ಚಿಕ್ಕಮಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಪ್ರಸ್ತುತಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ ಮಹತ್ತರ ಬದಲಾವಣೆತಂದು ಆ ಸಭೆಯ ಸ್ವರೂಪ ಬದಲಿಸಲು ತಾವು ಆಲೋಚಿಸಿರುವುದಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್)ದ ಹಂಗಾಮಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ನಗರದ ಬ್ರಾಹ್ಮಣ ಮಹಾಸಭಾದ ಸಭಾಂಗಣದಲ್ಲಿ ಅವರಅಭಿಮಾನಿ ಬಳಗ ಏರ್ಪಡಿಸಿದ್ದ ಸಭೆಯಲ್ಲಿ ಸಭಾದಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅವರು ಮತಯಾಚನೆ ಮಾಡಿ ಮಾತನಾಡಿ, ಬ್ರಾಹ್ಮಣ ಮಹಾಸಭೆಯಲ್ಲಿಯಾವುದೇರೀತಿಯ ಗುಂಪು ಸೃಷ್ಟಿಯಾಗಬಾರದು.ಜಿಲ್ಲಾ ಪ್ರತಿನಿಧಿಗಳ ಧ್ವನಿಗೆ ಮಾನ್ಯತೆಇರಬೇಕೆಂದುಆಶಿಸಿದರು.
ತಾವುಅಧ್ಯಕ್ಷರಾಗಿಆಯ್ಕೆಯಾದಲ್ಲಿಯುವಘಟಕ ಹಾಗೂ ಮಹಿಳಾ ಘಟಕಗಳನ್ನು ಆರಂಭಿಸಿ ಆ ಎರಡೂ ಘಟಕಗಳು ಸ್ವಾಯತ್ತತೆಯಿಂದ ಹಲವು ಕಾರ್ಯಕ್ರಮಗಳನ್ನು ಯುವಕರಅಭಿವೃದ್ಧಿ ಹಾಗೂ ಕ್ರಿಯಾಶೀಲತೆ ವೃದ್ಧಿಸಿಕೊಳ್ಳಲು ಅವಕಾಶವಾಗುವಂತೆ ಹಮ್ಮಿಕೊಳ್ಳಲು ಅವಕಾಶ ನೀಡುವುದಾಗಿಹೇಳಿದರು.
ಈಗಾಗಲೇ ಬ್ರಾಹ್ಮಣ ಮಹಾಸಭೆಗೆಜನಾಂಗದ ಕೈಗಾರಿಕೋದ್ಯಮಿಗಳು ಹಾಗೂ ಅನಿವಾಸಿ ಭಾರತೀಯರಿಂದ ನಿಧಿ ಸಂಗ್ರಹಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪುರೋಹಿತರು ಮತ್ತುಅಡಿಗೆ ಕೆಲಸದಲ್ಲಿ ನಿರತರಾಗಿರುವ ಕುಟುಂಬಗಳಿಗೆ ಸಹಾಯ ಮಾಡುವ ಆಲೋಚನೆ ಮಾಡಿದ್ದು, ಈ ಬಗ್ಗೆ ಈಗಾಗಲೇ ಕಾರ್ಯಾರಂಭಿಸಿರುವುದಾಗಿ ತಿಳಿಸಿದರು.
ಮಹಾಸಭೆಯ ವೆಬ್ಸೈಟ್ವೊಂದನ್ನು ರಚಿಸಿ ಆ ಮೂಲಕ ಸಭೆಯ ಆಡಳಿತ ಹಾಗೂ ನಿರ್ಧಾರಗಳು ಸದಸ್ಯರಿಗೆ ಸುಲಭವಾಗಿ ತಿಳಿಯಲು ಮತ್ತುಅವರಿಂದ ಸಲಹೆಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಮಾಡಲಾಗುವುದು.
ಬ್ರಾಹ್ಮಣ ಸಮಾಜಒಟ್ಟಾಗಿ ಹೋಗಬೇಕು.ಇಂದಿನ ಪರಿಸ್ಥಿತಿಗೆ ತಕ್ಕಂತೆ ಸಂಘಟನೆ ಬಲಗೊಳ್ಳಬೇಕಾಗಿದೆ.ಪ್ರತಿ ತಾಲೂಕುಗಳಲ್ಲೂ ಪ್ರತಿನಿಧಿಗಳ ಸೃಷ್ಟಿಯಾಗಬೇಕು. ಬದಲಾದ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ಸ್ವರೂಪವೊಂದನ್ನು ಬ್ರಾಹ್ಮಣ ಮಹಾಸಭೆಗೆ ನೀಡಲುಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿ, ತಮಗೆಯಾವುದೇರೀತಿಯರಾಜಕೀಯ ಸ್ಥಾನ ಪಡೆಯುವಅಥವಾಇನ್ಯಾವುದೇರೀತಿಯ ಗುಂಪು ರಚನೆಯಉದ್ದೇಶತಮಗಿಲ್ಲ. ಬ್ರಾಹ್ಮಣ ಸಮಾಜಸ್ವಾವಲಂಬನೆಯಿಂದ ಹಾಗೂ ಸ್ವಾಭಿಮಾನದಿಂದ ಬದುಕಬೇಕೆಂಬ ದೃಷ್ಟಿಯಿಂದ ಆ ಸಮಾಜವನ್ನು ಶಕ್ತಗೊಳಿಸುವ ಆಲೋಚನೆ ತಮಗಿರುವುದಾಗಿ ನುಡಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ಈ ಹೊಸ ಕಾಲಘಟ್ಟದಲ್ಲಿ ಬ್ರಾಹ್ಮಣ ಸಮಾಜಕ್ಕೆಎದುರಾಗುತ್ತಿರುವ ಸವಾಲುಗಳನ್ನು ಎದುರಿಸಿ, ಆ ಸಮಾಜವನ್ನು ಸದೃಢವಾಗಿಸಲು ಚಾಲಕ ಶಕ್ತಿಯೊಂದುಅಗತ್ಯವಾಗಿದ್ದು, ಅದಕ್ಕೆ ಸೂಕ್ತವಾದವರುಅಶೋಕ್ ಹಾರನಹಳ್ಳಿ.ಅವರನ್ನುಗೆಲ್ಲಿಸಲು ಸಮಾಜ ಸದೃಢವಾಗಿ ನಿಲ್ಲಬೇಕೆಂದು ಹೇಳಿದರು.
ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಮಾಜಿಅಧ್ಯಕ್ಷ ಡಿ.ಎಚ್.ನಟರಾಜ್ ಮಾತನಾಡಿ, ಅಶೋಕ್ ಹಾರನಹಳ್ಳೀ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತ ಅಭ್ಯರ್ಥಿಯಾಗಿದ್ದು, ಅವರ ಗೆಲುವು ನಮ್ಮಗೆಲುವಾಗಲಿದೆಎಂದರು.
ಬ್ರಾಹ್ಮಣ ಮಹಾಸಭೆಯಅಧ್ಯಕ್ಷ ಪಿ.ಮಂಜುನಾಥಜೋಷಿ ಮಾತನಾಡಿ, ಅಖಿಲ ಕರ್ನಾಟಕ ಮಹಾಸಭೆಯಲ್ಲಿಜನಾಂಗದಅಭಿವೃದ್ಧಿಗೆಅಗತ್ಯವಾದ ಬದಲಾವಣೆಗಳು ಅಶೋಕ್ಅವರುಅಧ್ಯಕ್ಷರಾದಾಕ್ಷಣಆಗುತ್ತದೆ ಎಂಬ ಭರವಸೆ ನಮಗಿದೆಎಂದರು.
ನಗರದ ಮಹಾಲಕ್ಷ್ಮೀದೇವಾಲಯದ ಮುಖ್ಯಸ್ಥ ವಿ.ರಾಮರಾವ್ ಮಾತನಾಡಿ, ಸಮಾಜಕ್ಕೆ ಹೊಸ ದೃಷ್ಟಿಕೋನ ನೀಡುವ ಶಕ್ತಿ ಅಶೋಕ್ ಹಾರನಹಳ್ಳಿ ಅವರಿಗಿದ್ದು, ಅವರನ್ನುಗೆಲ್ಲಿಸುವುದುಅತ್ಯಂತಅಗತ್ಯವಿದೆಎಂದು ತಿಳಿಸಿದರು.
ಬ್ರಾಹ್ಮಣಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕಛಾಯಾಪತಿ, ಎಕೆಬಿಎಂಎಸ್ನ ಹಿರಿಯಉಪಾಧ್ಯಕ್ಷ ಲಕ್ಷ್ಮೀನಾರಾಯಣ ಭಟ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದಮಾಜಿಉಪಾಧ್ಯಕ್ಷಡಿ.ಎಲ್.ರಾಮಾನುಜಾಅಯ್ಯಂಗಾರ್, ಬೆಂಗಳೂರಿನ ರಾಷ್ಟ್ರೀಯ ಸಹಕಾರ ಬ್ಯಾಂಕ್ಅಧ್ಯಕ್ಷ ಎಚ್.ಆರ್.ಸುರೇಶ್, ಮುಖಂಡರಾದಹಿರಣ್ಣಯ್ಯ, ಸುಬ್ರಹ್ಮಣ್ಯಇದ್ದರು.
ಬಿಎಂಎಸ್ ನಿರ್ದೇಶಕಿ ಶಶಿಕಲಾ ಶಿವಶಂಕರ್ ಪ್ರಾರ್ಥನೆ ಮಾಡಿದರು.ನಿರ್ದೇಶಕಿಯರಾದ ಸುಮಾ ಪ್ರಸಾದ್ಕಾರ್ಯಕ್ರಮ ನಿರೂಪಿಸಿಎಸ್.ಶಾಂತಕುಮಾರಿ ವಂದಿಸಿದರು.
ಇದನ್ನೂ ಓದಿ: Film released: ನವೆಂಬರ್ 12 ರಂದು ಪ್ರೇಮಂ ಪೂಜ್ಯಂ ಚಿತ್ರ ರಾಜ್ಯಾದ್ಯಂತ ಬಿಡುಗಡೆ
ಇದನ್ನೂ ಓದಿ: e Paper – November 8, 2021
All Karnataka Brahmin Mahasabha to change nature

























Discussion about this post