ಚೆನ್ನೈ: ಐಪಿಎಲ್ 2022ರ ವೇಳಾಪಟ್ಟಿಯನ್ನು ಬಿಸಿಸಿಐ ಶೀಘ್ರದಲ್ಲೇ ಪಕಟಿಸಲಿದ್ದು, ಐಪಿಎಲ್ 15 ನೇ ಸೀಸನ್‌ನ ವೇಳಾಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ.
ಏಪ್ರಿಲ್ 2ರಂದು ಚೆನ್ನೈ ನ ಚಪಾಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಪ್ರಾರಂಭವಾಗುವ ಸಾಧ್ಯತೆಯಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ ಮುಂದಿನ ವರ್ಷದ ಋತುವಿನಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಲೀಗ್ ಇನ್ನಷ್ಟು ರೋಚಕವಾಗಲಿದೆ.
ಪ್ರತಿ ಸೀಸನ್ ನಲ್ಲಿ ಈವರೆಗೆ 60 ಪಂದ್ಯಗಳು ನಡೆಯುತ್ತಿದ್ದವು. ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಪಂದ್ಯಗಳ ಸಂಖ್ಯೆ: 74 ಕ್ಕೆ ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಸೀಸನ್ 60 ದಿನಗಳ ಕಾಲ ನಡೆಯಲಿದೆ ಎಂದು ವರದಿ ಹೇಳಿದೆ. ಜೂನ್ 4 ಅಥವಾ ಜೂನ್ 5 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ
Schedule for IPL 2022
Discussion about this post