ದೆಹಲಿ: ಕೊರೋನಾ ರೂಪಾಂತರಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಭಾರತದಲ್ಲಿ ಹೇರಲಾಗಿದ್ದ ನಿರ್ಬಂಧವನ್ನು ನವೆಂಬರ್ 30ರವಗೆ ವಿಸ್ತರಿಸಲಾಗಿದೆ.
ಭಾರತದಲ್ಲಿ ಕೋವಿಡ್ ಮಾತ್ರವಲ್ಲದೇ ರೂಪಾಂತರಿ ವೈರಸ್ ಗಳಾದ ನಿಫಾ, ಎವೈ 4.2 ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದ ಮೇಲೆ ವಿಧಿಸಿದ್ದ ನಿಷೇಧವನ್ನು ನವೆಂಬರ್ 30ರವರೆಗೂ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ.
ಈ ಬಗ್ಗೆ ಡಿಜಿಸಿಎ ಸುತ್ತೋಲೆ ಹೊರಡಿಸಿದ್ದು, ಈ ಆದೇಶ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳಿಗೆ ಮಾತ್ರ ಅನ್ವಯವಾಗಲಿದೆ. ಅಂತಾರಾಷ್ಟ್ರೀಯ ಸರಕು ಕಾರ್ಯಾಚರಣೆಗಳು ಮತ್ತು ವಿಮಾನಗಳಿಗೆ ಅನ್ವಯಿಸುವುದಿಲ್ಲ.
ಹಾಗೆಯೇ ಡಿಜಿಸಿಎಯಿಂದ ಅನುಮತಿ ಪಡೆದಿರುವ ಕಾರ್ಗೋ ವಿಮಾನಗಳ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ ಮತ್ತು ವಿಶೇಷ ಅನುಮತಿ ಪಡೆದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಮಾಡಲು ಅವಕಾಶವಿದೆ.
ಇದನ್ನೂ ಓದಿ: Cancel Programs: ಸಿಎಂ ಬೊಮ್ಮಾಯಿ ಕಾರ್ಯಕ್ರಮಗಳು ರದ್ದು
ಇದನ್ನೂ ಓದಿ: Petrol-diesel price: ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ

























Discussion about this post