ಚಿಕ್ಕಮಗಳೂರು: ಎಂಇಎಸ್ ಅಥವಾ ಇನ್ಯಾವುದೇ ಸಂಘಟನೆ ಕನ್ನಡ ವಿರೋಧಿ ಚಟುವಟಿಕೆ ನಡೆಸಿದ್ರೆ ಯಾವುದೇ ಕಾರಣಕ್ಕೂ ಈ ಸರ್ಕಾರ ಸಹಿಸೋದಿಲ್ಲ, ಅಂತಹವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೆ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನೀಲ್‌ಕುಮಾರ್ ಹೇಳಿದ್ದಾರೆ.
ಭಾನುವಾರ ದತ್ತಪೀಠದಲ್ಲಿ ಸುದ್ದಿಗಾರರೋಂದಿಗೆ ಮಾತನಾಡಿ ಎಲ್ಲೋ ಒಂದು ಕಡೆ ಪಿತೂರಿಯ ಕಾರಣಕ್ಕೆ ಜನರ ಮನಸ್ಸನ್ನ ಬೇರೆಡೆ ಸೆಳೆಯಬೇಕು ಅಂತಾ ಪ್ರಯತ್ನ ದುಷ್ಕರ್ಮಿಗಳು ನಡೆಸಿದರೆ, ಸರ್ಕಾರ ಕಾನೂನು ಕ್ರಮ ಖಂಡಿತ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಎಷ್ಟೋ ದೊಡ್ಡವರಾದ್ರೂ ಕನ್ನಡದ ನೆಲ, ಧ್ವಜ, ಸಾಹಿತ್ಯ ನಾವೆಲ್ಲರೂ ಗೌರವಿಸಬೇಕು, ಅಗೌರವದಿಂದ ನಡೆದುಕೊಂಡರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
Anti-Kannada
























Discussion about this post