ಬೆಂಗಳೂರು : ಬಾಕಿ ತೆರಿಗೆ ಪಾವತಿ ಮಾಡದ ಮಂತ್ರಿ ಮಾಲ್ʼಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮತ್ತೆ ಬೀಗ ಜಡಿದಿದೆ. ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿರುವ ಮಂತ್ರಿ ಮಾಲ್ 2018ರ ಬಳಿಕ ಆಸ್ತಿ ತೆರಿಗೆ ಕಟ್ಟಿರಲಿಲ್ಲ.
22 ಕೋಟಿ ತೆರಿಗೆ ಬಾಕಿಯಿದ್ರು ಕೇರ್ ಮಾಡದ ಮಂತ್ರಿ ಮಾಲ್‌ಗೆ ಈ ಹಿಂದೆ ಒಮ್ಮೆ ಬೀಗ ಜಡಿಯಲಾಗಿತ್ತು. ಅದಾದ ಬಳಿಕ ಎಚ್ಚೆತ್ತುಕೊಂಡ ಮಂತ್ರಿ ಮಾಲ್ 5 ಕೋಟಿ ತೆರಿಗೆ ಸರ್ಕಾರಕ್ಕೆ ಸಂದಾಯ ಮಾಡಿತು.
ಅಮೇಲೆ ಬಿಬಿಎಂಪಿ, ಪೂರ್ಣ ತೆರಿಗೆ ಸಂದಾಯಕ್ಕೆ ಮಂತ್ರಿಮಾಲ್‌ಗೆ ಸಮಾಯವಕಾಶವೂ ನೀಡಿತ್ತು. ಆದ್ರೆ, ಮತ್ತೆ ಮಂತ್ರಿ ಮಾಲ್ ತೆರಿಗೆ ಕಟ್ಟಲು ಹಿಂದೇಟು ಹಾಕಿದೆ. ಹಾಗಾಗಿ ಇಂದು ಮಾಲ್‌ಗೆ ಮತ್ತೆ ಬೀಗ ಜಡಿದಿದೆ.
ಇದನ್ನೂ ಓದಿ: Corona: ರಾಜ್ಯದಲ್ಲಿ ಹೊಸದಾಗಿ 171 ಕೊರೋನಾ ಪ್ರಕರಣ ಪತ್ತೆ 255 ಮಂದಿ ಗುಣಮುಖ
ಇದನ್ನೂ ಓದಿ: Air pollution: ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ
Mantri Mall BBMP locked again
























Discussion about this post