ಮೈಸೂರು: ಮೈಸೂರಿನ ಕಾರು ಶೋರೂಂವೊoದರಲ್ಲಿ ಬೆಂಕಿ ಅವಘಡ ಸಂಭವಿಸಿ ಒಂದು ಕಾರು ಸುಟ್ಟು ಹೋಗಿ ಮೂರು ಕಾರುಗಳಿಗೆ ಹಾನಿಯಾಗಿರುವ ಘಟನೆ ಭಾನುವಾರ ನಡೆದಿದೆ.
ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಶೋರೂಂ ಅದ್ವೇತ ಹೋಂಡಾ ಶೋರೂಂ ನಲ್ಲಿ ಬೆಂಕಿ ಹೊತ್ತಿಕೊಂಡು ಧಗ,ಧಗನೆ ಉರಿಯಲಾರಂಭಿಸಿತು. ವಿಷಯ ತಿಳಿದು ಮೂರು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಆ ವೇಳೆಗಾಗಲೇ ಒಟ್ಟು ನಾಲ್ಕು ಕಾರುಗಳಿಗೆ ಹಾನಿಯಾಗಿತ್ತು. ಮತ್ತೆ ಮೂರು ಕಾರುಗಳನ್ನು ರಕ್ಷಣೆ ಮಾಡಲಾಯಿತು.
ಭಾನುವಾರವಾದ ಕಾರಣ ಕಡಿಮೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಳ್ಳುವುದಕ್ಕೆ ಕಾರಣವೇನು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಪರಿಶೀಲನೆ ನಡೆಸಿದರು.
Fire breaks out in car showroom

























Discussion about this post