ಬೆಂಗಳೂರು: ರಾಜ್ಯದಲ್ಲಿ 320 ಮಂದಿಗೆ ಕೊರೋನಾ ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3000105ಕ್ಕೆ ಏರಿಕೆಯಾಗಿದೆ. 317 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಒಟ್ಟು ಗುಣಮುಖರಾದವರ ಸಂಖ್ಯೆ 29,54,513ಕ್ಕೆ ಏರಿಕೆಯಾಗಿದೆ.
ಇಬ್ಬರು ಸೋಂಕಿತರು ಇಂದು ಮೃತಪಟ್ಟಿದ್ದು, ಸೋಂಕಿನಿಂದ ಈವರೆಗೂ ಮೃತಪಟ್ಟವರ ಒಟ್ಟು ಸಂಖ್ಯೆ 38,257ಕ್ಕೆ ಏರಿಕೆಯಾಗಿದೆ. ಸೋಂಕಿನ ಪ್ರಮಾಣ ಶೇ. 0.30 ರಷ್ಟಿದ್ದು, ಮರಣ ಪ್ರಮಾಣ ಶೇ. 0.62 ರಷ್ಟಿದೆ. ರಾಜ್ಯದಲ್ಲಿ ಸದ್ಯ 7,306 ಸಕ್ರಿಯ ಪ್ರಕರಣಗಳಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Corona infection

























Discussion about this post