ಬೆಂಗಳೂರು: ಒಮಿಕ್ರಾನ್ ರೂಪಾಂತರಿ ಕೊರೋನ ಸೋಂಕಿತರ ಪೈಕಿ ಓರ್ವ ವೈದ್ಯನ ಸಂಪರ್ಕದಲ್ಲಿದ್ದ ಐದು ಮಂದಿಯನ್ನು ತಪಾಸಣೆ ಮಾಡಿದಾಗ ಕೋವಿಡ್-19 ಪಾಸಿಟೀವ್ ಕಂಡುಬಂದಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಡೆಲ್ಟಾ ಪ್ರಭೇದಕ್ಕಿಂತ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವುಳ್ಳ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿತ್ತು. ಈಗ ಬೆಂಗಳೂರಿನಲ್ಲಿ ಎರಡು ಪ್ರಕರಣ ಪತ್ತೆಯಾಗಿರುವುದು ದೇಶವನ್ನೇ ಬೆಚ್ಚಿಬೀಳಿಸಿದೆ. ಒಮಿಕ್ರಾನ್ ಸೋಂಕಿತರ ಸಂಪರ್ಕಿತರೆಂದು ಗುರುತಿಸಲಾದ ಐದು ಮಂದಿಯನ್ನು ಐಸೋಲೇಷನ್ ಗೆ ಒಳಪಡಿಸಲಾಗಿದೆ.
ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕಿತ ವೈದ್ಯನೊಂದಿಗೆ 13 ನೇರ ಸಂಪರ್ಕಿತರು ಮತ್ತು 250 ಮಂದಿ ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಮಾಡಲಾಗಿದ್ದು ತಪಾಸಣಾ ಕಾರ್ಯ ನಡೆಯುತ್ತಿದೆ. ಇನ್ನೋರ್ವ ಒಮಿಕ್ರಾನ್ ಸೋಂಕಿತ ದಕ್ಷಿಣ ಆಫ್ರಿಕಾ ಪ್ರಜೆಯಾಗಿದ್ದಾನೆ.
ಈತ ಭಾರತಕ್ಕೆ ಆಗಮಿಸುವಾಗ ಕೋವಿಡ್ ನೆಗೆಟೀವ್ ವರದಿಯನ್ನು ಹೊಂದಿದ್ದ. ಅಲ್ಲದೆ ಎರಡು ಬಾರಿ ಲಸಿಕೆ ಪಡೆದಿದ್ದ. ಆದರೆ ತಪಾಸಣೆ ವೇಳೆ ಪಾಸಿಟೀವ್ ಇರುವುದು ಗೊತ್ತಾಗಿ ಸ್ವಯಂ ಐಸೋಲೇಷನ್ ಗೆ ಸೂಚಿಸಲಾಗಿತ್ತು. ಏಳು ದಿನಗಳ ನಂತರ ಖಾಸಗಿ ಲ್ಯಾಬ್ ನಿಂದ ನೆಗೆಟೀವ್ ವರದಿ ಸಿಕ್ಕ ಮೇಲೆ ದುಬೈಗೆ ಪ್ರಯಾಣಿಸಿದ್ದ.
Covid-19 Positive of five people in contact with omikron infected doctor
























Discussion about this post