗುರಿಯಾಗಿದ್ದರು. ಜಾಗತಿಕ ಸೋಂಕಿತರ ಸಂಖ್ಯೆಯಲ್ಲಿ ಫ್ರಾನ್ಸ್ 7ನೇ ಸ್ಥಾನದಲ್ಲಿ ಇದೆ. ಯೂರೋಪ್‌ನಲ್ಲಿ ಅತಿ ಹೆಚ್ಚು ದೈನಿಕ ಪ್ರಕರಣ ಬ್ರಿಟನ್‌ನಲ್ಲಿ ದಾಖಲಾಗುತ್ತಿದೆ. ಇದರಿಂದ ಬೋರಿಸ್ ಜಾನ್ಸನ್ ನೇತೃತ್ವದ ಸರ್ಕಾರ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.
Coronavirus Cases Increase in France
ಇದನ್ನೂ ಓದಿ: Coronavirus: ಬ್ರಿಟನ್‌ನಲ್ಲಿ ಮತ್ತೆ ಏರಿದ ಕೊರೊನಾ ಸೋಂಕು, ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧ ಹೆಚ್ಚುತ್ತಿದೆ ಆಕ್ರೋಶ
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್: ಮೋದಿ ಟ್ವಿಟ್ಟರ್ ಅಭಿನಂದನೆ
Discussion about this post