ಚಿಕ್ಕಮಗಳೂರು: 100 ಬೆಡ್ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ ಶೃಂಗೇರಿ ತಾಲೂಕಿನಲ್ಲಿ ಬಂದ್ ಘೋಷಿಸಲಾಗಿದೆ. ಸ್ವಯಂಪ್ರೇರಿತ ಶೃಂಗೇರಿ ಬಂದ್ಗೆ ವ್ಯಾಪಕ ಬೆಂಬಲ ದೊರೆತಿದ್ದು, ಶೃಂಗೇರಿ ಸಂಪೂರ್ಣ ಸ್ತಬ್ಧವಾಗಿದೆ.
ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಶೃಂಗೇರಿಯಲ್ಲಿ ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ. ಶೃಂಗೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಜನರು ಪರದಾಟ ನಡೆಸುತ್ತಿದ್ದು, 14 ವರ್ಷಗಳಿಂದ ಸುಸಜ್ಜಿತ ಆಸ್ಪತ್ರೆಗಾಗಿ ಜನರು ಮನವಿ ಮಾಡುತ್ತಿದ್ದಾರೆ.
ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯಿಂದ ಬಂದ್ಗೆ ಕರೆ ನೀಡಲಾಗಿದೆ. ಆ ಮೂಲಕ ಸೂಕ್ತ ಆಸ್ಪತ್ರೆ ವ್ಯವಸ್ಥೆಗೆ ಆಗ್ರಹಿಸಲಾಗಿದ್ದು, ಪ್ರವಾಸಿಗರು ಹಾಗೂ ಭಕ್ತರು ಇಂದು ಶೃಂಗೇರಿಗೆ ಬರದಂತೆ ಮನವಿ ಮಾಡಲಾಗಿದೆ.

























Discussion about this post