ಕೇಂದ್ರ ಸರ್ಕಾರದ ನೋಟು ರದ್ದತಿ ಕ್ರಮದ ನಂತರ (ನವೆಂಬರ್ 8, 2016) ದೇಶದ ಜನರ ಆರ್ಥಿಕ ಚೈತನ್ಯಕುಸಿದೇ ಹೋಗಿತ್ತು. ಸುಮಾರು ಐದು ವರ್ಷಗಳ ನಂತರ ಈಗ ಮತ್ತೆ ಆರ್ಥಿಕ ಚೇತರಿಕೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಣ ಚಲಾವಣೆ ಏರಿಕೆ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಈ ಸಾಲಿನ ವರದಿಯಲ್ಲಿ ಹೇಳಿಕೊಂಡಿದೆ. ನೋಟು ರದ್ದತಿಯ ಕ್ರಮದಿಂದ ಜನರ ನಡುವಿನ ಹಣದ ವಹಿವಾಟು ತೀರ ಕುಸಿತಕಂಡಿತ್ತು.
ಆರ್‌ಬಿಐ ಪ್ರಕಾರ 2016ರ ದೀಪಾವಳಿಯ ಸಂದರ್ಭದಲ್ಲಿ ನಗದು ವಹಿವಾಟಿನ ಪ್ರಮಾಣ ಕೇವಲ 10.33ಲಕ್ಷ ಕೋಟಿ ಇತ್ತು. ಈ ಬಾರಿ ಅಂದರೆ 2021ರ ರ ದೀಪಾವಳಿಯ ಹೊಸ್ತಿಲಲ್ಲಿ ನಗದು ವಹಿವಾಟಿನ ಪ್ರಮಾಣ 28.30ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ, 57.48ರಷ್ಟು ಹೆಚ್ಚಾಗಿದೆ. ಇದು ಜನರ ಆರ್ಥಿಕ ಸ್ಥಿತಿ ದಿನೇ ದಿನೇ ಏರುತ್ತಿರುವುದರ ಸೂಚ್ಯಂಕ ಎನಿಸಿದೆ.
ಕಳೆದ ದೀಪಾವಳಿಯ ಸಂದರ್ಭದಲ್ಲಿ ಅಂದರೆ, 2020ರಲ್ಲಿ ನಗದು ವಹಿವಾಟಿನ ಪ್ರಮಾಣ 15.582 ಲಕ್ಷ ಕೋಟಿಯಾಗಿತ್ತು. ಹೀಗೆ, ವರ್ಷದಿಂದ ವರ್ಷಕ್ಕೆ ಶೇ. 8.5ರಷ್ಟು ಏರಿಕೆಯಾಗುತ್ತಾ ಈಗ ಶೇ.57ಕ್ಕೆ ಮುಟ್ಟಿದೆ ಎಂದು ಆರ್‌ಬಿಐ ಹೇಳಿಕೊಂಡಿದೆ. ನೋಟ್ ರದ್ದತಿಯ ನಂತರ ಡಿಜಿಟಲ್ ವಹಿವಾಟಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತುಕೊಡಲು ಶುರುಮಾಡಿತು. ಇದರ ಮೂಲ ಉದ್ದೇಶ ಕಡಿಮೆ ನಗದ ರಹಿತ ಸಮಾಜ ನಿರ್ಮಾಣ ಮಾಡುವುದು. ಹೀಗಾಗಿ, ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿನಿಂದ ನಗದು ವಾಪಸಾತಿಯ ಮೇಲೆ ಹಲವು ಮಿತಿಗಳನ್ನು ಏರಿತು. ಇದರ ಮಧ್ಯೆಯೂ ಜನರ ಬಳಿ ನಗದು ಓಡಾಟ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ.
ಈ ಪ್ರಮಾಣದ ನಗದು ಚಲಾವಣೆಗೆ ಲಾಕ್‌ಡೌನ್ ಕೂಡ ಕಾರಣ ಎನ್ನಬಹುದು. ಪ್ರಪಂಚದಾದ್ಯಂತ ಫೆಬ್ರವರಿ 2020ರಂದು ಲಾಕ್ ಡೌನ್ ಘೋಷಣೆಯಾಯಿತು. ಮಾರ್ಚ್ ತಿಂಗಳಲ್ಲಿ ಭಾರತ ಸರ್ಕಾರ ಲಾಕ್‌ಡೌನ್ ಘೋಷಿಸಿತು. ಈ ಸಂದರ್ಭದಲ್ಲಿ ಜನ ದಿನ ನಿತ್ಯದ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಬ್ಯಾಂಕಿನಿಂದ ಹಣವನ್ನು ವಿತ್ ಡ್ರಾ ಮಾಡಿಕೊಂಡು ಮನೆಯಲ್ಲಿ ಇರಿಸಿಕೊಳ್ಳಲು ಮುಗಿಬಿದ್ದರು. ಇದರಿಂದ ಕೂಡ ವಹಿವಾಟು ಹೆಚ್ಚಿರಬಹುದು ಎನ್ನಲಾಗಿದೆ.
ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಆರ್ ಬಿಐ, ಜನರ ಬಳಿ ಚಲಾವಣೆಯಾಗುತ್ತಿರುವ ಹಣ, ದೇಶದಲ್ಲಿನ ಒಟ್ಟಾರೆ ಚಲಾವಣೆಯ ಹಣದಲ್ಲಿ ಬ್ಯಾಂಕ್ ಗಳು ತಮ್ಮ ಪಾಲನ್ನು ಕಡಿತ ಗೊಳಿಸಿದ ನಂತರ ಉಳಿದದ್ದು ಎಂದು ಹೇಳಿಕೆ ನೀಡಿದೆ. ಕೆಲವು ಆರ್ಥಿಕ ತಜ್ಞರು, ಈ ರೀತಿಯ ನಗದ ಚಲಾವಣೆಯ ಅಂಕಿಅಂಶಗಳು ಯಾವತ್ತೂ ವಾಸ್ತವ ಆರ್ಥಿಕ ಸ್ಥಿತಿಯನ್ನು ತಿಳಿಸೋದಿಲ್ಲ. ಯಾವ ಪ್ರಮಾಣದಲ್ಲಿ ಜಿಡಿಪಿ ಪ್ರಮಾಣ ಏರಿಳಿತವಾಗಿದೆ ಅನ್ನೋದೇ ಮುಖ್ಯ ಎನ್ನುತ್ತಾರೆ.
ನೋಟು ರದ್ದತಿಯಾದ ನಂತರ ದೇಶದ ಜಿಡಿಪಿಯಲ್ಲಿ ಶೇ.1.5ರಷ್ಟು ಕುಸಿತ ಕಂಡಿತು. ಈ ಸಂದರ್ಭದಲ್ಲಿ ಸಣ್ಣ ಉದ್ಯಮಗಳಿಗೆ ಭಾರಿ ಹೊಡೆತ ಬಿದ್ದಿತ್ತು. ನಗದ ಚಲಾವಣೆ ಇಲ್ಲದೆ ಒದ್ದಾಡಿದ್ದರು. ಈ ಮಧ್ಯೆ ಡಿಜಿಟಲ್ ವಹಿವಾಟು ಹೆಚ್ಚಾಗುತ್ತಿದ್ದು, ಪ್ರಸ್ತುತ ಜನರಲ್ಲಿ ನಗದು ವಹಿವಾಟು ಹಾಗೂ ಜಿಡಿಪಿ ಏರಿಕೆ ಒಟ್ಟೊಟ್ಟಿಗೆ ಆಗುತ್ತಿದೆ ಎಂದು ಆರ್‌ಬಿಐ ಹೇಳಿದೆ.
After 5 year since note ban public have money
ಇದನ್ನೂ ಓದಿ: ಗ್ಯಾಸ್ ಸಬ್ಸಿಡಿ ಹಣ ಬರುತ್ತಿಲ್ಲವೇ? ಹಾಗಿದ್ರೆ, ಈ ಕೆಲಸ ಮಾಡಿ, ಖಾತೆಗೆ ಹಣ ಬರುತ್ತದೆ.
Discussion about this post