ಚಿಕ್ಕಮಗಳೂರು : ಕನ್ನಡದ ನೆಲದಲ್ಲೇ ಕನ್ನಡವವನ್ನೇ ಹೀಗಳಿಯುವ ಭಾಷಾ ವಿರೋಧಿಗಳಿಗೆ, ಗಡಿಭಾಗದ ತಂಟೆಕೋರರು, ಗಡಿಯೊಳಗಿನ ಪರಭಾಷಾ ವ್ಯಾಮೋಹಿಗಳಿಗೆ ತಕ್ಕ ಬಿಸಿ ಮುಟ್ಟಿಸಿ ಸರಿ ದಾರಿಗೆ ತರಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದರು.
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ೬೬ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟç ಧ್ವಜಾರೋಹಣ ಕಾರ್ಯಕ್ರವನ್ನು ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಜಗದಗಲ ವಿಸ್ತರಿಸಿಕೊಳ್ಳಬೇಕೆಂಬ ಮಹದಾಸೆಯು ನಿಜವಾಗಲೆಂದು ಹಾರೈಸುವ ಹೊತ್ತಿನಲ್ಲಿ ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಮನುಷ್ಯ ಮನುಷ್ಯರ ನಡುವೆ ಭಾವದ ಬೆಸುಗೆ ಬೆಸೆಯುವ ಭಾಷೆ ನಮ್ಮೆಲ್ಲರ ಜೀವ ಭಾವವಾಗಬೇಕು ಎಂದರು.
ಎರಡೂವರೆ ಸಾವಿರ ವರ್ಷಗಳ ಘನ ಇತಿಹಾಸದ ಹೆಗ್ಗಳಿಕೆಯನ್ನು ಹೊಂದಿರುವ ಕನ್ನಡಕ್ಕೆ ‘ ಶಾಸ್ತಿçÃಯ ಭಾಷೆ ‘ ಎನ್ನುವ ಗೌರವವೂ ಸಿಕ್ಕಿದೆ. ಆದರೆ ಭಾಷೆ ನಿರಂತರವಾಗಿ ಬಳಕೆಯಾಗುತ್ತಿದ್ದರೆ ಮಾತ್ರವೆ. ಅದರ ಸೊಬಗು, ಸೌಂದರ್ಯ, ಅದರ ಅಭಿಮಾನಗಳು ಹೆಚ್ಚಾಗುವುದು, ಯಾವುದೇ ಕಾರಣಕ್ಕೂ ಭಾಷೆಯನ್ನು ಉದಾಸೀನ ಮಾಡಿದರೆ ಆ ಭಾಷೆ ಸೊರಗಿ ಕ್ರಮೇಣ ಕಣ್ಮರೆಯ ಆಗಿ ಹೋಗುತ್ತದೆ ಎಂದು ಸೂಚಿಸಿದರು.
ಗಡಿಭಾಗದ ತಂಟೆಕೋರರು, ಗಡಿಯೊಳಗಿನ ಪರಭಾಷಾ ವ್ಯಾಮೋಹಿಗಳು, ಕನ್ನಡ ನೆಲದಲ್ಲೇ ಕನ್ನಡವನ್ನು ಹೀಗಳೆಯುವ ಭಾಷಾ ವಿರೋಧಿಗಳಿಗೆ ಬಿಸಿ ಮುಟ್ಟಿಸಿ ಸರಿದಾರಿಗೆ ತರಬೇಕಿದೆ. ನಾಡಿನ ನೆಲ, ಜಲ ಭಾಷೆ, ಗಡಿಯ ತಂಟೆಗೆ ಯಾರೇ ಬಂದರೂ ಅವರಿಗೆ ತಕ್ಕ ಪಾಠ ಕಲಿಸಿಯೇ ತೀರಬೇಕು, ಕನ್ನಡಿಗರ ಔದಾರ್ಯವನ್ನು ದುರುಪಯೋಗ ಮಾಡಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು ಎಂದು ಕರೆ ನೀಡಿದರು.
ತಾಯಿ ಭುವನೇಶ್ವರಿಯನ್ನು ಕರುನಾಡ ದೇವಿಯಾಗಿ ಆರಾಧಿಸಿ ಕೊಂಡು ಬರುತ್ತಿದ್ದೇವೆ, ನಾವು ಕನ್ನಡಿಗರಿಗೆ ಕನ್ನಡ ಎಂದರೆ ಅದು, ಬರಿ ನುಡಿ ಅಲ್ಲ ಅದು ಜೀವ, ಭಾವ, ಉಸಿರು. ಕವಿ ಚನ್ನವೀರಕರಣವಿಯವರ ಆಶಯದಂತೆ ನಮ್ಮ ಕನ್ನಡ ಬೆಳಗಲಿ, ಕನ್ನಡ ಉಳಿಯಲಿ, ಕನ್ನಡ ಎಂದೆAದಿಗೂ ಚಿರಾಯುವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಳೆದ ಒಂದೂವರೆ ವರ್ಷಗಳಿಂದ ಕೊರೋನಾ ರೋಗಾಣು ಜಗತ್ತನ್ನೇ ನಿರಂತರವಾಗಿ ಕಾಡುತ್ತಿರುವ ದಾರುಣ ಸನ್ನಿವೇಶ ಅಂತ್ಯವಾಗುವ ಸನ್ನಿಹಿತ ಬಂದಿದೆ. ಜಗತ್ತಿನ ಆರೋಗ್ಯ ಮರಳಿ ಬರಲಿ, ಒಳಿತಿನ ದಿನಗಳನ್ನು ದಯಪಾಲಿಸಲು ಅಂತಾ ತಾಯಿ ಭುವನೇಶ್ವರಿಯನ್ನು ಪ್ರಾರ್ಥಿಸಿದರು.
ಕನ್ನಡ ಮಾತನಾಡುವ ಜನರೆಲ್ಲಾ ಒಂದುಗೂಡಲು, ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದು ಮಾಡಲು ಕರ್ನಾಟಕದ ಕುಲಪುರೋಹಿತರಾದ ಆಲೂರು ವೆಂಕಟರಾಯರ ಜೊತೆಗೂಡಿ ಅಸಂಖ್ಯಾತ ಕನ್ನಡಿಗರು, ಕನ್ನಡಾಭಿಮಾನಿಗಳು ಮಾಡಿದ ಹೋರಾಟದ ಫಲ ಇಂದು ನಾವು ರಾಜ್ಯೋತ್ಸವವೆಂಬ ಸಡಗರವನ್ನು ಆಚರಿಸಲು ಕಾರಣವಾಗಿದೆ. ಮಹಾಕಾವ್ಯಗಳ ರಚನೆಗೆ ಸಂಸ್ಕೃತವನ್ನು ಬಿಟ್ಟು ಕನ್ನಡವನ್ನು ಆಯ್ದುಕೊಂಡ ಅನೇಕ ಕವಿಗಳು, ಜನಪದ ಸಾಹಿತ್ಯವಂತೂ ಕನ್ನಡ ಪರಂಪರೆಯ ಅಮೂಲ್ಯ ಆಸ್ತಿ ಹೀಗೆ ಜನವಾಣಿ ಬೇರು, ಕವಿವಾಣಿ ಹೂವಾಗಿ ಅರಳಿದ ಕನ್ನಡ ಲಿಪಿ ಎಂತಹ ಸುಂದರ ಲಿಪಿ ವಿಶ್ವ ಲಿಪಿಗಳ ರಾಣಿ’ ಎಂದು ಆಚಾರ್ಯ ವಿನೋಬಾ ಭಾವೆಯವರಿಂದ ಕರೆಸಿಕೊಂಡ ಅಪೂರ್ವತೆಯ ಲಿಪಿ ನಮ್ಮ ಕನ್ನಡ ಲಿಪಿ ಎಂದು ಹೇಳಿದರು.
ಕನ್ನಡ ಪ್ರಜೆಗಳು ಕನ್ನಡದಲ್ಲೇ ನಾಡಿನ ಜವಾಬ್ದಾರಿಯುತ ಮಾತನಾಡುತ್ತೇವೆ, ಕನ್ನಡದಲ್ಲೇ ಬರೆಯುತ್ತೇವೆ, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇವೆ, ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇವೆ , ಕನ್ನಡ ನಾಡು , ನುಡಿ , ಸಂಸ್ಕೃತಿ ಹಾಗೂ ಪರಂಪರೆ ಉಳಿಸಲು ಕಟಿಬದ್ಧರಾಗುತ್ತೇವೆ’ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಈ ಬಾರಿಯ ಕನ್ನಡ ರಾಜ್ಯೋತ್ಸವ ಕನ್ನಡದ ನಿತ್ಯೋತ್ಸವವೇ ಸರಿ ಎಂದರು.
ಕನ್ನಡದ ಗೇಯತೆ ಮತ್ತು ಸಿರಿವಂತಿಕೆಯನ್ನು ಬೆಳಗಿ ‘ಕೀರ್ತಿಶೇಷ’ ರಾದವರನ್ನು ನೆನೆಯುವುದರ ಜೊತೆಗೆ ನಾಡಿಗೆ ಅವರು ಕೊಟ್ಟ ಕೊಡುಗೆ , ಜೀವನಾದರ್ಶವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಕನ್ನಡ ಭಾಷೆ ಕರ್ನಾಟಕದಲ್ಲಿ ಸಾರ್ವಭೌಮತ್ವವನ್ನು ಪಡೆಯಬೇಕಾದರೆ ಸರ್ವ ಕನ್ನಡಿಗರ ಸತ್‌ಸಂಕಲ್ಪ ಸರ್ಕಾರದ ಹಂಬಲಕ್ಕೆ ಜೊತೆಗೂಡಬೇಕಾಗುತ್ತದೆ. ಹಾಗಾದಾಗ ಮಾತ್ರ ಕನ್ನಡದ ಮತ್ತೊಂದು ಪರ್ವಕಾಲವನ್ನು ನಾವು ಆರಂಭಿಸಲು ಸಾಧ್ಯವಾಗುತ್ತದೆ ಎಂದರು.
ಆಧುನಿಕ ತಂತ್ರಜ್ಞಾನ ಬದಲಾದ ಸಾಮಾಜಿಕ ಚಿತ್ರಣ, ಪರಭಾಷೆಗಳ ಭೋರ್ಗರೆತದ ಮಧ್ಯೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ. ಈ ನಾಡು ನಮ್ಮದು, ಈ ಭೂಮಿ ನಮ್ಮದು ಎಂಬ ಅಭಿಮಾನವನ್ನು ಪ್ರತಿಯೊಬ್ಬರಲ್ಲೂ ಉಕ್ಕಿಸಲೇಬೇಕಿದೆ ಎಂದರು.
ಭಾಷಣ ಆರಂಭಕ್ಕೂ ಮುನ್ನ ಕನ್ನಡ ಚಲನಚಿತ್ರರಂಗದ ಯುವನಟರಾದ ಮತ್ತು ಯುವ ಜನತೆಗೆ ಸ್ಫೂರ್ತಿಯಾಗಿದ್ದ ರಾಷ್ಟçಪ್ರಶಸ್ತಿ ಪುರಸ್ಕೃತರಾದ ಜಿಲ್ಲೆಯ ನಟ ಸಂಚಾರಿ ವಿಜಯ್ ಮತ್ತು ಜಿಲ್ಲೆಯ ಅಳಿಯನಾದ ಪುನೀತ್ ರಾಜ್‌ಕುಮಾರ್. ಅವರ ಅಕಾಲಿಕ ಮರಣವು ಕನ್ನಡ ಜನತೆಗೆ ಹೃದಯ ಸ್ಪರ್ಶಿ ಆಘಾತವನ್ನು ಉಂಟು ಮಾಡಿದೆ ಅಂತಾ ಸ್ಮರಿಸಿ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಈ ಸಂದರ್ಭದಲ್ಲಿ, ವಿಧಾನ ಪರಿಷತ್ತಿನ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೆಗೌಡ, ಜಿಲ್ಲಾಧಿಕಾರಿ ಕೆ.ಎನ್ ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್. ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ, ಉಪ ವಿಭಾಗಾಧಿಕಾರಿ ಡಾ.ಹೆಚ್.ಎಲ್ ನಾಗರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post