ಚಿಕ್ಕಮಗಳೂರು: ನಗರಸಭೆಯ ಸದಸ್ಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯು ಡಿ.೨೭ ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನವನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಹಿತದೃಷ್ಟಿಯಿಂದ ಚಿಕ್ಕಮಗಳೂರು ನಗರದಾದ್ಯಂತ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಅತ್ಯಾವಶ್ಯಕವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಡಿ.೨೫ ರಂದು ಸಂಜೆ ೫ ಗಂಟೆಯಿಂದ ಡಿ.೨೭ ರ ಮಧ್ಯರಾತ್ರಿ ೧೨ ಗಂಟೆಯವರೆಗೆ (ಕೆಎಸ್‌ಬಿಸಿಎಲ್ ಹೊರತುಪಡಿಸಿ) ಎಲ್ಲಾ ನಮೂನೆಯ ಮದ್ಯದಂಗಡಿಗಳನ್ನು (ಸಿವಿಲ್-೨, ೪, ೬ಎ, ೭, ೯, ೧೧, ೧೪ ಎಲ್ಲಾ ತರಹದ) ಮುಚ್ಚುವಂತೆ ಹಾಗೂ ಮದ್ಯ, ಬೀರ್, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.
Municipal elections: Ban on sale of liquor
























Discussion about this post