ಚಿಕ್ಕಮಗಳೂರು: ಇಲ್ಲಿನ ಶ್ರೀ ಗುರು ದತ್ತಾತ್ರೇಯನಿಗೆ ಪ್ರಾರ್ಥನೆ ಸಲ್ಲಿಸಿದ ಫಲವಾಗಿ ತಮ್ಮ ತಂದೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನ್ಮತಾಳಿದ್ದರು ಎಂದು ಮೈಸೂರು ಮಹಾರಾಜ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಭಾನುವಾರ ನಗರ ಹೊರವಲಯದ ತೇಗೂರಿನಲ್ಲಿ ಜಿಲ್ಲಾ ಅರಸು ಸಂಘದಿಂದ ನಿರ್ಮಿಸಿದ್ದ ಅರಸು ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ ತಂದೆ ಯವರಿಗೆ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಎಂದು ಹೆಸರು ಬರಲು ಕಾರಣ ಜಯಚಾಮರಾಜೇಂದ್ರ ಒಡೆಯರ್ ಅವರು ದತ್ತಾತ್ರೇಯನ ದೊಡ್ಡ ಭಕ್ತರು ಎಂದರು.
ಗಿರಿಶ್ರೇಣಿಯ ದತ್ತಪೀಠಕ್ಕೆ ಹೋಗಿದ್ದ ಸಂದರ್ಭದಲ್ಲಿ ದರ್ಶನದ ನಂತರ ಕಾಯಿ ಒಡೆಯುವ ಪ್ರತಿತಿ ಇದೆ ಕಾಯಿ ಒಡೆದ ನಂತರ ಅದು ಬಾಗಿಲ ಒಳಗೆ ಹೋದರೆ ನಿಮ್ಮ ಪ್ರಾರ್ಥನೆ ನಿಜವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅಂದಿನ ಕಾಲದಲ್ಲಿ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ನನಗೊಬ್ಬ ಮಗಬೇಕು ಎಂಬುದಾಗಿತ್ತು ಆಗ ಹುಟ್ಟಿದವರೆ ನನ್ನ ತಂದೆ ಹಾಗಾಗಿ ಅವರಿಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂಬ ನಾಮಕರಣ ಮಾಡಲಾಯಿತು ಎಂದರು.
ಅದೇ ದತ್ತಾತ್ರೇಯನ ಹೆಸರು ನನ್ನ ಹೆಸರಿನಲ್ಲೂ ಇರಬೇಕೆಂದು ನನ್ನ ದತ್ತು ಸ್ವೀಕರ ಸಂದರ್ಭದಲ್ಲಿ ತಾಯಿ ಪ್ರಮೋದಾ ದೇವಿಯವರು ನನಗೂ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ನಾಮಕರಣ ಮಾಡಿದರು. ದತ್ತು ಸ್ವೀಕಾರಕ್ಕೂ ಮುನ್ನವೆ ಚಾಮುಂಡಿಬೆಟ್ಟ, ಶ್ರೀಕಂಠೇಶ್ವರ ಸ್ವಾಮಿ, ಪರ್ಕಾಳಮಠದ ದರ್ಶನದ ನಂತರ ಶೃಂಗೇರಿಗೆ ಆಗಮಿಸುವ ಸಂದರ್ಭದಲ್ಲಿ ದತ್ತಪೀಠದಲ್ಲಿ ದರ್ಶನ ಪಡೆದು ಆಶೀರ್ವಾದ ಪಡೆದು ಸಾಗಿದ್ದು ವಿಶೇಷತೆ ಎಂದರು.
ಇದನ್ನೂ ಓದಿ: Conference: ಶೀಘ್ರದಲ್ಲಿ ಅರಸು ಮಹಾ ಸಮ್ಮೇಳನ

























Discussion about this post