ಚಿಕ್ಕಮಗಳೂರು: ಕೆಲವೊಮ್ಮೆ ಸತ್ಯ ಮಾತನಾಡಿದರೆ ಅದು ವಿವಾದವಾಗಿ ಪರಿವರ್ತನೆಯಾಗಿ ಬಿಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರ ಹೊರವಲಯದ ತೇಗೂರಿನಲ್ಲಿ ಭಾನುವಾರ ಜಿಲ್ಲಾ ಅರಸು ಸಂಘದಿಂದ ನಿರ್ಮಿಸಿದ್ದ ಅರಸು ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಟಿಪ್ಪುವಿನ ಗುಣಗಾನ ಮಾಡುವ ಜನರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ರ ಕೊಡುಗೆ ಸ್ಮರಿಸಬೇಕೆಂದು ಅನ್ನಿಸಲೇ ಇಲ್ಲ ಎಂದರು.
ಇತಿಹಾಸದಲ್ಲಿ ವಾಸ್ತವಿಕ ಸಂಗತಿಯನ್ನು ಬಿಂಬಿಸುವ ಮೂಲಕ ಯಾವ ಕೃತಜ್ಞತೆಯನ್ನು ಸಮಾಜ ಕೊಡಬೇಕಿತ್ತೊ ಆ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. ಆ ದಿನದಲ್ಲಿದ್ದ ಹೈದರಾಲಿ ಮಹಾರಾಣಿ ಲಕ್ಷ್ಮಮ್ಮಣ್ಣಿಯವರನ್ನು ಅರಮನೆಯಲ್ಲೆ ಸೆರಮನೆಯಲ್ಲಿಟ್ಟು ಮೋಸದಿಂದ ಕಬಳಿಸಿದ ವಾಸ್ತವಿಕ ಸತ್ಯ ಸಂಗತಿಯನ್ನು ಹೇಳಿದರೆ ಬಹುಶಃ ಕೆಲವರ ಕಣ್ಣಿಗೆ ಅದು ಕೋಮುವಾದವಾಗಿ ಕಂಡು ಬಿಡುತ್ತದೆ ಎಂದರು.
ಟಿಪ್ಪುವಿನ ಕಾಲದಲ್ಲಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಹೇಳಿದ ಸತ್ಯ ಸಂಗತಿಯನ್ನು ಪ್ರಚುರ ಪಡಿಸಿದರೆ ಅಂದಿನ ಮಹಾರಾಜರು ಮಾಡುತ್ತಿದ್ದ ಸಾಮಾನ್ಯ ಸಂಗತಿ ಎಂದು ಕೆಲವರು ತೇಲಿಸಿ ಬಿಡುತ್ತಾರೆ. ಶ್ರೀರಂಗಪಟ್ಟಣ, ಮೇಲುಕೋಟೆಯಲ್ಲಿ ಇಂದಿಗೂ ಸಾವಿರಾರು ಕುಟುಂಬಗಳು ದೀಪಾವಳಿಯನ್ನು ಆಚರಿಸುವುದಿಲ್ಲ ಎಮದು ತಿಳಿಸಿದರು
ದೇವನಹಳ್ಳಿಯಿಂದ ಚಿತ್ರದುರ್ಗದ ಕೋಟೆ ವರೆಗೂ ಹೆಸರನ್ನು ಬದಲಾಯಿಸಿದ್ದು ಟಿಪ್ಪುವಿನ ಕಾಲಘಟ್ಟದಲ್ಲೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಇಂದಿಗೂ ಪರ್ಷಿಯನ್ ಭಾಷೆಯ ಶಬ್ದಗಳು ಉಳಿದುಕೊಂಡಿದ್ದರೆ ಆಡಳಿತ ಭಾಷೆಯಾಗಿದ್ದ ಕನ್ನಡದ ಬದಲಿಗೆ ಪರ್ಷಿಯನ್ ಹೇರಿದ್ದ ಘೋರ ಸಂಗತಿಯನ್ನು ನಾವು ಮರೆಯಬಾರದು ಹೀಗೆ ತುಲನೆ ಮಾಡಿದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದ್ದು ಅಗಾಧವಾದ ಮೇರು ವ್ಯಕ್ತಿತ್ವ ಕಟ್ಟಿಕೊಡುತ್ತದೆ ಅದಕ್ಕೆ ಅಪಚಾರ ಬಗೆಯುವ ಕೆಲಸ ಯಾರೂ ಮಾಡಬಾರದು ಎಂದರು.
ಇದನ್ನೂ ಓದಿ: Conference: ಶೀಘ್ರದಲ್ಲಿ ಅರಸು ಮಹಾ ಸಮ್ಮೇಳನ
ಇದನ್ನೂ ಓದಿ: e Paper – November 1, 2021

























Discussion about this post