ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಹಾಲು-ತುಪ್ಪ ವಿಧಿವಿಧಾನ ಕಾರ್ಯ ನೆರವೇರಿತು.
ಪುನೀತ್ ಸಮಾಧಿಯನ್ನು ಹೂವುಗಳಿಂದ ಅಲಂಕರಿಸಿದ್ದು, ಅಪ್ಪುಗೆ ಇಷ್ಟವಿರುವ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಎಡೆಗೆ ಇಡಲಾಗಿದೆ.
ಕಬಾಬ್, ಬಿರಿಯಾನಿ, ಇಡ್ಲಿ, ಮೊಟ್ಟೆ ಹಾಗೂ ಅಪ್ಪು ಇಷ್ಟಪಡುತ್ತಿದ್ದ ನಾಟಿ ಕೋಳಿ ಸಾಂಬಾರ್ ಸೇರಿ 5೦ಕ್ಕೂ ಹೆಚ್ಚು ಪದಾರ್ಥಗಳನ್ನು ಎಡೆ ಇಡಲಾಗಿದೆ.
ಸಮಾಧಿಯ ಮುಂದೆ ಇರುವ ನಂದಾದೀಪ ಆರದಂತೆ ಕುಟುಂಬಸ್ಥರು ನೋಡಿಕೊಳ್ಳುತ್ತಿದ್ದಾರೆ.

























Discussion about this post