“ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ನಡುವೆ ಜಟಾಪಟಿ ನಡೆದಿದೆ” ಎಂಬ ಪ್ರತಿಪಾದನೆಯೊಂದಿಗೆ ವಿಡಿಯೊ ತುಣುಕ್ಕೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯಗಳು ಇರುವುದು ಗುಟ್ಟಿನ ವಿಚಾರವೇನಲ್ಲ. ವಿಭಿನ್ನ ಅಭಿಪ್ರಾಯ, ವಿವಿಧ ವಿಚಾರಧಾರೆ ಪ್ರಜಾಪ್ರಭುತ್ವಕ್ಕೆ ಹಾಗೂ ಬಹುತ್ವ ಭಾರತಕ್ಕೆ ಅಗತ್ಯವೂ ಕೂಡ. ಭಿನ್ನಾಭಿಪ್ರಾಯಗಳು ಕಾಂಗ್ರೆಸ್‌ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರೆ, ಬಿಜೆಪಿಯಲ್ಲಿ ಗುಪ್ತಗಾಮಿನಿಯಂತೆ ಹರಿಯಬಹುದು.
ಕಾಂಗ್ರೆಸ್‌ನ ಭಿನ್ನಾಭಿಪ್ರಾಯಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವುದರಿಂದ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಬಿಂಬಿಸಲು ಕಾಂಗ್ರೆಸ್ ವಿರೋಧಿಗಳು ಯತ್ನಿಸುವುದೂ ಸಾಮಾನ್ಯ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಿ.ಎಂ.ಇಬ್ರಾಹಿಂ ನಡುವೆ ಜಟಾಪಟಿ ನಡೆಯಿತೆಂದು ವಿಡಿಯೊ ತುಣುಕ್ಕೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಸಿದ್ದರಾಮಯ್ಯ ಹಾಗೂ ಇಬ್ರಾಹಿಂ ಏಕವಚನದಲ್ಲಿ ಬೈದುಕೊಂಡಂತೆ ಭಾಸವಾಗುವ ಈ ವಿಡಿಯೊವನ್ನು ಟ್ರೋಲ್ ಮಾಡಲಾಗುತ್ತಿದೆ.
“ಹೇಯ್ ಕೂತ್ಕೊಳಲೇ ಕೂಲಿ ಕೆಲ್ಸಕ್ಕೆ ಬಂದೋನು ನೀನು” ಎಂದು ಸಿ.ಎಂ. ಇಬ್ರಾಹಿಂ ಸಿದ್ದರಾಮಯ್ಯ ಅವರಿಗೆ ಹೇಳುತ್ತಿರುವಂತೆ ಈ ವಿಡಿಯೊದಲ್ಲಿ ಭಾಸವಾಗುತ್ತದೆ. ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸುತ್ತಾ, “ನಾನು ರಾಜಕಾರಣಕ್ಕೆ ಬಂದಾಗ ನೀನು ನೀನು ಚಡ್ಡಿನೇ ಹಾಕಿಲ್ಲ” ಎಂದು ಹೇಳಿದಂತೆ ಭಾಸವಾಗುತ್ತದೆ. ಹೀಗೆ ಈ ಇಬ್ಬರು ಕಾಂಗ್ರೆಸ್ ನಾಯಕರು ಜಗಳ ಆಡಿಕೊಂಡಿದ್ದಾರೆ ಎಂದು ಹಲವರು ಬಿಂಬಿಸುತ್ತಿದ್ದಾರೆ.
ತಕ್ಷಣಕ್ಕೆ ನೋಡಿದರೆ ಕಾಂಗ್ರೆಸ್ ನಾಯಕರು ಜಗಳ ಆಡಿದ್ದಾರೆಂದೇ ಅನಿಸುತ್ತದೆ. ಆದರೆ ವಾಸ್ತವ ಬೇರೆ ಇದೆ. ಇಬ್ಬರು ಕಾಂಗ್ರೆಸ್ ನಾಯಕರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಕುರಿತು ಮಾತನಾಡುತ್ತಿದ್ದಾರೆ ಎಂಬುದು ಮಾಧ್ಯಮಗಳ ವರದಿಗಳಿಂದ ಸ್ಪಷ್ಟವಾಗುತ್ತದೆ.
siddaramaiah- c.m. ibrahim naduve jadapati nadeite..?

























Discussion about this post