ಹೊಸಕೋಟೆ : ಏಳನೇ ಹೊಸಕೋಟೆ ತೊಂಡೂರು ಕೃಷ್ಣ ದೇವಸ್ಥಾನದ ಸಮೀಪದ ತೋಡಿನ ಬಳಿ ಕಾಡಾನೆಯೊಂದರ ಪ್ರಸವದ ವೇಳೆ ನೀರಿನೊಳಗೆ ಬಿದ್ದಿದ್ದ ಮರಿಯಾನೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮೊದಲು ಪಟಾಕಿಯನ್ನು ಸಿಡಿಸಿ ತಾಯಿಯಾನೆಯನ್ನು ಪಕ್ಕದ ಕಾಡಿನೊಳಗೆ ಓಡಿಸಲಾಯಿತು.
ನಂತರ ತೋಡಿನ ನೀರಿನಲ್ಲಿದ್ದ ಮರಿಯಾನೆಯನ್ನು ಮೇಲಕ್ಕೆತ್ತಿ ತರಲಾಗಿ ಹಾರೈಕೆ ಮಾಡಿ ಕಾಡಿನ ಸಮೀಪ ತಾಯಿಯ ಆಗಮನಕ್ಕಾಗಿ ನಿಲ್ಲಿಸಲಾಗಿದೆ. ನಿರೀಕ್ಷೆಯಂತೆ ದೌಡಾಯಿಸಿದ ತಾಯಿಯಾನೆ ಕರುಳಬಳ್ಳಿಯನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಅಡವಿಯೊಳಗೆ ಪ್ರಯಾಣಿಸಿತು.
ಸ್ಥಳೀಯರ ಹಾಗೂ ಅರಣ್ಯ ಇಲಾಖೆಯ ಸಕಾಲಿಕ ಕ್ರಮದಿಂದಾಗಿ ಗಜಪ್ರಸವ ಪ್ರಹಸನ ಸುಖಾಂತ್ಯಗೊಂಡು ಬಿಗುಗೊಂಡಿದ್ದ ಗ್ರಾಮದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
Marianne’s rescue stuck in the water

























Discussion about this post