ನಿಧಾನವಾಗಿ ಹರಡುತ್ತಿದ್ದ ಓಮಿಕ್ರಾನ್ ವೇಗ ಪಡೆಯುತ್ತಿರುವುದು ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಓಮಿಕ್ರಾನ್ ಲಕ್ಷಣಗಳೇನು ಎಂದು ಎಲ್ಲರಲ್ಲೂ ಕೊಂಚ ಆತಂಕಭರಿತ ಕುತೂಹಲ ಇದ್ದೇ ಇರುತ್ತದೆ. ನಾವಿಲ್ಲಿ ಓಮಿಕ್ರಾನ್ ಲಕ್ಷಣಗಳನ್ನು ವಿವರಿಸುವ ಪ್ರಯತ್ನ ಮಾಡಿದ್ದೇವೆ. ಆರೋಗ್ಯದ ಕುರಿತು ನೀವು ಅನುಸರಿಸುವ ಯಾವುದೇ ಕ್ರಮ, ಪರಿಣಿತ ವೈದ್ಯರ ಸಲಹೆ, ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಆಧರಿಸಿಯೇ ತೆಗೆದುಕೊಳ್ಳಬೇಕು.
ಕೆಮ್ಮು: ಸಹಜವಾಗಿ ದೇಹದಲ್ಲಿ ಕಫ ಸಂಗ್ರಹಗೊಂಡಾಗ ಕೆಮ್ಮು ಕಾಣಿಸಿಕೊಳ್ಳುತ್ತದೆ. ಆದರೆ ಸದ್ಯ ಕಫದಿಂದ ಬಳಲುತ್ತಿರುವವರನ್ನು ಪರೀಕ್ಷೆಯಲ್ಲಿ ಅಂತವರಿಗೆ ಕೊವಿಡ್ ರೂಪಾಂತರಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ಆದ್ದರಿಂದ ಕೆಮ್ಮು ಓಮಿಕ್ರಾನಿನ ಮೊದಲ ಲಕ್ಷಣವಾಗಿದೆ ಎಂದುರ ವರದಿಗಳು ತಿಳಿಸಿವೆ. ನಿಮಗೆ 2 ದಿನಗಳಿಗಿಂತ ಹೆಚ್ಚು ಕಾಲ ಕೆಮ್ಮು ಮುಂದುವರೆದಲ್ಲಿ ಕೂಡಲೇ ತಡ ಮಾಡದೇ ವೈದ್ಯರನ್ನು ಸಂಪರ್ಕಿಸುವುದು ಒಳಿತು ಎಂದು ಪರಿಣಿತರು ತಿಳಿಸಿದ್ದಾರೆ.
ಓಮಿಕ್ರಾನ್‌ನ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು, ಸುಸ್ತು, ರುಚಿ ಅಥವಾ ವಾಸನೆಯ ನಷ್ಟ. ಅಂದರೆ ಯಾವುದೇ ವಸ್ತು, ತಿಂಡಿಯ ವಾಸನೆ ಬರದಿರುವುದು.
ಸ್ನಾಯು ನೋವು: ಒಂದಾನುವೇಳೇ ನೀವು ಸ್ನಾಯು ನೋವಿನಿಂದ ಬಳಲುತ್ತಿದ್ದರೆ ಅದು ಸಹ ಓಮಿಕ್ರಾನ್‌ನ ಲಕ್ಷಣವಾಗಿರಬಹುದು. COVID-19 ಪರೀಕ್ಷೆ ಮಾಡಿಸಿದ 58% ಜನರು ಈ ರೋಗಲಕ್ಷಣವನ್ನು ವರದಿ ಮಾಡಿದ್ದಾರೆ.
ಗಂಟಲು ನೋವು: ಆಗಾಗ ಬದಲಾಗುತ್ತಿರುವ ಹವಾಮಾನ ಗಂಟಲಿನ ನೋವಿಗೆ ಕಾರಣವಾಗಿರಬಹುದು. ಆದರೆ ಇದು ಸಹ ಓಮಿಕ್ರಾನ್ ರೂಪಾಂತರದ ಸಾಮಾನ್ಯ ಲಕ್ಷಣವಾಗಿದೆ.
ಮೂಗಿನಲ್ಲಿ ಸ್ರವಿಕೆ: ಉಸಿರುಕಟ್ಟಿಕೊಳ್ಳುವ ಅಥವಾ ಮೂಗಿನಲ್ಲಿ ಸ್ರವಿಕೆ ಕಂಡುಬರುವುದು ಓಮಿಕ್ರಾನ್‌ನ ಮತ್ತೊಂದು ಸಾಮಾನ್ಯ ಲಕ್ಷಣವಾಗಿದೆ. ಮೂಗಿನಲ್ಲಿ ಸ್ರಾವ, ತಲೆನೋವು ಮತ್ತು ದಣಿವಿನಂತಹ ಶೀತ ಕಂಡುಬಂದಲ್ಲಿ ಕೋವಿಡ್‌ನ ಓಮಿಕ್ರಾನ್ ರೂಪಾಂತರ ತಗುಲಿರುವ ಸಾಧ್ಯತೆಯೂ ಇದೆ.
ಆಯಾಸ: ಓಮಿಕ್ರಾನ್ ಸೋಂಕು ಅತಿಯಾದ ಆಲಸ್ಯಕ್ಕೆ ಕಾರಣವಾಗಬಹುದು. ನೀವು ಶೀತ, ಕೆಮ್ಮು ಮತ್ತು ಆಯಾಸದಂತಹ ರೋಗಲಕ್ಷಣಗಳನ್ನು ಹೊಂದಿದ್ದರೆ ದಯವಿಟ್ಟು ಈಕೂಡಲೇ ತಜ್ಞ ವೈದ್ಯರನ್ನು ಭೇಟಿಯಾಗಿ. ಪದೇಪದೇ ಆಯಾಸವಾಗುವುದು, ಅತಿಯಾದ ಕೆಲಸ ಮಾಡದೆಯೂ ಸುಸ್ತು ಕಾಣಿಸಿಕೊಳ್ಳುವುದು ಸಹ ಕೊವಿಡ್ ರೂಪಾಂತರಿ ಓಮಿಕ್ರಾನ್‌ನ ಲಕ್ಷಣ ಆಗಿರಬಹುದು ಎನ್ನುತ್ತಾರೆ ವೈದ್ಯರು.
ಜ್ವರ: ಶೀತದ ಭಾವನೆ ಮತ್ತು ಜ್ವರವು ಹೊಸ ಕೊವಿಡ್ ರೂಪಾಂತರಿ ಓಮಿಕ್ರಾನ್ ಸೋಂಕಿನ ಮತ್ತೊಂದು ಸಾಮಾನ್ಯ ಲಕ್ಷಣವಾಗಿದೆ.
ಇದನ್ನೂ ಓದಿ: ಉತ್ತಮ ಆರೋಗ್ಯಕ್ಕೆ ಪ್ರೋಟೀನ್‌ಯುಕ್ತ ಬೇಳೆಗಳು
Discussion about this post