ಬೆಂಗಳೂರು: ಓಮಿಕ್ರಾನ್ ಕೊರೊನಾ ರೂಪಾಂತರ ವೈರಸ್ ತೀವ್ರತೆಯ ಕುರಿತಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಇಲಾಖೆ ಸಮಿತಿ ಸಭೆ ಮಾಡಲಾಗಿದೆ. ಸಭೆಯಲ್ಲಿ ವ್ಯಾಕ್ಸಿನೇಷನ್ ಕಡ್ಡಾಯವಲ್ಲ ಎಂದು ಚರ್ಚಿಸಲಾಗಿದೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಭೆಗೆ ಪೂರಕವಾಗಿ ಸಭೆ ಆಗಿದೆ. ಓಮಿಕ್ರಾನ್ ಹೊಸ ತಳಿ ನಿಯಂತ್ರಣದ ಬಗ್ಗೆ ಚರ್ಚೆ ಆಗಿದ್ದು, ಒಂದು ವೇಳೆ ವೈರಸ್ ಬಂದರೆ ಅದಕ್ಕೆ ಸಿದ್ಧತೆ ಹೇಗೆ ಇರಬೇಕು ಅಂತ ಚರ್ಚೆ ಮಾಡಿದ್ದೇವೆ. ವೈದ್ಯರು, ಆಸ್ಪತ್ರೆಗಳ ಸಿದ್ಧತೆ, ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಸಿದ್ಧತೆ ಬಗ್ಗೆ ಚರ್ಚೆ ಆಗಿದೆ.
ಮೊದಲು ಕ್ವಾರಂಟೈನ್ ಇತ್ತು, ಈಗ ಅದನ್ನ ಮತ್ತೆ ಜಾರಿ ಮಾಡುತ್ತೇವೆ. ವಿದೇಶದಿಂದ ಬರೋ ಎಲ್ಲರಿಗೂ RTPCR ಟೆಸ್ಟ್ ಮಾಡುತ್ತೇವೆ. ನೆಗೆಟಿವ್ ಬಂದರೆ ಮನೆಯಲ್ಲಿ ಒಂದು ವಾರ ಕ್ವಾರಂಟೈನ್ ಇರಬೇಕು ಎಂದು ಹೇಳಿದ್ದಾರೆ.
ರೋಗದ ಲಕ್ಷಣ ಇದ್ದರೆ 5ನೇ ದಿನ ಟೆಸ್ಟ್ ಮಾಡುತ್ತೇವೆ. ರೋಗದ ಲಕ್ಷಣ ಇಲ್ಲದೆ ಹೋದರೆ 7 ನೇ ದಿನ ಟೆಸ್ಟ್ ಮಾಡಿ ಹೊರಗೆ ಓಡಾಟ ಮಾಡಲು ಅವಕಾಶ ಕೊಡುತ್ತೇವೆ. ಟೆಲಿ ಮೆಡಿಸಿನ್, ಟೆಲಿ ಕೌನ್ಸಿಲಿಂಗ್ ಸಿದ್ಧತೆ ಮಾಡಿಕೊಳ್ಳುತ್ತೇವೆ.
ಚಿಕಿತ್ಸೆಗೆ ಯುನಿಫಾರ್ಮ್ ವ್ಯವಸ್ಥೆ ಮಾಡಲು ತಂಡ ರಚನೆ ಮಾಡಲಾಗುತ್ತದೆ. ಚಿಕಿತ್ಸೆ ಪ್ರೋಟೋ ಕಾಲ್‍ಗೆ ತಂಡ ರಚನೆಯಾಗಿದ್ದು, ಡಾ. ರವಿ ಅವರನ್ನು ನೇಮಕ ಮಾಡಲಾಗಿದೆ. ಸಮಿತಿಯಲ್ಲಿ 10 ಜನ ಇರುತ್ತಾರೆ. ಅಗತ್ಯ ಔಷಧಿ ದಾಸ್ತಾನು ಬಗ್ಗೆ ಸಭೆ ಆಗಿದೆ ಎಂದು ಹೇಳಿದ್ದಾರೆ.

























Discussion about this post