ಆಹಾರ ಶೈಲಿ ನೆಟ್ಟಗಿದ್ದರೆ ವೈದ್ಯರು ಮತ್ತು ಔಷಧದಿಂದ ದೂರ ಇರಬಹುದು ಎಂಬುದು ನಾಣ್ಣುಡಿ.ಆಯುರ್ವೇದಿಯ ಮೌಲ್ಯವಿರುವ ದಾಲ್ಚಿನ್ನಿ ಚಹಾ ಸೇವನೆಯಿಂದ ಅನೇಕ ಕಾಯಿಲೆಗಳಿಂದ ದೂರವಾಗಬಹುದು. ಈ ಚಹಾ ಭಾರತೀಯರ ಮನೆಯಲ್ಲಿ ಚಳಿಗಾಲದಲ್ಲಿ ಮಾಡುವ ಕಷಾಯದಂತೆಯೇ ಇದೆ. ಇಂದು ಪ್ರಕೃತಿ ಚಿಕಿತ್ಸಾ ದಿನದ ಹಿನ್ನೆಲೆಯಲ್ಲಿ ಈ ಕುರಿತು ಒಂದಿಷ್ಟು ಮೆಲುಕು.
ಅನೇಕರಿಗೆ ತಾಸು ತಾಸಿಗೆ ಚಹಾ ಕುಡಿಯುವ ಚಟ ಇರುತ್ತದೆ. ಇಂಥವರು ಸಾಧಾರಣ ಚಹಾ ಕುಡಿಯುವುದನ್ನು ಬಿಟ್ಟು ಔಷಧೀಯ ಗುಣವಿರುವ ದಾಲ್ಚಿನ್ನಿ ಚಹಾ ಸೇವನೆ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ದಾಲ್ಚಿನ್ನಿ ಚಹಾದಿಂದಾಗುವ ಪ್ರಯೋಜನಗಳನ್ನು ಕ್ಲಿನಿಕಲ್ ಪೋಷಕಾಂಶ ತಜ್ಞೆ ತಾರಾ ಕೋಲ್ಮನ್ ವಿವರಿಸಿದ್ದಾರೆ.
ದಾಲ್ಚಿನ್ನಿಯ ಒಂದು ತುಂಡನ್ನು ಒಂದು ಕಪ್ ನೀರಿನಲ್ಲಿ 15 ನಿಮಿಷ ಕುದಿಸಿಕೊಳ್ಳಿ, ಈ ನೀರಿಗೆ ಒಂದು ಹೋಳು ನಿಂಬೆ ಹಣ್ಣನ್ನು ಹಿಂಡಿ, ಒಗಚು ಚಹಾ ಇಷ್ಟಪಡದವರು ತುಸು ಜೇನುತುಪ್ಪ ಮತ್ತು ಹಾಲನ್ನು ಬೆರೆಸಿಕೊಳ್ಳಬಹುದು. ಅಂಗಡಿಗಳಲ್ಲಿ ಈಗ ದಾಲ್ಚಿನ್ನಿ ಸ್ವಾದದ ಟೀ ಡಿಪ್ ಬ್ಯಾಗ್ಗಳು ಸಿಗುತ್ತವೆ. ಸ್ವಾದಿಷ್ಟವಾದ ಈ ಬಿಸಿ ಪೇಯದ ಸೇವನೆಯಿಂದ ದೇಹದಲ್ಲಿ ಜಲ ಸಂಚಯನ ಹೆಚ್ಚಿ ಉರಿಯೂತ ಕಡಿಮೆ ಆಗುತ್ತದೆ.
ದಾಲ್ಚಿನ್ನಿ ಚಹಾದಿಂದಾಗುವ ಐದು ಪ್ರಯೋಜನಗಳು
1. ಉತ್ಕೃಷ್ಟವಾಗಿ ಪಾಲಿಫಿನಾಲ್ ಆ್ಯಂಟಿಆ್ಯಕ್ಸಿಡೆಂಟ್ ಇರುವುದರಿಂದ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಜೀವಕೋಶಗಳ ಸ್ವಸ್ಥವಾಗಿರುತ್ತವೆ.
2. ಉರಿಯುತದ ತೊಂದರೆ ಶಮನಕ್ಕೆ ದಾಲ್ಚಿನ್ನಿ ರಾಮಬಾಣ. ಅದರಲ್ಲೂ ಶ್ರೀಲಂಕಾದಲ್ಲಿ ಬೆಳೆಯುವ ದಾಲ್ಚಿನ್ನಿಯಲ್ಲಿ ಹೆಚ್ಚು ಆ್ಯಂಟಿ ಆ್ಯಕ್ಸಿಡೆಂಟ್ ಇರುತ್ತದೆ.
3. ಮಧುಮೇಹವನ್ನು ನಿಯಂತ್ರಿಸಲು ದಾಲ್ಚಿನ್ನಿ ಚಹಾ ಸಹಕಾರಿ. ದಾಲ್ಚಿನ್ನಿರುವ ಇನ್ಸುಲಿನ್ ಸಕ್ಕರೆ ಮಟ್ಟವನ್ನು ಸಮತೋಲನ ಮಾಡುತ್ತದೆ. ಚಹಾ ಸೇವಿಸಿದ 12 ತಾಸು ಈ ಇನ್ಸುಲಿನ್ ಪರಿಣಾಮಕಾರಿಯಾಗಿರುತ್ತದೆ.
4. ದಾಲ್ಚಿನ್ನಿಯನ್ನು ನೀರಿನಲ್ಲಿ ಕುದಿಸಿ ಸೇವಿಸುವುದರಿಂದ ಪೋಷಕಾಂಶಗಳು ಬಹುಬೇಗ ದೇಹದ ನಾನಾ ಕೋಶಗಳಿಗೆ ತಲುಪುತ್ತದೆ. ಇದರಿಂದ ಜೀರ್ಣಾಂಗವ್ಯೂಹದ ಕಾರ್ಯ ಕ್ಷಮತೆ ಹೆಚ್ಚುತ್ತದೆ. ಹೀಗಾಗಿ ಪಚನಕ್ರಿಯೆ ಸಲೀಸು.
5. ಪುರುಷರು ನಿತ್ಯ ಹದಿನೈದೂವರೆ ಕಪ್ ಮತ್ತು ಮಹಿಳೆಯರು ಹನ್ನೊಂದೂವರೆ ಕಪ್ ದಾಲ್ಚಿನ್ನಿಯ ಚಹಾ ಕುಡಿಯಬಹುದು ಎಂದು ಅಮೆರಿಕದ ರಾಷ್ಟ್ರೀಯ ವಿಜ್ಞಾನ, ಎಂಜಿನಿಯರಿಂಗ್ ಮತ್ತು ಔಷಧ ಅಕಾಡೆಮಿ ಶಿಾರಸು ಮಾಡಿದೆ.
ಇದನ್ನೂ ಓದಿ: Health: ವ್ಯಾಯಾಮಕ್ಕೂ ಮಾನಸಿಕ ಆರೋಗ್ಯಕ್ಕೂ ಸಂಬಂಧವಿರುವುದನ್ನು ನಿರೂಪಿಸಿದ ಅಧ್ಯಯನ
Discussion about this post