International News: ಉಗ್ರರಾಷ್ಟ್ರ ಪಾಕಿಸ್ತಾನ ಭಾರತದ 15 ನಗರಗಳ ಮೇಲೆ ಕ್ಷಿಪಣಿ ದಾಳಿಗೆ ಯತ್ನಿಸಿದ್ದು, ಭಾರತೀಯ ಸೈನ್ಯ ಸುದರ್ಶನ ಚಕ್ರ ಬಿಟ್ಟು, ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಉಡೀಸ್ ಮಾಡಿದೆ.
ಮೇ 6ರಂದು ಬೆಳಗ್ಗಿನ ಜಾವ 2 ಗಂಟೆಗೆ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕ್‌ನ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ, 100ಕ್ಕೂ ಹೆಚ್ಚು ಉಗ್ರರ ಜೀವಹರಣ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಣಹೇಡಿ ಪಾಕ್, ನಾವು ಕೂಡ ಇನ್ನು 24 ಗಂಟೆಯಲ್ಲಿ ದಾಳಿ ಮಾಡುತ್ತೇವೆ ಎಂದಿತ್ತು. ಆದರೆ ಪಾಕ್ನ ಎಲ್ಲ ಪ್ರತಿದಾಳಿಯೂ ಉತ್ತರಿಸಲು ಭಾರತೀಯ ಸೇನೆ ರೆಡಿಯಾಗಿತ್ತು.
ಪಾಕ್ ಭಾರತದ 15 ನಗರಗಳ ಮೇಲೆ ದಾಳಿ ಮಾಡಲು ರೆಡಿಯಾಗಿತ್ತು. ಜಮ್ಮು, ಕಾಶ್ಮೀರ, ಪಂಜಾಾಬ್, ಗುಜರಾತ್, ಶ್ರೀನಗರ, ಪಠಾಣ್ ಕೋಟ್, ಅಮೃತಸರ್, ಚಂಢೀಗಡ್, ಲುಧಿಯಾನಾ, ಸೇರಿ ಇನ್ನು ಹಲವು ನಗರಗಳ ಮೇಲೆ ಪಾಕ್ ದಾಳಿ ಮಾಡುವ ವ್ಯರ್ಥ ಪ್ರಯತ್ನ ಮಾಡಿದೆ. ಆದರೆ ನಮ್ಮ ಭಾರತೀಯ ಸೇನೆ ಪಾಕ್‌ನ ಕಂತ್ರಿ ಬುದ್ಧಿಯನ್ನು ಮ“ದಲೇ ಅರಿತಿದ್ದು, ಸುದರ್ಶನ ಚಕ್ರದ ಮೂಲಕ, ಪಾಾಕ್ ಏರ್ ಡಿಫೆನ್ಸ್ ಸಿಸ್ಟಮ್ ಹೊಡೆದುರುಳಿಸಿದೆ.
ಏನಿದು ಸುದರ್ಶನ ಚಕ್ರ..?
ನಾವು ಆಗಿನಿಂದಲೂ ಭಾರತ ಸುದರ್ಶನ ಚಕ್ರದಿಂದ ಪಾಕ್ ಕ್ಷಿಪಣಿ ಹೊಡೆದುರುಳಿಸಿದೆ ಎನ್ನುತ್ತಿದ್ದೇವೆ. ಹಾಗಾದ್ರೆ ಈ ಸುದರ್ಶನ ಚಕ್ರ ಎಂದರೇನು..?. ಸುದರ್ಶನ ಚಕ್ರವೆಂದರೆ, ಎಸ್ 400 ವಾಯು ರಕ್ಷಣಾ ವ್ಯವಸ್ಥೆ. ರಷ್ಯಾ ನಿರ್ಮಿತ ಏರ್ ಡಿಫೆನ್ಸ್ ವ್ಯವಸ್ಥೆಯಾಗಿರುವ ಈ 0S- 400 ಅನ್ನು ಭಾರತೀಯ ಸೇನೆ ಸುದರ್ಶನ ಚಕ್ರ ಅಂತ ಹೆಸರಿರಿಸಿದೆ. ಮಹಾಭಾರತ ಯುದ್ಧದಲ್ಲಿ ಕೃಷ್ಣ ತನ್ನ ಸುದರ್ಶನ ಚಕ್ರ ಬಿಟ್ಟು, ದುಷ್ಟ ಸಂಹಾರ ಮಾಡಿದ್ದು, ಇದೇ ಹೆಸರನ್ನು ಶತ್ರು ಸಂಹಾರಕ್ಕಾಗಿಯೇ ತಯಾರಾಗಿರುವ ಎಸ್-400 ವಾಯು ರಕ್ಷಣಾ ವ್ಯವಸ್ಥೆಗೆ ಇರಿಸಲಾಾಗಿದೆ.
ಈ ಎಸ್- 400, 600 ಕೀ.ಮೀ ದೂರದವರೆಗೆ ಕ್ಷಿಪಣಿಗಳನ್ನು ಪತ್ತೆ ಹಚ್ಚಬಲ್ಲದು. ಫೈಟರ್ ಜೆಟ್, ಡ್ರೋಣ್ ಪ್ರತಿಬಂಧಿಸಬಲ್ಲದು. ಏಕಕಾಲದಲ್ಲಿ 300 ಕಡೆ ದಾಳಿ ನಡೆಸುವ ಸಾಮರ್ಥ್ಯವನ್ನು ಸುದರ್ಶನ ಚಕ್ರ ಹ“ಂದಿದೆ.
Discussion about this post