ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ 12 ನೇ ದಿನವಾದ ಇಂದು ರಾಜ್ ಕುಟುಂಬದವರು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಆಯೋಜಿಸಿದ್ದರು. ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿ ಮೈದಾನದಲ್ಲಿ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
ಈ ವೇಳೆ ಪುನೀತ್ ಪತ್ನಿ ಅಶ್ವಿನಿ, ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಊಟ ಬಡಿಸಿದರು. ಅಭಿಮಾನಿಗಳಿಗೆ ಬಾಳೆ ಎಲೆಯಲ್ಲಿ ವಿವಿಧ ಖಾದ್ಯ ಬಡಿಸಲಾಯಿತು. ನಾನ್ ವೆಜ್ ಪ್ರಿಯರಿಗೆ ಚಿಕನ್ ಚಾಪ್ಸ್, ಘೀ ರೈಸ್, ಚಿಕನ್ ಕಬಾಬ್, ಕೋಳಿ ಮೊಟ್ಟೆ, ಅಕ್ಕಿ ಪೇಣಿ, ಪಾಯಸ, ಅನ್ನ ಮತ್ತು ರಸಂ ಬಡಿಸಲಾಯಿತು.
ಇನ್ನು ಸಸ್ಯಹಾರಿಗಳಿಗೆ ಘೀ ರೈಸ್, ಕುರ್ಮ, ಆಲೂಗೆಡ್ಡೆ ಕಬಾಬ್, ಬೇಬಿ ಕಾರ್ನ್ ಲಾಲಿ ಪಪ್, ಪಾಯಸ ಹಾಗೂ ಮಸಾಲೆ ವಡೆ, ಅನ್ನ ಮತ್ತು ರಸಂನ್ನು ಬಡಿಸಲಾಯಿತು. ಸುಮಾರು 25 ಸಾವಿರಕ್ಕೂ ಮೀರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಮಾತನಾಡಿದ ಶಿವರಾಜ್ ಕುಮಾರ್ ಅವರು, ಈ ರೀತಿಯ ಸಂದರ್ಭದಲ್ಲಿ ಊಟ ಹಾಕಬೇಕಾಯಿತಲ್ಲ ಎಂಬ ನೋವಿದೆ. ಆದರೆ ಇದೇ ರೀತಿ ನೆರವೇರಬೇಕು ಎಂಬ ದೇವರ ಇಚ್ಚೆ ಇತ್ತೇನೊ ತಿಳಿಯದು ಎಂದು ಹೇಳಿದರು.
Anna Santharpana























Discussion about this post