ಬೆಂಗಳೂರು: ಖಾಸಗಿ ಕ್ಷೇತ್ರದಲ್ಲಿ ಭಾರತದ ಮುಂಚೂಣಿ ಜೀವೇತರ ವಿಮಾ ಸಂಸ್ಥೆಯಾದ ಎಚ್ಡಿಎಫ್ಸಿ ಎರ್ಗೊ ಜನರಲ್ ಇನ್ಶುರೆನ್ಸ್ ಕಂಪನಿಯು, ರೈತರು ತಮ್ಮ ಸ್ಥಳೀಕೃತ ಮತ್ತು ಇಳುವರಿ ನಂತರದ ಕ್ಲೇಮುಗಳ ಕುರಿತು ಸಂಸ್ಥೆಗೆ ಸೂಚಿಸಲು ನೆರವಾಗುವುದಕ್ಕಾಗಿ ವೆಬ್ ಆಧಾರಿತ ಸ್ವ-ಸಹಾಯ ಪೋರ್ಟಲ್ ಆರಂಭಿಸಿದೆ. ಎಚ್ಡಿಎಫ್ಸಿ ಎರ್ಗೊ ಭಾರತ ಸರ್ಕಾರವು ಪ್ರಾರಂಭಿಸಿರುವ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ (PMFBY), 6.9 ದಶಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ವಿಮಾ ಕವರೇಜ್ ಒದಗಿಸುವ ಮುಂಚೂಣಿ ಸಂಸ್ಥೆಯಾಗಿದೆ.
PMFBYದ ಕಾರ್ಯಾಚರಣೆ ಮಾರ್ಗಸೂಚಿಗಳು, ರೈತರು ತಮ್ಮ ಭೂಮಿಯಲ್ಲಿ ಮುಳುಗಡೆ, ಆಲಿಕಲ್ಲು, ಭೂಕುಸಿತದಿಂದಾಗಿ ಏರ್ಪಡುವ ನಷ್ಟಗಳಿಗೆ ತಮ್ಮ ಕ್ಲೇಮುಗಳನ್ನು ಸೂಚಿಸುವುದನ್ನು ಕಡ್ಡಾಯಗೊಳಿಸಿದೆ. ಇತ್ತೀಚಿನವರೆಗೂ ಈ ಕ್ಲೇಮುಗಳನ್ನು ಎಚ್ಡಿಎಫ್ಸಿ ಎರ್ಗೊದ ಕಾಲ್ಸೆಂಟರ್ಗಳು, ಶಾಖೆಗಳು ಅಥವಾ PMFBYಪೋರ್ಟಲ್/ಅರ್ಜಿಯ ಮೂಲಕ ಸಲ್ಲಿಸಲಾಗುತ್ತಿತ್ತು. ಆದರೆ, PMFBYಗೆ ಹೆಚ್ಚುತ್ತಿರುವ ರೈತರ ನೋಂದಣಿಗಳ ಸಂಖ್ಯೆಯಿಂದಾಗಿ ಮತ್ತು ವಿಮೆಯ ಕುರಿತು ಹೆಚ್ಚುತ್ತಿರುವ ಜಾಗೃತಿಯಿಂದಾಗಿ ಅನೇಕರು ತಮ್ಮ ಕ್ಲೇಮುಗಳನ್ನು ನೋಂದಾಯಿಸಲು ಸಾಧ್ಯವಾಗದೆ ಅತೃಪ್ತರಾಗಿದ್ದರು.
ಈ ಸವಾಲು ಎಚ್ಡಿಎಫ್ಸಿ ಎರ್ಗೊ, ವೆಬ್-ಆಧಾರಿತ ಸ್ವ-ಸಹಾಯ ಪೋರ್ಟಲ್ ಮೂಲಕ ಕ್ಲೇಮು ಸೂಚನೆಯನ್ನು ಸರಳ ಹಾಗೂ ಸುಲಭಗೊಳಿಸಲು ತಂತ್ರಜ್ಞಾನ-ಆಧಾರಿತ ಪರಿಹಾರದ ಕುರಿತು ಯೋಜಿಸುವಂತೆ ಮಾಡಿತು. ಈ ಪೋರ್ಟಲ್ ಮೂಲಕ ಕ್ಲೇಮನ್ನು ಸೂಚಿಸಲು ರೈತರು ತಮ್ಮ PMFBY ಅರ್ಜಿ ಸಂಖ್ಯೆ ಅಥವಾ ಬ್ಯಾಂಕ್ ಖಾತೆಯ ವಿವರಗಳನ್ನು ಹಾಕಿ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 6 ನಿರ್ದಿಷ್ಟ ವಿವರಗಳನ್ನು ಭರ್ತಿ ಮಾಡಿದರ ಸಾಕು. ಇದಕ್ಕೆ ಬೇಕಾಗುವ ಸಮಯ ಕೇವಲ ಒಂದು ನಿಮಿಷವಷ್ಟೆ. ಈ ಸ್ವ-ಸಹಾಯ ಪೋರ್ಟಲ್, ರೈತರಿಗೆ ಈ ಕೆಳಕಂಡ ಹೆಚ್ಚುವರಿ ಪ್ರಯೋಜನಗಳನ್ನು ಕೂಡ ಒದಗಿಸುತ್ತದೆ
ಯೋಜನೆಗಳು
• PMFBY ಅರ್ಜಿ ಸಂಖ್ಯೆಯೊಂದಿಗೆ ತಕ್ಷಣವೇ ಕ್ಲೇಮನ್ನು ಮ್ಯಾಪ್ ಮಾಡುವ ಮೂಲಕ ಸಮಯಕ್ಕೆ ಸರಿಯಾದ ಪರಿಹಾರ
• ರೈತರಿಗಾಗಿ ಒಂದು ನಿಮಿಷದ ಕ್ಲೇಮು ನೋಂದಣಿ ಮೂಲಕ ಗ್ರಾಹಕ ಸೌಕರ್ಯ
• ತಕ್ಷಣದ ಕ್ಲೇಮು ಸಂಖ್ಯೆಯ ಉತ್ಪತ್ತಿ ಮತ್ತು ರೈತರಿಗೆ ಎಸ್ಎಮ್ಎಸ್ ಖಾತರಿಯಿಂದಾಗಿ ಆನಂದ
ಸ್ವ-ಸಹಾಯ ಪೋರ್ಟಲ್ ನ ಪರಿಚಯದ ಬಗ್ಗೆ ಮಾತನಾಡುತ್ತಾ, ಎಚ್ಡಿಎಫ್ಸಿ ಎರ್ಗೊ ಜನರಲ್ ಇನ್ಶುರೆನ್ಸ್ ಕಂಪನಿಯ ಉಪ ವ್ಯವಸ್ಥಾಪಕ ನಿರ್ದೇಶಕ ಅನುಜ್ ತ್ಯಾಗಿ “ಎಲ್ಲಾ ಕ್ಲೇಮುಗಳನ್ನು ಪ್ರಕ್ರಿಯೆಗೊಳಪಡಿಸಿ ಗ್ರಾಹಕ ವಿಚಾರಣೆಗಳಿಗೆ ಪರಿಹಾರಗಳನ್ನು ಒದಗಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದ್ದು ಒಬ್ಬ ಡಿಜಿಟಲ್-ಮೊದಲು ವಿಮಾಸಂಸ್ಥೆಯಾಗಿ ನಾವು ನಮ್ಮ ಎಲ್ಲಾ ಪರಿಹಾರಗಳಲ್ಲೂ ತಂತ್ರಜ್ಞಾನದ ಮಿಶ್ರಣವಿರುವುದನ್ನು ಖಾತರಿಪಡಿಸುತ್ತೇವೆ. ನಾವು ಮಾಡುವ ಎಲ್ಲದರಲ್ಲೂ ತಂತ್ರಜ್ಞಾನದ ಸಂಯೋಜನೆಯು ನಮ್ಮ ಗ್ರಾಹಕರ ಕ್ಲೇಮು ಇತ್ಯರ್ಥಗಳು ಕ್ಷಿಪ್ರಗತಿಯಲ್ಲಿ ನೆರವೇರಲ್ಪಡುವುದನ್ನು ಖಾತರಿಪಡಿಸುತ್ತವೆ. ಈ ಬಳಕೆದಾರ ಸ್ನೇಹಿಯಾದ ಪೋರ್ಟಲ್ ನ ಪರಿಚಯದೊಂದಿಗೆ ನಾವು ಕ್ಲೇಮು ಸಲ್ಲಿಕೆಯನ್ನು ಸರಳಗೊಳಿಸಿ ಕ್ರಮವಾಹಿನಿಗೊಳಿಸುವುದರ ಜೊತೆಗೆ ರೈತರ ಟ್ರ್ಯಾಕಿಂಗ್ ಪ್ರಕ್ರಿಯೆಯನ್ನೂ ಸರಳಗೊಳಿಸಿದ್ದೇವೆ.” ಎಂದರು.
ಡಿಜಿಟಲ್-ಮೊದಲು ಸಂಸ್ಥೆಯಾದ ಎಚ್ಡಿಎಫ್ಸಿ ಎರ್ಗೊ ದೇಶಾದ್ಯಂತ ಇರುವ ಗ್ರಾಹಕರಿಗೆ ಡಿಜಿಟಲ್ ಮೂಲಕವೇ ನೆರವು ಒದಗಿಸುವುದರ ಮೇಲೆ ಗಮನಕೇಂದ್ರೀಕರಿಸಿ ಅವರ ಸೇವೆಗಳು ಸುಲಭವಾಗಿ ಲಭ್ಯವಾಗುವುದನ್ನು ಮತ್ತು ಅರ್ಥಮಾಡಿಕೊಳ್ಳುವಂತಿರುವುದನ್ನು ಖಾತರಿಪಡಿಸುತ್ತದೆ. ಪ್ರಸ್ತುತ ಈ ಸ್ವ-ಸಹಾಯ ಪೋರ್ಟಲ್ ಮೂಲಕ 33% ಕ್ಲೇಮುಗಳನ್ನು ನೋಂದಾಯಿಸಲಾಗಿದೆ. ರೈತರು ಈ ಕೆಳಕಂಡ ಲಿಂಕ್ಗೆ ಲಾಗ್ಆನ್ ಆಗುವ ಮೂಲಕ ಸ್ವ-ಸಹಾಯ ಪೋರ್ಟಲ್ ಗೆ ಪ್ರವೇಶಾವಕಾಶ ಪಡೆದುಕೊಳ್ಳಬಹುದು. ಲಿಂಕ್ ಇಲ್ಲಿದೆ: https://customersupport.hdfcergo.com/selfhelp/RABG_Claim.aspx
ಇದನ್ನೂ ಓದಿ: To protect the interests of the farmers: ರೈತರ ಹಿತರಕ್ಷಣೆಗೆ ಕಾಯ್ದೆ ರೂಪಿಸಲು ರಾಜ್ಯ ಸರಕಾರಗಳಿಗೆ ಸ್ವಾತಂತ್ರ್ಯವಿದೆ
Discussion about this post