ಶಿವಮೊಗ್ಗ: ರೈತರು ಎದುರಿಸುತ್ತಿರುವ ಅಡಿಕೆ ಕೊನೆ ತೆಗೆಯುವ ಸಮಸ್ಯೆಗೆ ಕಾರ್ಬನ್ ಫೈಬರ್ ದೋಟಿ ವರವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕೃಷಿ ಮಲೆನಾಡು ಕೃಷಿಕರ ಸಮುದಾಯ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆ ತೆಗೆಯುವ ತರಬೇತಿ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರೈತರು ಅಡಿಕೆ ಕೊನೆ ತೆಗೆಯುವ ವಿಚಾರದಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊನೆ ತೆಗೆಯುವ ಕಾಯಕದಲ್ಲಿ ಹಲವಾರು ಕಾರ್ಮಿಕರೂ ಆಕಸ್ಮಿಕವಾಗಿ ಮರದ ಮೇಲಿನಿಂದ ಬಿದ್ದು ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ.ಇದಕ್ಕೆಲ್ಲಾ ವರದಾನವೆಂಬಂತೆ ಅತ್ಯಂತ ಹಗುರ ಹಾಗೂ ಬಹಳವಾಗಿ ಉಪಯೋಗವಾಗುವ ಕಾರ್ಬನ್ ಧೋಟಿಯ ಆವಿಷ್ಕಾರ ಆಗಿದೆ ಎಂದರು. ಸಾಮಾನ್ಯ ರೈತರೂ ಈ ದೋಟಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದೂ ತಿಳಿಸಿದರು.
ಈ ಸಂದರ್ಭದಲ್ಲಿ ಕೂಳೂರು ಸತ್ಯನಾರಾಯಣ್ ರಾವ್, ಖ್ಯಾತ ಸಾಹಿತಿ ಮತ್ತು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ, ಆಡಿ ರವಿಕುಮಾರ್ ಉಪಸ್ಥಿತರಿದ್ದರು.
Carbon Fiber Doti Vara























Discussion about this post