ಚಿಕ್ಕಮಗಳೂರು: ಅರಸು ಸಂಘ ನೂರು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅರಸು ಮಹಾ ಸಮ್ಮೇಳನ ಮಾಡುವ ಗುರಿ ಹೊಂದಲಾಗಿದೆ ಎಂದು ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅವರು ನಗರ ಹೊರವಲಯದ ತೇಗೂರಿನಲ್ಲಿ ಭಾನುವಾರ ಜಿಲ್ಲಾ ಅರಸು ಸಂಘದಿಂದ ನಿರ್ಮಿಸಿದ್ದ ಅರಸು ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ ಸಮುದಾಯದ ಎಲ್ಲರೂ ಬೆಂಬಲಿಸಬೇಕು, ಅರಸು ಮಹಾ ಸಮ್ಮೇಳನ ಮಾಡಿ ಸುಮಾರು ೪೦ ವರ್ಷಗಳಾಗಿದೆ ಹಾಗಾಗಿ ಜಿಲ್ಲೆಯ ಪ್ರತಿ ಪ್ರಮುಖರು ಸಮ್ಮೇಳನಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.
ಬೇರೆ ಬೇರೆ ಪ್ರದೇಶದಲ್ಲಿ ಒಂದೊಂದು ಬೆರಳಾಗಿರುವ ಅರಸು ಸಮುದಾಯ ಎಲ್ಲಸೇರಿ ಮುಷ್ಠಿಯಾದರೆ ಮಾತ್ರ ಮುಂದೆ ಶಕ್ತಿಯುತವಾಗಿರಲು ಸಾಧ್ಯ. ಬ್ರಿಟೀಷರ ಕಾಲದಲ್ಲಿ ಅವರ ಸಂಖ್ಯೆ ಹೆಚ್ಚಿಲ್ಲದಿದ್ದರೂ ಕೂಡ ಭಾರತದಲ್ಲಿ ಮುನ್ನೂರು ವರ್ಷಗಳ ಕಾಲ ಸಂಪೂರ್ಣವಾಗಿ ಆಡಳಿತ ನಡೆಸಿದ್ದರು ಕಾರಣ ಅವರ ಬೆರಳುಗಳು ಮುಷ್ಠಿಯಾಗಿತ್ತು ಎಂದರು
ಶಾಸಕ ಸಿ.ಟಿ.ರವಿ ಮಾತನಾಡಿ, ಯಾರಿಗೆ ಕ್ಷಾತ್ರಗುಣವಿರುತ್ತದೊ ಅವನು ಕ್ಷತ್ರಿಯನಾಗುತ್ತಾನೆ, ವ್ಯಾಪಾರಿ ಮನೋಭಾವದವನು ವೈಶ್ಯನಾಗುತ್ತಾನೆ, ಇವೆಲ್ಲದಕ್ಕೂ ಆದಾರವಾಗಿ ನಿಲ್ಲುವವನು ಶೂದ್ರನಾದರೆ ಬ್ರಹ್ಮಜ್ಞಾನವನ್ನು ಪಡೆದು ಸಮಾಜಕ್ಕಾಗಿ ಬದುಕುವವನು ಬ್ರಾಹ್ಮಣನಾಗುತ್ತಾನೆ. ಇದು ಒಂದು ಕಾಲದಲ್ಲಿ ಗುಣವನ್ನು ಆಧರಿಸಿದ ವ್ಯವಸ್ಥೆ ಯಾಗಿತ್ತು. ಬ್ರಹ್ಮಜ್ಞಾನವನ್ನು ಪಡೆದು ಸಮಾಜಕ್ಕಾಗಿಯೇ ಬದುಕುವ ವರ್ಗ ಉಳಿದಿದೆಯಾ ಎಂಬುದು ಪ್ರಶ್ನಾರ್ಥಕ ಚಿನ್ಹೆ. ಕ್ರಾತ್ರಗುಣವಿದೆ ಹಾಗಾಗಿಯೇ ನಾಡಿನ ರಕ್ಷಣೆಯಾಗಿದೆ. ಆದರೆ ಕ್ಷಾತ್ರಗುಣ ಕಳೆದುಕೊಂಡವರು ಹೆಸರಿಗಷ್ಟೆ ಕ್ಷತ್ರಿಯರಾಗುತ್ತಾರೆ ಗುಣದಲ್ಲಿ ಕ್ಷತ್ರಿಯರಾಗುವುದಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಮಿಲ್ಲರ್ ಅವರ ಅಯೋಗ ರಚನೆ ಮಾಡಿದ ಒಂದು ವರ್ಷದಲ್ಲಿ ರಾಜ್ಯದಲ್ಲಿರುವ ಅರಸು, ಒಕ್ಕಲಿಗ, ಲಿಂಗಾಯಿಯುವ, ಎಸ್ಸಿ, ದೇವಾಂಗಶೆಟ್ಟಿಯಿಂದ ಹಿಡಿದು ಎಲ್ಲ ವರ್ಗ ಗಳಿಗೆ ಶೇ.೭೫ ಮೀಸಲಾತಿ ಕೊಟ್ಟ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಆಂಗ್ಲರ ಆಡಳಿತವಿದ್ದರೂ ಕೂಡ ದಿಟ್ಟತನ ತೋರಿಸಿದ್ದಾರೆ ಎಂದರು.
ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಜಿಲ್ಲಾ ಅರಸು ಸಂಘದ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಗ್ರಾಪಂ ಅಧ್ಯಕ್ಷ ಗಜೇಂದ್ರರಾಜ್ ಅರಸ್, ಉಪಾಧ್ಯಕ್ಷೆ ಹೇಮಾವತಿ ಕೃಷ್ಣರಾಜೇ ಅರಸ್, ರಾಜು ಕ್ಷತ್ರಿಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಶ್ರೀಧರ್ ೫ರಾಜೇ ಅರಸ್, ರಾಜ್ಯಾಧ್ಯಕ್ಷ ಶ್ರೀಧರ್ ರಾಜೇ ಅರಸ್, ಅರಸು ಸಂಘದ ರಾಜ್ಯಧ್ಯಕ್ಷ ಸುಗಂಧರಾರಾಜೇ ಅರಸ್, ಶಿವಾನಂದ ರಾಜ್ ಅರಸ್, ಮಲ್ಲರಾಜ್ ಅರಸ್, ಸುಂದರ್ ರಾಜ್ ಅರಸ್, ಜಿಪಂ ಮಾಜಿ ಸದಸ್ಯೆ ಜಸಂತಾ ಅನಿಲ್‌ಕುಮಾರ್, ಜಿ.ನಾಗರಾಜು, ಸತ್ಯನಾರಾಯಣ ರಾಜು, ಭೋಜರಾಜ್ ಅರಸ್, ಭರತ್ ರಾಜ್‌ಅರಸ್, ಯೋಗೀಶ್ ರಾಜ್ ಅರಸ್, ನಾಗಶ್ರೀ ತ್ಯಾಗರಾಜ್ ಇದ್ದರು.
ಇದನ್ನೂ ಓದಿ: e Paper – November 1, 2021
ಇದನ್ನೂ ಓದಿ:Home Minister’s Medal: ಕರ್ನಾಟಕದ 11 ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ಪದಕ ಘೋಷಣೆ

























Discussion about this post