ಬೆಂಗಳೂರು: ರಾಜ್ಯ ಸರಕಾರ ಏರ್ಪೋರ್ಟ್ಗಳಲ್ಲಿ ಕೊರೋನಾ ಪರೀಕ್ಷೆಗಳಿಗೆ ದರ ನಿಗದಿ ಮಾಡಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದು, ಒಮಿಕ್ರಾನ್ ವೈರಸ್ ಪ್ರಕರಣ ವರದಿಯಾದ ಹಿನ್ನೆಲೆ ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರನ್ನು ಕಟ್ಟು ನಿಟ್ಟಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಲ್ಲಿನ ಕೋವಿಡ್ ಪರೀಕ್ಷಾ ಪ್ರಯೋಗಾಲಯದಲ್ಲಿನ ದರಗಳನ್ನು ಈ ಕೆಳಗಿನಂತೆ ನಿಗದಿ ಪಡಿಸಿರೋದಾಗಿ ತಿಳಿಸಿದೆ. ವಿಮಾನ ನಿಲ್ದಾಣಗಳಲ್ಲಿ ನಿಗದಿ ಪಡಿಸಿರುವಂತ ಕೊರೋನಾ ಪರೀಕ್ಷಾ ದರಪಟ್ಟಿ ಆರ್ಟಿಪಿಸಿಆರ್ ಟೆಸ್ಟ್ಗೆ 500 ರೂಪಾಯಿ ನಿಗದಿ ಮಾಡಲಾಗಿದ್ದು, ಅಬಾಟ್ ಐಡಿ ಟೆಸ್ಟ್ಗೆ 3,000 ರೂಪಾಯಿ, ಥರ್ಮೋ ಫಿಶರ್ ಅಕ್ಯುಲಾ ಟೆಸ್ಟ್ಗೆ 1,500 ರೂಪಾಯಿ, ಟಾಟಾ ಎಂಡಿ3 ಜೆನ್ ಫಾಸ್ಟ್ ಟೆಸ್ಟ್ಗೆ 1,200 ರೂಪಾಯಿ ಹಾಗೂ ಸೆಫೀಡ್ಸ್ಜೀನ್ ಎಕ್ಸ್ಪರ್ಟ್ ಟೆಸ್ಟ್ಗೆ 2,750 ರೂಪಾಯಿ ನಿಗದಿಪಡಿಸಲಾಗಿದೆ.
Discussion about this post