• Home
  • About Us
  • Contact Us
  • Terms of Use
  • Privacy Policy
Monday, August 4, 2025
  • Login
Shri News
  •  
  • ರಾಜ್ಯ
    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Hassan News: ಚಿನ್ನಾಭರಣಕ್ಕಾಗಿ ಅನ್ನ ಹಾಕಿದ ಯಜಮಾನನ್ನೇ ಮುಗಿಸಿಬಿಟ್ಟ ದುಷ್ಟರು

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    Bengaluru News: ಗೀತಾ ವಿಷ್ಣುವಿನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಆರೋಪ

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    ಬಸವಜಯಂತಿ ಆಚರಣೆಗೆ ಹೊರಟಿದ್ದ ಟೆಂಪೋ-ಲಾರಿ ಮಧ್ಯೆ ಅಪ*ಘಾತ: 9 ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ದಾಖಲು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

    Mandya News: ಪೊಲೀಸ್ ತಪಾಸಣೆ ವೇಳೆ ಬೈಕ್‌ನಿಂದ ಬಿದ್ದು ಬಾಲಕಿ ಸಾ*ವು, ಮೂವರು ASI ಅಮಾನತು

  • ರಾಷ್ಟ್ರೀಯ
    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

    Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

  • ಅಂತರಾಷ್ಟ್ರೀಯ
  • ರಾಜಕೀಯ
  • ಆಧ್ಯಾತ್ಮ
  • ಕ್ರೀಡೆ
  • ಸಿನಿಮಾ
  • ಬ್ಯೂಟಿ ಟಿಪ್ಸ್
No Result
View All Result

  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್
Home ರಾಷ್ಟ್ರೀಯ

ಮಕ್ಕಳಿಗೆ ಆನ್‌ಲೈನ್‌ ಕೋಚಿಂಗ್‌ ನೀಡುವ ವಿದ್ಯಾ-ತಂತ್ರಜ್ಞಾನ ಸೇವೆ, ಸಂಸ್ಥೆಗಳ ಬಗ್ಗೆ ಎಚ್ಚರವಿರಲಿ: ಪೋಷಕರನ್ನು ಎಚ್ಚರಿಸಿದ ಕೇಂದ್ರ ಸರಕಾರ

ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾರೊಂದಿಗೂ ಅನವಶ್ಯಕವಾಗಿ ಹಂಚಿಕೊಳ್ಳಬೇಡಿ

Shri News Desk by Shri News Desk
Dec 24, 2021, 12:54 pm IST
in ರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ
Centre Cautions Parents and Students on Online Courses

ಆನ್‌ಲೈನ್‌ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಎಚ್ಚರಿಸಿದ ಕೇಂದ್ರ ಸರಕಾರ

Share on FacebookShare on TwitterTelegram

ನವದೆಹಲಿ: ಭಾರತ ಸರಕಾರವು ವಿದ್ಯಾರ್ಥಿಗಳ ಪೋಷಕರಿಗೆ ಆನ್‌ಲೈನ್‌ ಕೋಚಿಂಗ್‌ ನೀಡುವ ತಂತ್ರಜ್ಞಾನ ಸಂಸ್ಥೆಗಳ (ed-tech) ಬಗ್ಗೆ ಜಾಗರೂಕತೆಯಿಂದಿರಬೇಕೆಂದು ಸಲಹೆ ನೀಡಿದೆ. ತಂತ್ರಜ್ಞಾನದ ಮೂಲಕ ಕೋಟ್ಯಂತರ ಸಂಖ್ಯೆಯ ವಿದ್ಯಾರ್ಥಿಗಳನ್ನು ಸುಲಭವಾಗಿ ತಲುಪುವ ಹೆಚ್ಚಿನ ಅವಕಾಶಗಳಿರುವುದರಿಂದ ಈಗಾಗಲೇ ವಿದ್ಯಾರಂಗದಲ್ಲಿ ನೂರಾರು ತಂತ್ರಜ್ಞಾನ ಸಂಸ್ಥೆಗಳು ಆನ್‌ಲೈನ್‌ ಮೂಲಕ ಅನೇಕ ಕೋರ್ಸ್‌ಗಳನ್ನು ನೀಡಲು, ನೇರ ಶಿಕ್ಷಣ ನೀಡಲು, ಹಾಗೂ ಸ್ಪರ್ಧಾಪರೀಕ್ಷೆಗಳಿಗೆ ತರಬೇತಿ ನೀಡಲು ಪ್ರಾರಂಭಿಸಿದ್ದು ಇದೊಂದು ದೊಡ್ಡ ವ್ಯವಹಾರವಾಗಿದೆ. ಈ ಹಿನ್ನೆಲೆಯಲ್ಲಿ ಪೋಷಕರು, ವಿದ್ಯಾರ್ಥಿಗಳು, ಹಾಗೂ ಶಾಲಾ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಎಲ್ಲಾ ಫಲಾನುಭವಿಗಳು ಯಾವ ರೀತಿಯ ವಿಷಯಗಳನ್ನು ಬೋಧಿಸುವ ಆನ್‌ಲೈನ್‌ ಸಂಸ್ಥೆಗಳಿಂದ ಸೇವೆ ಪಡೆಯಬೇಕು ಹಾಗೂ ಸಂಸ್ಥೆಯ ವಿಶ್ವಾಸಾರ್ಹತೆಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಮುನ್ನಡೆಯಬೇಕೆಂದು ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಗುರುವಾರ ನೀಡಿರುವ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. 

ಅದರಲ್ಲೂ, ಉಚಿತ ಸೇವೆ ನೀಡುವುದಾಗಿ ಘೋಷಿಸುವ ಸಂಸ್ಥೆಗಳ ವಿವರಗಳನ್ನು ಬಹಳ ಜಾಗರೂಕತೆಯಿಂದ ಪರಿಶೀಲಿಸಿ ಮುಂದುವರೆಯಬೇಕೆಂದು ಮಾರ್ಗಸೂಚಿಯಲ್ಲಿ ಒತ್ತಿ ಹೇಳಲಾಗಿದೆ.

ಇಂತಹ ಕೆಲವು ಸಂಸ್ಥೆಗಳು ಉಚಿತ ಸೇವೆ ನೀಡುವುದಾಗಿ ಹೇಳಿ ಪೋಷಕರ ಮತ್ತು ವಿದ್ಯಾರ್ಥಿಗಳಲ್ಲಿ ಆಮಿಷವೊಡ್ಡಿ ಎಲೆಕ್ಟ್ರಾನಿಕ್‌ ಪಾವತಿಯ ನಿಬಂಧನೆಗಳಿಗೆ ಸಹಿ ಹಾಕಿಸಿಕೊಂಡು ಎಲೆಕ್ಟ್ರಾನಿಕ್ ಹಣ ವರ್ಗಾವಣೆಯ ಮೂಲಕ ಹಣ ವಸೂಲಿ ಮಾಡಿ ವಂಚಿಸುತ್ತಿರುವುದು ಸಾಕ್ಷರತೆ ಮತ್ತು ಶಾಲಾ ವಿದ್ಯಾಭ್ಯಾಸ ಇಲಾಖೆಯ ಗಮನಕ್ಕೆ ಬಂದಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಪೋಷಕರಿಗೆ ಕೇಂದ್ರ ಸರಕಾರವು ನೀಡಿರುವ ಮಾರ್ಗದರ್ಶಿ ಸಲಹೆಗಳ ಸಂಪೂರ್ಣ ವಿವರ ಕೆಳಕಂಡಂತಿದೆ: 

  1. ಕೆಲ ಸಂಸ್ಥೆಗಳು ಆರಂಭಿಕ ಕೋರ್ಸ್‌ಗಳನ್ನು ಉಚಿತವಾಗಿ ನೀಡಿ ಮುಂದುವರೆಸಬಯಸುವವರು ನಿಗದಿತ ಶುಲ್ಕ ಪಾವತಿ ಸೇವೆಯನ್ನು ಮುಂದುವರೆಸುವ ತಂತ್ರ ಬಳಸಬಹುದು, ಆದ್ದರಿಂದ ಸ್ವಯಂಚಾಲಿತ/ಆಟೋಡೆಬಿಟ್‌ ಪಾವತಿ ವಿಧಾನದ ಆಯ್ಕೆಯನ್ನು ಉಪಯೋಗಿಸುವಾಗ ಎಚ್ಚರವಿರಲಿ.
  2. ನಿಯಮ-ನಿಬಂಧನೆಗಳನ್ನು ಬಹಳ ಎಚ್ಚರಿಕೆಯಿಂದ ಓದಿ ಅರ್ಥಮಾಡಿಕೊಂಡು ನಿಮ್ಮ ಸಮ್ಮತಿ ಸೂಚಿಸಲು ಮರೆಯದಿರಿ, ಏಕೆಂದರೆ ಒಮ್ಮೆ ಸಮ್ಮತಿ ಸೂಚಿಸಿದ ನಂತರ ನಿಮ್ಮ ಐಪಿ ವಿಳಾಸ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ.
  3. ನೀವು ಕೊಳ್ಳ ಬಯಸುವ ಅಥವಾ ಚಂದದಾರರಾಗಬಯಸುವ ಸೇವೆ/ಸಾಧನಗಳನ್ನು ಒದಗಿಸುವ ತಂತ್ರಜ್ಞಾನ ಸಂಸ್ಥೆಯಿಂದ ತೆರಿಗೆ ನೀಡಿರುವ ಬಿಲ್‌/ಇನ್ವಾಯ್ಸ್‌ಗಳನ್ನು ಕೇಳಿ ಪಡೆಯಿರಿ.
  4. ಸಂಸ್ಥೆಯು ನೀಡುವ ವಿದ್ಯಾಮಾಹಿತಿಯು ನಿಮ್ಮ ಮಗುವಿನ ಪಠ್ಯಕ್ರಮಕ್ಕೆ ಸರಿಹೊಂದುತ್ತದೆಯೇ ಹಾಗೂ ಅದನ್ನು ನಿಮ್ಮ ಮಗು ಅರ್ಥ ಮಾಡಿಕೊಳ್ಳಬಲ್ಲದೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  5.  ಅದರ ಶುಲ್ಕವನ್ನು ಪಾವತಿಸುವ ಮುನ್ನ ನಿಮ್ಮಾ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಪಡೆದುಕೊಳ್ಳಿ ಹಾಗೂ ಸಂದೇಹಗಳನ್ನು ನಿವಾರಿಸಿಕೊಳ್ಳಿ.
  6. ಪೋಷಕ ನಿಯಂತ್ರಣ ವಿಧಾನಗಳನ್ನು ಹಾಗೂ ಸುರಕ್ಷತಾ ಕ್ರಮಗಳನ್ನು ಚಾಲನೆಗೊಳಿಸಿಕೊಳ್ಳಿ, ಇದರಿಂದ ನಿಮ್ಮ ಮಗು ಅನವಶ್ಯಕ ಮಾಹಿತಿ ಸಂಪರ್ಕವನ್ನು ಅಥವಾ ಹೆಚ್ಚಿನ ಶುಲ್ಕ ಪಾವತಿಸಬೇಕಾದ ಪರಿಸ್ಥಿತಿಗಳನ್ನು ತಡೆಯಬಹುದು.
  7. ಮಾರಾಟ ಕರೆಗಳ ವಿವರಗಳನ್ನು ಹಾಗೂ ನಿಮ್ಮ ಒಪ್ಪಿಗೆಯಿಲ್ಲದ ಒತ್ತಾಯಪೂರ್ವಕ ಸೇವೆಗಳ ಚಂದಾದಾರಿಕೆಯನ್ನು ದಾಖಲಿಸಿಕೊಳ್ಳಿ, ಇದರಿಂದ ಅನವಶ್ಯಕ ಚಂದಾದಾರಿಕೆಯನ್ನು ನಿಷೇಧಿಸಿಕೊಳ್ಳಬಹುದು.
  8. ಯಾವುದೇ ಚಂದಾದಾರಿಕೆಯನ್ನು ಪಡೆಯುವ ಮೊದಲು ವಿದ್ಯಾ ಸಚಿವಾಲಯವು ನೀಡಿರು ಪ್ರಾಜ್ಞತಾ ಮಾರ್ಗದರ್ಶಿ ಸೂತ್ರಗಳಲ್ಲಿ ಹೇಳಲಾಗಿರುವ ಸುರಕ್ಷಾ ವಿಧಾನಗಳ ಮಾಹಿತಿ ಪಡೆದುಕೊಳ್ಳಿ.
  9. ಜಾಹಿರಾತುಗಳನ್ನು ನಂಬಿ ಸಾಲಗಳಿಗೆ ಅರ್ಜಿ ಸಲ್ಲಿಸಬೇಡಿ ಹಾಗೂ ಮೊಬೈಲ್ ಆಪ್‌ಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳದೆ ಕೊಂಡುಕೊಳ್ಳದಿರಿ.
  10. ನಿಮ್ಮ ವೈಯಕ್ತಿಕ ಮಾಹಿತಿಗಳನ್ನೊಳಗೊಂಡ (ಬ್ಯಾಂಕ್‌ ವಿವರಗಳು, ಇತ್ಯಾದಿ) ಬರಹ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ.
    ಆಪ್‌ಗಳನ್ನು ಕೊಳ್ಳುವುದರ ಬದಲು ಒಟಿಪಿ (ಒನ್‌-ಟೈಮ್‌-ಪಾಸ್‌ವರ್ಡ್‌) ಮೂಲಕ ಹಣ ಪಾವತಿ ಮಾಡುವುದು ಒಳ್ಳೆಯ ವಿಧಾನ.

ಇಂತಹ ಆನ್‌ಲೈನ್‌ ಸಂಸ್ಥೆಗಳು ನಾಯಿಕೊಡೆಗಳಂತೆ ಹಬ್ಬುತ್ತಿದ್ದು ಅವುಗಳಿಗೆ ಚಂದಾದಾರರಾಗುವ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಂಖ್ಯೆಯೂ ಅತಿ ವೇಗವಾಗಿ ಬೆಳೆಯುತ್ತಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಅದೇ ರೀತಿ, ಇಂತಹ ಸಂಸ್ಥೆಗಳೂ ಸಹ ತಾವು ನೀಡಿರುವ ಭರವಸೆಗಳ ಪ್ರಕಾರವೇ ನಡೆದುಕೊಳ್ಳಬೇಕು ಎಂದೂ ಸಹ ಹೇಳಲಾಗಿದೆ.

ಇಂತಹ ಸಂಸ್ಥೆಗಳು ಅನುಸರಿಸಬೇಕಾದ ಜಾಹಿರಾತುಗಳ ಬಗೆಗಿನ ಮಾರ್ಗದರ್ಶಿ ಸೂತ್ರಗಳನ್ನೂ ಸಹ ಇಲ್ಲಿ ನೀಡಲಾಗಿದೆ. ಅದೇನೆಂದರೆ, ಜಾಹಿರಾತುದಾರರು ತಮ್ಮ ಜಾಹಿರಾತಿನಲ್ಲಿ ಸೂಕ್ತವಾದ ಆಧಾರಗಳು ಇರದಿದ್ದ ಪಕ್ಷದಲ್ಲಿ ಇಂತಹ ಸಂಸ್ಥೆಗಳು/ಕೋರ್ಸ್‌ಗಳು ಆಧಿಕೃತ, ಅಂಗೀಕೃತ, ಆಧಿಕಾರಿಕ, ಅನುಮತಿಸಲಾದ, ಅಂಗೀಕರಿಸಲಾದ, ಸಂಯೋಜನೆ ಹೊಂದಿದ, ದೃಢಪಡಿಸಲಾದ, ಅಥವಾ ಕಾನೂನಿನ ಮೂಲಕ ಸ್ಥಾಪಿಸಲಾದ ಸಂಸ್ಥೆಗಳು/ಕೋರ್ಸ್‌ಗಳು ಎಂಬ ಭಾವನೆ ಜನರಿಗೆ ಬರದಂತೆ ನೋಡಿಕೊಳ್ಳಬೇಕು ಎಂದೂ ನಿರ್ದೇಶಿಸಲಾಗಿದೆ.

Central government releases guidelines to parents and students about online edu-tech companies

ಇದನ್ನೂ ಓದಿ: Education:ಶಿಕ್ಷಣ ವ್ಯಾಪಾರದ ಸರಕಲ್ಲ, ಬದಲಾಗಿ ಪರಿಪೂರ್ಣ ವ್ಯಕ್ತಿಯನ್ನಾಗಿಸುತ್ತದೆ: ಶಾಸಕ ಸಿ.ಟಿ ರವಿ

ಇದನ್ನೂ ಓದಿ: ಸೋಲನ್ನು ಒಪ್ಪಿಕೊಳ್ಳಲು ಮಕ್ಕಳನ್ನು ಸಿದ್ಧಪಡಿಸಿ

Tags: Central Govt DirectiveEducationOnline CoursesOnline LessonSchool Education
ShareSendTweetShare
Join us on:

Related Posts

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

National News: ಅಪ್ಪನ ಐಡಿಯಾದಿಂದ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಮಗ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

ಭಾರತದಲ್ಲಿ ಉಪಕರಣ ಮಾರಾಟಕ್ಕೂ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆ ಕಡ್ಡಾಯ

Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

Bengaluru News: ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್ : ಕೆಂದ್ರ ಸಚಿವ ಕುಮಾರಸ್ವಾಮಿ ಬಂಪರ್

Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

Rajastan News: ಮೈಸೂರು ಪಾಕ್‌ನಲ್ಲಿ ‘ಪಾಕ್’ ಇರುವ ಕಾರಣಕ್ಕೆ ತಿಂಡಿಯ ಹೆಸರೇ ಚೇಂಜ್..

National News: ಚಿಪ್ಸ್ ಕದ್ದನೆಂದು ಆರೋಪಿಸಿದ ಅಂಗಡಿಯವ. ಅದಕ್ಕೆ ಬಾಲಕ ಮಾಡಿದ್ದೇನು ಗೊತ್ತಾ..?

National News: ಚಿಪ್ಸ್ ಕದ್ದನೆಂದು ಆರೋಪಿಸಿದ ಅಂಗಡಿಯವ. ಅದಕ್ಕೆ ಬಾಲಕ ಮಾಡಿದ್ದೇನು ಗೊತ್ತಾ..?

National Political News: ಮತ್ತೆ ತನ್ನ ಅಳಿಯನಿಗೆ ಪಕ್ಷದಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ಮಾಯಾವತಿ

National Political News: ಮತ್ತೆ ತನ್ನ ಅಳಿಯನಿಗೆ ಪಕ್ಷದಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ಮಾಯಾವತಿ

Discussion about this post

e Paper – January 4, 2022
ಇ-ಪತ್ರಿಕೆ

e Paper – January 4, 2022

Recent News.

Chanakya Neeti: ಜೀವನ ಅಂದ್ರೆ ಹೀಗಿರಬೇಕು ಅಂತಾರೆ ಚಾಣಕ್ಯರು

Chanakya Neeti: ಇಂಥವರನ್ನು ಎಂದಿಗೂ ಮನೆಗೆ ಕರಿಯಬೇಡಿ ಎನ್ನುತ್ತಾರೆ ಚಾಣಕ್ಯರು..

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

Mahabharat Stories: ಮಹಾಭಾರತಕ್ಕೆ ಸಂಬಂಧಿಸಿದ 5 ಕಥೆಗಳು

ನಿಮ್ಮ ದೃಷ್ಟಿ ತೀಕ್ಷ್ಣವಾಗಿರಬೇಕು, ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ

Beauty Tips: ಈ 6 ಸೌಂದರ್ಯ ಸಲಹೆ ಅನುಸರಿಸಿ, ನಿಮ್ಮ ಬ್ಯೂಟಿ ಹೆಚ್ಚಿಸಿ

Spiritual Story: ವಿಷ್ಣು ಮತ್ತು ಲಕ್ಷ್ಮೀ ಮಾರುವೇಷದಲ್ಲಿ ಭೂಲೋಕಕ್ಕೆ ಬಂದಾಗ ಏನಾಗಿತ್ತು..? ಸುಂದರ ಕಥೆ

Spiritual: 6 ಪುರಾಣ ಕಥೆಗಳು: ಗಂಗಾ ಸ್ನಾನ, ಭೃಗು ಋಷಿ ಶಾಪ, ಹನುಮನ ಗಧೆ ಹಲವು ವಿಷಯಗಳ ಬಗ್ಗೆ ಕಥೆ

ನೆನೆಸಿಟ್ಟ ಹೆಸರು ಕಾಳನ್ನು ಒಂದು ತಿಂಗಳು ಸೇವಿಸಿ ನೋಡಿ, ವಾವ್ ಅಂತಾ ನೀವೇ ಹೇಳ್ತೀರಾ..

Recipe: 10 ಬಗೆಯ ರುಚಿಯಾದ ಧಿಡೀರ್ ತಿಂಡಿಗಳ ರೆಸಿಪಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Health Tips: ಒಂದೇ ಲೇಖನದಲ್ಲಿ 8 ಆರೋಗ್ಯ ಸಮಸ್ಯೆ, ಪರಿಹಾರದ ಬಗ್ಗೆ ಉಪಯುಕ್ತ ಮಾಹಿತಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: 10 ವಿಧದ ಟೀ ಟೈಮ್ ಸ್ನ್ಯಾಕ್ಸ್ ರೆಸಿಪಿ

Recipe: ಚಪಾತಿಗೆ ಸಖತ್ ಕಾಂಬಿನೇಷನ್ ಈ ಕೊಂಕಣಿ ಶೈಲಿಯ ಬದ್ನೇಕಾಯಿ ಸುಕ್ಕೆ

Gravy Recipe: ಚಪಾತಿಗೆ ಮ್ಯಾಚ್ ಆಗುವ 6 ವೆರೈಟಿ ಗ್ರೇವಿ ರೆಸಿಪಿ

  • Home
  • About Us
  • Contact Us
  • Terms of Use
  • Privacy Policy

© 2025 | SHRI NEWS | Designed By KIPL

No Result
View All Result
  • Home
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ರಾಜಕೀಯ
  • ಕ್ರೀಡೆ
  • ಸಿನಿಮಾ
  • ಅಧ್ಯಾತ್ಮ
  • ಬ್ಯೂಟಿ ಟಿಪ್ಸ್

© 2025 | SHRI NEWS | Designed By KIPL

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In