ಚಿಕ್ಕಮಗಳೂರು: ನಗರಸಭೆಯಲ್ಲಿ ಅವಧಿ ಮುಗಿದರೂ ಚುನಾವಣೆಗೆ ಸರ್ಕಾರ ಹಾಗೂ ಚುನಾವಣಾ ಆಯೋಗವನ್ನು ಒತ್ತಾಯಿಸದೆ ಮೀನಾಮೇಷ ಏಣಿಸುತ್ತಿರುವುದರ ಹಿಂದೆ ಇಲ್ಲಿನ ಸ್ಥಳೀಯ ಶಾಸಕರ ಕೈವಾಡವಿದೆ ಎಂದು ಸಿ.ಪಿಐನ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಗರಸಭೆಯಲ್ಲಿ ಮೂರು ವರ್ಷ ಕಳೆದರೂ ಚುನಾವಣೆ ಮೂಲಕ ಚುನಾಯಿತ ಪ್ರತಿನಿಧಿಗಳ ಆಯ್ಕೆಯಾಗಿಲ್ಲ. ಇದರಿಂದಾಗಿ ಇಂದು ಭ್ರಷ್ಟಾಚಾರ, ಲೂಟಿಕೋರರ ತಾಣವಾಗಿ ಮಾರ್ಪಟ್ಟಿದೆ ಎಂಬುದು ಸಾರ್ವಜನಿಕರ ಆರೋಪ. ನಗರಸಭೆ ಅಧಿಕಾರವನ್ನು ಆಡಳಿತ ಪಕ್ಷದಲ್ಲಿಯೇ ಹಿಡಿದಿಟ್ಟುಕೊಳ್ಳಲು ಹುನ್ನಾರ ನಡೆದಿದೆ. ನಗರದಲ್ಲಿನ ವಿವಿಧ ಯೋಜನಾ ಕಾಮಗಾರಿಗಳಲ್ಲಿ ಕೋಟ್ಯಾಂತರ ರೂ ಅವ್ಯವಹಾರವಾಗಿದ್ದು ತನಿಖೆ ನಡೆಸುವಂತೆ ಒತ್ತಾಯಿಸಿದರು.
ನಗರ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳ ಗುತ್ತಿಗೆ ಸಂಪೂರ್ಣವಾಗಿ ಇಲ್ಲಿನ ಶಾಸಕರ ಹಿಡಿತದಲ್ಲಿದ್ದು ಅವ್ಯವಹಾರಕ್ಕೆ ತಡೆಯಾಗದಂತೆ ಮಾಡಲು ಪಕ್ಷದ ಹಿಂಬಾಲಕರುಗಳಿAದ ಚುನಾವಣೆ ನಡೆಯದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಮೀಸಲಾತಿ ಪಟ್ಟಿ ಪ್ರಕಟವಾದಾಗ ಅದೇ ಹಿಂಬಾಲಕರು ಮತ್ತೊಮ್ಮೆ ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸಿ ಚುನಾವಣೆಗೆ ತಡೆಯೊಡ್ಡಿದ್ದಾರೆ ಎಂದು ದೂಷಿಸಿದರು.
ನಗರಸಭೆ ಆಡಳಿತವನ್ನು ತಮ್ಮ ಹಾಗೂ ಬೆಂಬಲಿಗರ ಹಿಡಿತದಲ್ಲಿರುವಂತೆ ಮಾಡಲು ಶಾಸಕರು ದೊಡ್ಡ ಸಂಚು ಮಾಡಿದ್ದಾರೆ. ಇದಕ್ಕೆ ಸಿಪಿಐ ವಿರೋಧ ವ್ಯಕ್ತಪಡಿಸಲಿದೆ. ಚುನಾವಣೆ ನಡೆಸುವ ಸಂಬAಧ ಶಾಸಕರು ಕೂಡಲೇ ಸರ್ಕಾರದೊಟ್ಟಿಗೆ ಚರ್ಚಿಸಿ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಮಾಡುವಂತೆ ಆಗ್ರಹಿಸಿದರು.
ಸಿಪಿಐ ಮುಖಂಡ ಅಮ್ಜದ್ ಮಾತನಾಡಿ ಪ್ರಜಾಪ್ರತಿನಿಧಿ ಕಾಯ್ದೆ ದುರ್ಬಲಗೊಳಿಸುವ ಮೂಲಕ ಚುನಾವಣೆ ನಡೆಯದಂತೆ ದೊಡ್ಡ ಷಡ್ಯಂತ್ರ ರೂಪಿಸಲಾಗಿದೆ. ೩ ವರ್ಷ ೭ ತಿಂಗಳು ಕಳೆದರೂ ಚುನಾವಣೆ ನಡೆಸದೆ ಶಾಸಕರು ನಿರ್ಲಕ್ಷö್ಯ ವಹಿಸಿದ್ದಾರೆ, ಅಲ್ಲದೇ ನಗರ ಅಭಿವೃದ್ಧಿಯಲ್ಲಿ ಕುಂಠಿತವಾಗಿದ್ದು ಕಳಪೆ ಕಾಮಗಾರಿಯಿಂದಾಗಿ ದೊಡ್ಡ ಅವ್ಯವಹಾರ ನಡೆದಿದೆ ಎಂದರು.
ನ್ಯಾಯಾಲಯದಲ್ಲಿರುವ ಅರ್ಜಿಯನ್ನು ವಜಾಗೊಳಿಸಿ ಚುನಾವಣಾ ಆಯೋಗ ಹಾಗೂ ಸರ್ಕಾರ ಕೂಡಲೇ ನಗರಸಭೆ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಸಿಪಿಐ ಸಹಕಾರ್ಯದರ್ಶಿ ರಾಧಾಸುಂದರೇಶ್ ಮಾತನಾಡಿ ನಗರದಲ್ಲಿ ಅಮೃತ್ ಹಾಗೂ ಒಳಚರಂಡಿ ಯೋಜನೆಗಳು ಮುಖ್ಯಮಂತ್ರಿಗಳಿAದ ಉದ್ಘಾಟನೆಗೊಂಡರು,
ಇನ್ನು ಅಪೂರ್ಣವಾಗಿಯೇ ಉಳಿದಿದೆ ಇದರ ಪ್ರತಿಫಲ ನಗರದ ಜನತೆಗೆ ಇನ್ನು ಸಿಕ್ಕಿಲ್ಲ ಅಂತಾ ದೂಷಿಸಿದರು.
ಈ ಸಂದರ್ಭದಲ್ಲಿ ಸಿಪಿಐ ಮುಖಂಡರಾದ ವಿಜಯ್‌ಕುಮಾರ್, ಜಿಲ್ಲಾ ಸಂಚಾಲಕ ರಘು, ಉಪಸ್ಥಿತರಿದ್ದರು.

























Discussion about this post