ರಾಜ್ಯದಲ್ಲಿ ಇಂದು ಮತ್ತೆ ಐದು ಮಂದಿಗೆ ಓಮಿಕ್ರಾನ್ ದೃಢಪಟ್ಟಿದೆ. ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಕೆ ಸುಧಾಕರ್ , ಯುಕೆಯಿಂದ ಹಿಂದಿರುಗಿದ 19 ವರ್ಷದ ವ್ಯಕ್ತಿ, ದೆಹಲಿಯಿಂದ ಬಂದ 36 ವರ್ಷದ ವ್ಯಕ್ತಿ,
ದೆಹಲಿಯಿಂದ ಬಂದಿಳಿದ 70 ವರ್ಷದ ಮಹಿಳೆ, ನೈಜೀರಿಯಾದಿಂದ ಆಗಮಿಸಿದ 52 ವರ್ಷದ ವ್ಯಕ್ತಿ ಹಾಗು ದಕ್ಷಿಣ ಆಫ್ರಿಕಾದಿಂದ ಬಂದ 33 ವರ್ಷದ ವ್ಯಕ್ತಿಗೆ ಓಮಿಕ್ರಾನ್ ದೃಢಪಟ್ಟಿದೆ ಎಂದು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಮಾಣ 8 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು 303 ಜನರಿಗೆ ಕೊರೋನಾ ಪಾಸಿಟಿವ್
ರಾಜ್ಯದಲ್ಲಿ ಇಂದು 303 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 30,01,554 ಕ್ಕೆ ಏರಿಕೆಯಾಗಿದೆ. ಇದುವರೆಗೆ 38,729 ಸೋಂಕಿತರು ಸಾವನ್ನಪ್ಪಿದ್ದಾರೆ.
322 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 29,56,608 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.0.23 ರಷ್ಟಿದೆ. 5630 ಸಕ್ರಿಯ ಪ್ರಕರಣಗಳಿದೆ.
Omikron firm for five more in the state
Discussion about this post