Paratha Recipe: ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿ ಬೇಯಿಸಿದ ಬಟಾಣಿ, ಎಣ್ಣೆ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಹಿಂಗು, 1 ಸ್ಪೂನ್ ಜೀರಿಗೆ, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಧನಿಯಾ ಪುಡಿ, ಗೋದಿ ಹುಡಿ, ಉಪ್ಪು, ತುಪ್ಪ.
ಮಾಡುವ ವಿಧಾನ: ಬಟಾಣಿಯನ್ನು ಮಿಕ್ಸಿ ಜಾರ್‌ಗೆ ಹಾಕಿ ಇದರ ಜತೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ ತರಿ ತರಿಯಾಗಿ ರುಬ್ಬಿ. ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ, ಹಿಂಗು, ಜೀರಿಗೆ, ರುಬ್ಬಿದ ಮಿಶ್ರಣ ಹಾಕಿ ಹುರಿಯಿರಿ. ನಂತರ ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಧನಿಯಾ ಪುಡಿ ಎಲ್ಲ ಹಾಕಿ ಮಿಕ್ಸ್ ಮಾಡಿ, ಗ್ಯಾಸ್ ಆಫ್ ಮಾಡಿ.
ನಂತರ ಗೋದಿ ಹುಡಿಯಿಂದ ಚಪಾತಿ ಹಿಟ್ಟು ಕಲಿಸಿ, ಲಟ್ಟಿಸಿ, ಅದರಲ್ಲಿ ಬಟಾಣಿ ಮಿಕ್ಸ್ ಹೂರಣ ಹಾಕಿ. ನಂತರ ಲಟ್ಟಿಸಿ, ತುಪ್ಪದ ಜತೆ ಬೇಯಿಸಿದರೆ, ಹಸಿರು ಬಟಾಣಿಯ ಪರಾಠಾ ರೆಡಿ.
Palak Paneer Gravy Recipe: ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್, ಪನೀರ್, 1 ಸ್ಪೂನ್ ಕಾಳುಮೆಣಸು, ಜೀರಿಗೆ, ಧನಿಯಾ, 3 ಸ್ಪೂನ್ ಎಣ್ಣೆ, 2ರಿಂದ 3 ಮೆಣಸು, ಜೀರಿಗೆ, 1 ಇಡೀ ಬೆಳ್ಳುಳ್ಳಿ, 1 ಟೋಮೆಟೋ, ಕೊತ್ತೊಂಬರಿ ಸೊಪ್ಪು, ಸ್ವಲ್ಪ ಸಕ್ಕರೆ, ಅಗತ್ಯವಿದ್ದರೆ ಕ್ರೀಮ್, ಉಪ್ಪು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ಕಾಳುಮೆಣಸು, ಜೀರಿಗೆ, ಧನಿಯಾ ಎಲ್ಲವನ್ನೂ ಹಾಕಿ ಚೆನ್ನಾಗಿ ಹುರಿದು, ಪುಡಿ ಮಾಡಿ. ಇದು ಸ್ಪೆಶಲ್ ಮಸಾಲೆ ಪುಡಿ.
ಪಾಲಕ್ ಚೆನ್ನಾಗಿ ವಾಶ್ ಮಾಡಿ, ಕ್ಲೀನ್ ಮಾಡಿ. ಬಳಿಕ ಬಿಸಿ ನೀರಿಗೆ ಹಾಕಿ, ಮತ್ತೆ ಐಸ್ ನೀರಿಗೆ ಹಾಕಿ ಕ್ಲೀನ್ ಮಾಡಿ. ಬಳಿಕ ಇದರ ಪೇಸ್ಟ್ ಮಾಡಿ. ಈಗ ಪ್ಯಾನ್‌ಗೆ ಎಣ್ಣೆ, ಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಪಾಲಕ್ ಪೇಸ್ಟ್, ಸ್ವಲ್ಪ ನೀರು ಹಾಕಿ ಮಂದ ಉರಿಯಲ್ಲಿ 15 ನಿಮಿಷ ಬೇಯಿಸಿ.
ಬಳಿಕ ರೆಡಿ ಮಾಡಿದ ಪುಡಿ, ಉಪ್ಪು, ಸಕ್ಕರೆ, ತುಪ್ಪ, ಕೊತ್ತೊಂಬರಿ ಸೊಪ್ಪು, ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ, 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಬಳಿಕ ಟೋಮೆಟೋ, ಹುರಿದ ಪನೀರ್ ಹಾಕಿ ಮಿಕ್ಸ್ ಮಾಡಿ. ಮೇಲಿಂದ ಕ್ರೀಮ್, ಹುರಿದ ಬೆಳ್ಳುಳ್ಳಿ ಹಾಕಿ ಗಾರ್ನಿಶ್ ಮಾಡಿ. ಚಪಾತಿ, ರೋಟಿ ಜತೆ ಇದನ್ನು ಸವಿಯಬಹುದು.




















Discussion about this post