ಹಬ್ಬ ಮತ್ತು ಉತ್ಸವದ ವೇಳೆ ಅಂತ್ಯತ ಜಾಗರೂಕರಾಗಿರಿ ಎಂದು ತಜ್ಞರು ಎಷ್ಟೇ ಹೇಳಿದರೂ ಬೇಜವಾಬ್ದಾರಿ ನಡವಳಿಕೆಯ ಕಾರಣ ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ನವರಾತ್ರಿಯ ದುರ್ಗಾ ಪೂಜೆ ಮತ್ತು ದಸರಾ ಹಬ್ಬದ ನಂತರ ಕೋವಿಡ್-19 ಪ್ರಕರಣ ಏರಿಕೆ ಆಗಿದೆ.
ನವದೆಹಲಿ: ಪಶ್ಚಿಮ ಬಂಗಾಳ ಹಿಮಾಚಲ ಪ್ರದೇಶ ಮತ್ತು ಅಸ್ಸಾಂಗಳಲ್ಲಿ ನವರಾತ್ರಿಯ ದುರ್ಗಾ ಪೂಜೆ ಮತ್ತು ದಸರಾ ಹಬ್ಬದ ನಂತರ ಕೋವಿಡ್-19 ಸಾಂಕ್ರಾಮಿಕ ಹೆಚ್ಚಳ ಆಗಿದೆ. ಬಂಗಾಳದಲ್ಲಿ 974 ಪ್ರಕರಣ ಶನಿವಾರ ದೃಢಪಟ್ಟಿದ್ದು, ಮೂರು ತಿಂಗಳ ನಂತರ ದೈನಿಕ ಕೊರೊನಾ ಪ್ರಕರಣದಲ್ಲಿ ಏರಿಕೆ ಆಗಿದೆ. ಕಳೆದ ನಾಲ್ಕು ದಿನಗಳಿಂದ ಬಂಗಾಳದಲ್ಲಿ 800ಕ್ಕೂ ಹೆಚ್ಚು ಹೊಸ ಕೇಸ್ಗಳು ವ್ಯಕ್ತವಾಗುತ್ತದೆ.
ಕಳೆದ ಒಂದು ವಾರದಲ್ಲಿ 5,560 ಪ್ರಕರಣಗಳು ದೃಢಪಟ್ಟಿದ್ದು, ಅದರ ಹಿಂದಿನ ವಾರಕ್ಕೆ (4,329 ಪ್ರಕರಣಗಳು) ಹೋಲಿಸಿದರೆ ಶೇ. 28.4ರಷ್ಟು ಏರಿಕೆ ಕಂಡಿದೆ. ಅಸ್ಸಾಂನಲ್ಲಿ ಕಳೆದ ಒಂದು ವಾರದಿಂದ ಶೇ. 50.4ರಷ್ಟು ನಿತ್ಯದ ಪ್ರಕರಣಗಳು ಏರಿಕೆ ಆಗಿದೆ. ಹಿಂದಿನ ವಾರ 1,454 ಇದ್ದ ಪ್ರಕರಣಗಳ ಸರಾಸರಿ, ಈ ವಾರ 2,187ಕ್ಕೆ ಹೆಚ್ಚಳ ಕಂಡಿದೆ.
ಹಿಮಾಚಲ ಪ್ರದೇಶದಲ್ಲಿ ಏಳು ದಿನದಲ್ಲಿ 1,265 ಹೊಸ ಕೇಸ್ಗಳು ವರಿದಿಯಾಗಿದ್ದು, ಈ ವಾರ ಪ್ರಕರಣದ ಏರಿಕೆ ಶೇ. 38.4 ಇದೆ. ಹಿಂದಿನ ವಾರ ಈ 914 ಇತ್ತು. ಶನಿವಾರ 257 ಹೊಸ ಪ್ರಕರಣಗಳು ದೃಢಪಟ್ಟಿವೆ.
ದೇಶದಲ್ಲಿ 16 ಸಾವಿರದ ದೈನಿಕ ಕೇಸ್:
ದೇಶದಲ್ಲಿ ಭಾನುವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನಲ್ಲಿ 15,918 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. 24 ತಾಸಿನಲ್ಲಿ 159 ಮಂದಿ ಸಾವನ್ನಪ್ಪಿದ್ದು, ಹಿಂದಿನ ದಿನ ಈ ಪ್ರಮಾಣ 202 ಇತ್ತು.
ದೇಶದಲ್ಲಿ ಈಗಲೂ ಕೇರಳವೇ ಕೊರೊನಾ ಕೇಸ್ನಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ಮಿತ್ಯ 8,909 ದೈನಿಕ ಕೇಸ್ಗಳು ವರದಿ ಆಗಿದೆ.
Discussion about this post