• Home
  • About Us
  • Contact Us
  • Terms of Use
  • Privacy Policy
Saturday, September 26, 2026
  • Login
Shri News
  •  
  • ರಾಜ್ಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    News: ಸ್ವಲ್ಪದರಲ್ಲೇ ಬಚಾವ್ ಆಗಿ ಬಂದ ಖ್ಯಾತ ಯೂಟ್ಯೂಬರ್ ವಿಕಾಸ್ ಗೌಡ

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

  • ರಾಷ್ಟ್ರೀಯ
    ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

    Scam Alert: ಚಲಾನ್ ಅಪ್ಡೇಟ್ ನೋಟೀಸ್ ನೆಪದಲ್ಲಿ ಬರುವ ಲಿಂಕ್ ಕ್ಲಿಕ್ಕಿಸಿ ಎಡವಟ್ಟು..

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    Punjab News: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಪಂಜಾಬ್‌ನ ಲೂಧಿಯಾನಾದ ಆರ್ಯನ್ ಗುಪ್ತಾ ಟಾಪರ್

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    National: ಯುಪಿಯಲ್ಲಿ ಆಪರೇಶನ್ ಕ್ಲೀನ್ ಸ್ವೀಪರ್ ಎಫೆಕ್ಟ್: ಕ್ಷಮೆಯಾಚನೆಯ ಪೋಸ್ಟರ್ ಹಿಡಿದು ಬಂದ ರೌಡಿಗಳು

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

    Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn Ok Please) ಅಂತಾ ಬರೆಯೋದ್ಯಾಕೆ..?

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ಬ್ಯೂಟಿ ಟಿಪ್ಸ್

ಚಿಕ್ಕು ಹಣ್ಣು ಯಾವ ದೇಶದಿಂದ ಭಾರತಕ್ಕೆ ಬಂದಿದ್ದು? ಇದರ ಸೇವನೆಯಿಂದಾಗುವ ಪ್ರಯೋಜನಗಳೇನು?

News Desk by News Desk
May 14, 2024, 09:49 pm IST
in ಬ್ಯೂಟಿ ಟಿಪ್ಸ್
Share on FacebookShare on TwitterTelegram

Health Tips: ತಿಳಿ ಕಂದು ಬಣ್ಣದ ಸಿಪ್ಪೆ ಹೊಂದಿದ , ತಿಂದರೆ ರವೆ ರವೆಯಂತೆ ರುಚಿಸುವ ಸಿಹಿಯಾದ ಹಣ್ಣು ಅಂದ್ರೆ ಚಿಕ್ಕು(chikku) ಅಥವಾ ಸಪೋಟ(sapota) ಹಣ್ಣು. ಗುಣದಿಂದ ಈ ಹಣ್ಣು ಉಷ್ಣವಾಗಿದ್ದರೂ, ಇದನ್ನು ಅಗತ್ಯಕ್ಕಿಂತ ಹೆಚ್ಚು ತಿಂದರೆ, ಶೀತವಾಗೋದು ಖಂಡಿತ. ಆದ್ರೆ ಲಿಮಿಟಿನಲ್ಲಿ ಚಿಕ್ಕು ಹಣ್ಣು ಸೇವಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇಂಥ ರುಚಿಕರ ಚಿಕ್ಕು ಹಣ್ಣು ಮೂಲತಃ ನಮ್ಮ ದೇಶದ್ದಲ್ಲವಾ..? ಹಾಗಾದ್ರೆ ಯಾವ ದೇಶದ್ದು..? ಇದು ನಮ್ಮ ದೇಶಕ್ಕೆ ಬಂದಿದ್ದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ . ಇದರ ಜೊತೆಗೆ ಚಿಕ್ಕು ಹಣ್ಣನ್ನ ಸೇವಿಸುವುದರಿಂದ ಆಗುವ 10 ಲಾಭಗಳೇನು ಅನ್ನೋ ಬಗ್ಗೆಯೂ ತಿಳಿಯೋಣ..

ಚಿಕ್ಕು ಹಣ್ಣು ಮೆಕ್ಸಿಕೋ ದೇಶದ ಮೂಲ ಹಣ್ಣಂತೆ. ಅಲ್ಲಿನ ವಸಾಹತುಗಾರರು ಚಿಕ್ಕು ಹಣ್ಣನ್ನು ಫಿಲಿಪೈನ್ಸ್‌ಗೆ ಕೊಂಡೊಯ್ದರಂತೆ. ಅಲ್ಲಿಂದ ಅದು ಏಷ್ಯಾದ ಉಳಿದ ಭಾಗಗಳಿಗೆ ಸರಬರಾಜಾಯಿತು. ಹೀಗೆ 19ನೇ ಶತಮಾನದಲ್ಲಿ ಚಿಕ್ಕು ಭಾರತಕ್ಕೆ ಬಂತು ಅಂತಾ ಹೇಳಲಾಗುತ್ತದೆ. ಇನ್ನೂ ಮುಖ್ಯವಾದ ವಿಷಯ ಅಂದ್ರೆ ಇಡೀ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕು ಬೆಳೆಯುವ ರಾಜ್ಯ ಅಂದ್ರೆ ನಮ್ಮ ಕರ್ನಾಟಕ. ಎರಡನೇ ಸ್ಥಾನದಲ್ಲಿರುವುದು ಮಹಾರಾಷ್ಟ್ರ.

ಇನ್ನು ಚಿಕ್ಕು ಹಣ್ಣಿನ ಸೈಂಟಿಫಿಕ್ ಹೆಸರು, ಮನಿಲ್ಕಾರಾ Zapota. ಇದನ್ನೇ ಸಪೋಟಾ, ಸಪೋಡಿಲ್ಲಾ, ಚಿಕ್ಕು, ನಿಸ್ಪೆರೋ ಅನ್ನೋ ಹೆಸರುಗಳಿಂದ ಕರೆಯಲಾಗುತ್ತದೆ. ಇನ್ನು ಈ ಚಿಕ್ಕು ಹಣ್ಣಿನಲ್ಲಿ ಸುಮಾರು ವಿಧಗಳಿದೆ. ಕಾಲಿ ಪಟ್ಟಿ, ಪೀಲಿ ಪಟ್ಟಿ, ಕ್ರಿಕೇಟ್ ಬಾಲ್, ಬಾರಾಮತಿ, ದ್ವಾರಾಪುಡಿ, ಚಾಟ್ರಿ ಇತ್ಯಾದಿ ವಿಧದ ಚಿಕ್ಕು ಹಣ್ಣುಗಳನ್ನ ನಮ್ಮ ಭಾರತದಲ್ಲಿ ಬೆಳೆಯಲಾಗುತ್ತದೆ.

ಇನ್ನು ಈ ರುಚಿಕರ ಹಣ್ಣು ತಿನ್ನುವುದರಿಂದ ಆಗುವ 10 ಲಾಭಗಳ ಬಗ್ಗೆ ತಿಳಿಯೋಣ ಬನ್ನಿ..

  • ಮೊದಲನೇಯದಾಗಿ ನೀವು ಪ್ರತಿನಿತ್ಯ ಒಂದು ಚಿಕ್ಕು ಹಣ್ಣನ್ನ ಸೇವಿಸುವುದರಿಂದ, ನಮ್ಮ ಮೂಳೆ ಗಟ್ಟಿಯಾಗುತ್ತದೆ. ಕ್ಯಾಲ್ಶಿಯಂನಿಂದ ಭರಪೂರವಾದ ಚಿಕ್ಕು ಹಣ್ಣು, ಮೂಳೆಯ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ನೀವು ನಿಮ್ಮ ಯವ್ವನದಿಂದಲೇ ಪ್ರತಿನಿತ್ಯ ಒಂದು ಚಿಕ್ಕು ಸೇವಿಸುವುದನ್ನು ರೂಢಿಸಿಕೊಂಡರೆ, ಮುಂದೆ ನಿಮಗೆ ಯಾವುದೇ ಮೂಳೆ ರೋಗ ಬರುವುದಿಲ್ಲ.
  • ಎರಡನೇಯದಾಗಿ ಚಿಕ್ಕುವಿನಲ್ಲಿ ವಿಟಾಮಿನ್ ಎ ಮತ್ತು ಸಿ ಇರುವುದರಿಂದ, ಇದರ ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಲಾಭ ತಂದು ಕೊಡುತ್ತದೆ. ವಿಟಾಮಿನ್ ಎ ನಮ್ಮ ಕಣ್ಣಿನ ಆರೋಗ್ಯ ಕಾಪಾಡಿದರೆ, ವಿಟಾಮಿನ್ ಸಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವುದರ ಜೊತೆಗೆ, ನಮ್ಮ ಹೃದಯ ಮತ್ತು ತ್ವಚೆಯನ್ನು ಆರೋಗ್ಯಕರವಾಗಿಡುತ್ತದೆ.
  • ಇನ್ನು ಮೂರನೇಯದಾಗಿ ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದಲ್ಲಿ ಪ್ರತಿದಿನ ಒಂದು ಚಿಕ್ಕು ಹಣ್ಣು ಸೇವಿಸಿದರೆ ಸಾಕು. ನಿಮ್ಮ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.  ಆದರೆ ಚಿಕ್ಕು ಹಣ್ಣು ಸೇವಿಸಿದ್ದಲ್ಲಿ ನಿಮಗೆ ಉಷ್ಣವಾಗುತ್ತದೆ ಎಂದಾದಲ್ಲಿ ದಿನಕ್ಕೆ ಅರ್ಧ ಚಿಕ್ಕು ಹಣ್ಣು ಸೇವಿಸಿ.
  • ನಾಲ್ಕನೇಯದಾಗಿ ಚಿಕ್ಕು ಹಣ್ಣಿನ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಚಿಕ್ಕು ಹಣ್ಣಿನ ಸೇವನೆಯಿಂದ ಹೊಟ್ಟೆಗೆ ಸಂಬಂಧಸಿದ ಸಮಸ್ಯೆಗೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
  • ಐದನೇಯದಾಗಿ ಬ್ಲಡ್ ಪ್ಲೆಶರ್ ಕಂಟ್ರೋಲ್ ಮಾಡುವಲ್ಲಿ ಚಿಕ್ಕು ಸಹಕಾರಿಯಾಗಿದೆ. ಮ್ಯಾಗ್ನಿಷಿಯಂ, ಐರನ್ ಮತ್ತು ಕ್ಯಾಲ್ಶಿಯಂ ಅಂಶಗಳನ್ನು ಹೊಂದಿರುವ ಚಿಕ್ಕು ಹಣ್ಣು, ಬ್ಲಡ್ ಪ್ರಶರ್ ಕಂಟ್ರೋಲ್ ಮಾಡುತ್ತದೆ.
  • ಆರನೇಯದಾಗಿ ನಿಮ್ಮ ದೇಹದಲ್ಲಿ ಶಕ್ತಿ ಕುಂದು ಹೋಗಿದೆ, ಕೆಲಸ ಮಾಡುವಾಗ ಆಯಾಸವಾಗುತ್ತದೆ ಅಂತಾ ಎನ್ನಿಸಿದರೆ, ಒಂದು ಚಿಕ್ಕು ಹಣ್ಣು ಸೇವಿಸಿ. ಇದು ನಿಮ್ಮ ದೇಹದಲ್ಲಿ ಶಕ್ತಿ ತುಂಬುವುದಲ್ಲದೇ, ನಿಮ್ಮಲ್ಲಿನ ಚೈತನ್ಯ ಹೆಚ್ಚುವಲ್ಲಿ ಸಹಕಾರಿಯಾಗುತ್ತದೆ.
  • ಏಳನೇಯದಾಗಿ ಕ್ಯಾನ್ಸರ್‌ ಬರದಂತೆ ತಡೆಗಟ್ಟಲು ಚಿಕ್ಕು ಸಹಕಾರಿಯಾಗಿದೆ.
  • ಎಂಟನೇಯದಾಗಿ ಇದು ಗರ್ಭಿಣಿಯವರಿಗೆ ಉತ್ತಮ ಆಹಾರವಾಗಿದೆ. ಯಾವ ಮಹಿಳೆ ಗರ್ಭಿಣಿಯಾಗಿರುತ್ತಾಳೋ ಅಥವಾ ಗರ್ಭ ಧರಿಸಲು ಸಿದ್ಧಳಾಗುತ್ತಾಳೋ ಅಂಥವರು ಪ್ರತಿದಿನ ಒಂದು ಸಪೋಟಾ ತಿನ್ನಬೇಕು. ಇದರಿಂದ ಮೂಳೆ ಗಟ್ಟಿಗೊಳ್ಳುತ್ತದೆ. ಅಲ್ಲದೇ ಆಗಲೇ ಹೇಳಿದಂತೆ ಹಿಮೋಗ್ಲೋಬಿನ್ ಕೊರತೆ ನೀಗಿಸುವುದರಲ್ಲಿ ಚಿಕ್ಕು ಹಣ್ಣು ಸಹಕಾರಿಯಾಗಿದೆ.  ಚಿಕ್ಕು ಹಣ್ಣು ತಿನ್ನುವುದರಿಂದ ನಾರ್ಮಲ್ ಡೆಲಿವರಿಗೆ ಸಹಕಾರಿಯಾಗುತ್ತದೆ. ಹಾಗಂತ ಅಗತ್ಯಕ್ಕಿಂತ ಹೆಚ್ಚು ಸಪೋಟಾ ಹಣ್ಣಿನ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ.
  • ಒಂಭತ್ತನೇಯದಾಗಿ ನೀವು ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಿದ್ದಲ್ಲಿ, ನಿಮ್ಮ ಡಯಟ್ ಚಾರ್ಟ್‌ನಲ್ಲಿ ಚಿಕ್ಕು ಹಣ್ಣನ್ನು ಸೇರಿಸಿ. ಯಾಕಂದ್ರೆ ಚಿಕ್ಕು ಹಣ್ಣಿನ ಸೇವನೆಯಿಂದ ನಿಮ್ಮ ತೂಕ ಇಳಿಯುವುದಲ್ಲದೇ, ನಿಮ್ಮ ದೇಹದಲ್ಲಿ ಶಕ್ತಿ ಕೂಡ ಹೆಚ್ಚುತ್ತದೆ.
  • ಹತ್ತನೇಯದಾಗಿ ಸಪೋಟಾ ಹಣ್ಣಿನ ಸೇವನೆಯಿಂದ ನೀವು ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿರ್ತೀರಾ. ನೀವು ಯವ್ವನದಲ್ಲಿ ಪ್ರತಿದಿನ ಒಂದು ಚಿಕ್ಕು ಸೇವನೆ ಮಾಡಿದರೂ ಸಾಕು, ನಿಮ್ಮ  ವಯಸ್ಸು ಅಡಗಿಸಬಹುದು. ಯಾಕಂದ್ರೆ ಚಿಕ್ಕು ಹಣ್ಣಿನ ಸೇವನೆಯಿಂದ ತ್ವಚೆಯ ಸೌಂದರ್ಯ ಹೆಚ್ಚಾಗುವುದಲ್ಲದೇ, ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗುತ್ತದೆ. ಜೊತೆಗೆ ವಯಸ್ಸಾದಂತೆ ನಿಮ್ಮ ಮುಖದ ಮೇಲಾಗಲಿರುವ ನೆರಿಗೆಗಳನ್ನ ತಡೆಗಟ್ಟುವಲ್ಲಿಯೂ ಇದು ಸಹಕಾರಿಯಾಗಿದೆ.

ಒಟ್ಟಿನಲ್ಲಿ ಆರೋಗ್ಯಕ್ಕೆ ಬೇಕಾದ ಎಲ್ಲಾ ಉತ್ತಮ ಗುಣಗಳು ಕೂಡಾ ಇದರಲ್ಲಿದೆ. ಆದ್ರೆ ಈ ಹಣ್ಣನ್ನ ಲಿಮಿಟಿನಲ್ಲಿ ಅಂದ್ರೆ ದಿನಕ್ಕೊಂದು ಚಿಕ್ಕು ಹಣ್ಣು ತಿಂದ್ರೆ ಒಳ್ಳೆಯದು. ಇನ್ನು ನಿಮಗೆ ಚಿಕ್ಕು ಹಣ್ಣು ಅಂದ್ರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ವಿಚಾರಿಸಿ, ಬಳಿಕ ಚಿಕ್ಕು ಸೇವಿಸಿ.  ಯಾಕಂದ್ರೆ ಕೆಲವರಿಗೆ ಚಿಕ್ಕು ತಿಂದ ತಕ್ಷಣ ನೆಗಡಿ ಕೆಮ್ಮು ಶುರುವಾಗುತ್ತದೆ. ಹಾಗಾಗಿ ನಿಮ್ಮ ದೇಹಕ್ಕೆ ಚಿಕ್ಕು ಸೇವನೆ ಒಗ್ಗುತ್ತದೆ ಅಂತಾದರಷ್ಟೇ ಚಿಕ್ಕು ಸೇವಿಸಿ.  ಇದಲ್ಲದೇ ಮಳೆಗಾಲದಲ್ಲಿ ಚಿಕ್ಕು ಹಣ್ಣಿನ ಸೇವನೆ ಉತ್ತಮವಲ್ಲ ಅಂತಾನೂ ಹೇಳಲಾಗುತ್ತದೆ.  ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಚಿಕ್ಕು ಹಣ್ಣು ತಿಂದು ನೀರು ಕುಡಿಯಬಾರದು. ಹೀಗೆ ಮಾಡಿದ್ದಲ್ಲಿ ತಲೆ ನೋವಾಗುವ ಅಥವಾ ಶೀತವಾಗುವ ಸಾಧ್ಯತೆ ಇರುತ್ತದೆ.

Tags: Beauty tipsdietFoodfruitsHealth TipsNonvegremedyshri NewssleepVegetableswater
ShareSendTweetShare
Join us on:

Related Posts

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಕೂದಲು, ತ್ವಚೆ, ದೈಹಿಕ, ಮಾನಸಿಕ ಎಲ್ಲ ಆರೋಗ್ಯ ಅಭಿವೃದ್ಧಿಗೂ ಇಲ್ಲಿದೆ ರಾಶಿ ರಾಶಿ ಟಿಪ್ಸ್

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Health Tips: ಮಲಗುವ ಮುನ್ನ ಈ 1 ಕೆಲಸ ಮಾಡಿದ್ರೆ ಸಾಕು, ಸುಸ್ತು ಅಂದ್ರೇನು ಅಂತಾ ಮರೆತೇ ಹೋಗತ್ತೆ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Life Lesson: ತಾಳ್ಮೆಯಿಂದ ಇದ್ದು ಶ್ರೀಮಂತರಾಗುವುದನ್ನು ಕಲಿಯಿರಿ..

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಪನೀರ್ ಚಿಲ್ಲಿ ರೆಸಿಪಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Spirituality: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಭವಿಷ್ಯ ನುಡಿದಿದ್ದ

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Chanakya Neeti: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

Movie Mantra: ಭಯಾನಕ ಮಾಟಗಾತಿಯ ವೆಬ್‌ಸಿರೀಸ್ ಮುತಸ್ಸಿ: Video with review

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

ಅನುಷ್ಕಾ ಶರ್ಮಾ ಧರಿಸಿದರೆಂದು ನೀವೂ ತುಳಸಿ ಮಾಲೆ ಧರಿಸುವ ಮುನ್ನ ಈ ವಿಚಾರ ಖಂಡಿತ ತಿಳಿಯಿರಿ..

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ಈರುಳ್ಳಿ ಪಲ್ಯವನ್ನ ಹೀಗೆ ಮಾಡಿದ್ರೆ ಮನೆ ಜನ ಬಾಯಿ ಚಪ್ಪರಿಸಿಕೊಂಡು ತಿಂತಾರೆ

Recipe: ವೆಜ್ ಕಟ್ಲೇಟ್ ರೆಸಿಪಿ

Recipe: ವೆಜ್ ಕಟ್ಲೇಟ್ ರೆಸಿಪಿ

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Spiritual: ಅದೃಷ್ಟಕ್ಕಾಗಿ ಕಾಯುತ್ತಿದ್ದೀರಾ..? ಹಾಗಾದ್ರೆ ಈ ಕೆಲಸಗಳನ್ನು ಮಾಡಿ..

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

Life Lesson: ಇಂಥ ವಿಷಯದಲ್ಲಿ ಎಂದಿಗೂ ಅಹಂಕಾರ ಪಡಬೇಡಿ ಅಂತಾರೆ ಹಿರಿಯರು

  • Home
  • About Us
  • Contact Us
  • Terms of Use
  • Privacy Policy

© 2026 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2026 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In