Beauty Tips: ಕಾಫಿ ಪುಡಿ ಸ್ಕ್ರಬ್: 2 ಚಮಚ ಕಾಫಿ ಪುಡಿ, 2 ಚಮಚ ಸಕ್ಕರೆ, 1ರಿಂದ 2 ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಈ ಮೂರನ್ನು ಸೇರಿಸಿ, 4-7ನಿಮಿಷ ಸ್ಕ್ರಬಿಂಗ್ ಮಾಡಿಕೊಳ್ಳಿ. 3 ನಿಮಿಷ ಬಿಟ್ಟು ಹಸಿ ಬಟ್ಟೆಯಿಂದ ನಿಮ್ಮ ಮುಖ ಒರೆಸಿಕೊಳ್ಳಿ. ನಂತರ ಮುಖ ತೊಳೆದುಕೊಳ್ಳಿ.
ಟೊಮೆಟೋ ಸ್ಕ್ರಬ್: ಟೊಮೆಟೋ, ಸಕ್ಕರೆ. ಟೊಮೆಟೋ ಅರ್ಧಭಾಗ ಕಟ್ ಮಾಡಿಕೊಂಡು ಅದರ ಮೇಲೆ ಸಕ್ಕರೆ ಹರಡಿ. ಇದನ್ನ ಮುಖಕ್ಕೆ ಉಜ್ಜಿ ಸ್ಕ್ರಬಿಂಗ್ ಮಾಡಿ. 4-7 ನಿಮಿಷ ಸ್ಕ್ರಬ್ ಮಾಡಿ, 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಕಿತ್ತಳೆ ಸ್ಕ್ರಬ್: 4 ಸ್ಪೂನ್ ಸಕ್ಕರೆ, 2 ಸ್ಪೂನ್ ಕಿತ್ತಳೆ ರಸ, 1ಸ್ಪೂನ್ ತೆಂಗಿನ ಎಣ್ಣೆ(ಆಲಿವ್ ಎಣ್ಣೆ, ಬಾದಾಮಿ ಎಣ್ಣೆ ಬಳಸಬಹುದು). ಒಂದು ಸ್ಪೂನ್ ಜೇನುತುಪ್ಪ. ಇದೆಲ್ಲವನ್ನ ಸೇರಿಸಿ, ಮುಖಕ್ಕೆ ಸ್ಕ್ರಬ್‌ನಂತೆ ಬಳಸಿ.
ಸೂಚನೆ: ಸ್ಕ್ರಬ್ ಬಳಸುವ ಮುನ್ನ ಸ್ವಚ್ಛವಾಗಿ ಮುಖ ತೊಳೆದುಕೊಳ್ಳಿ, ನಂತರ ಸ್ಕ್ರಬಿಂಗ್ ಮಾಡಿ. ಫೇಸ್‌ಪ್ಯಾಕ್ ಹಾಕುವ ಮುನ್ನ ಸ್ಕ್ರಬ್ ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಈ ಸ್ಕ್ರಬ್‌ಗಳನ್ನ ವಾರದಲ್ಲಿ 2 ಸಲ ಬಳಸಬಹುದು. ಇನ್ನು ನೀವು ಈ ಸ್ಕ್ರಬ್‌ಗಳನ್ನು ಮುಖಕ್ಕೆ ಹಚ್ಚುವ ಮುನ್ನ ನಿಮ್ಮ ಕೈಗಳಿಗೆ ಒಮ್ಮೆ ಹಚ್ಚಿ. ಸ್ವಲ್ಪ ಹೊತ್ತು ಬಿಡಿ. ಇದರಿಂದ ನಿಮ್ಮ ಕೈಗಳಿಗೆ ಏನೂ ಅಲರ್ಜಿಯುಂಟಾಗದಿದ್ದಲ್ಲಿ ಮಾತ್ರ, ಮುಖಕ್ಕೆ ಹಚ್ಚಿ.
Discussion about this post