ಚತ್ತೀಸ್ ಘಡ- ಸಿರ್‌ಪಿಎಫ್ ಪೇದೆಯೊಬ್ಬರು ಸಹೋದ್ಯೋಗಿಗಳ ಮೇಲೆ ಎಕೆ.47 ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ನಾಲ್ವರು ಕೇಂದ್ರ ಮೀಸಲು ಸಶಸ್ತ್ರ ಪಡೆಯ ಸಿಬ್ಬಂದಿ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಚತ್ತೀಸ್ ಘಡದ ಸುಕ್ಮಾ ಜಿಲ್ಲೆಯ ಸಿರ್‌ಪಿಎಫ್ ಶಿಬಿರದಲ್ಲಿ ಸೋಮವಾರ ಸಂಭವಿಸಿದೆ. ಈ ಸಂಬಂಧ ಕಾನ್ ಸ್ಟೇಬಲ್ ರಿತೇಶ್ ರಂಜನ್ ಎನ್ನವವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ರಾಜಧಾನಿ ರಾಯ್ ಪುರಕ್ಕೆ 400 ಕಿ.ಮೀ ದೂರದಲ್ಲಿರುವ ಲಿಂಗಪಲ್ಲಿ ಗ್ರಾಮದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 50ನೇ ಬೆಟಾಲಿಯಿನ್ ಶಿಬಿರದಲ್ಲಿ ಸೋಮವಾರ ಬೆಳಗಿನ ಜಾವ 3.15ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಸುಂದರ್ ರಾಜ್ ಪಿ ಹೇಳಿದ್ದಾರೆ.
ಪೊಲೀಸ್ ಕಾನ್ ಸ್ಟೇಬಲ್ ರೀತೇಶ್ ರಂಜನ್ ತನ್ನ ಸಹೋದ್ಯೋಗಿಗಳ ಮೇಲೆ ಎಕ್. 47 ನಿಂದ ಗುಂಡು ಹಾರಿಸಿದ್ದಾನೆ. ಇದಕ್ಕೆ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಾಯಗೊಂಡವರನ್ನು ತಕ್ಷಣ ಪಕ್ಕದ ತೆಲಂಗಾಣದ ಭದ್ರಾಚಲಂ ಆಸ್ಪತ್ರೆಗೆ ಕರೆದೊಯ್ಯವ ದಾರಿ ಮಧ್ಯೆ ನಾಲ್ವರು ಅಸುನೀಗಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೃತಪಟ್ಟವರನ್ನು ರಾಜಮಣಿ ಕುಮಾರ್, ರಾಜಬಿ ಮೊಂಡಾಲ್, ದನ್ಜಿ ಹಾಗೂ ಧರ್ಮೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಉಳಿದ ಮೂರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ವರ್ಷದ ಜನವರಿಯಲ್ಲಿ ಬಸ್ತಾರ್ ಜಿಲ್ಲೆಯ ಸಿಆರ್ ಪಿಎಫ್ ಶಿಬಿರದಲ್ಲಿ ಪೇದೆಯೊಬ್ಬರು ಸಹೋದ್ಯೋಗಿಗೆ ಗುಂಡು ಹಾರಿಸಿ ಹತ್ಯೆಮಾಡಿದ ಇಂಥದೇ ಘಟನೆ ಸಂಭವಿಸಿತ್ತು.
ಇದನ್ನೂ ಓದಿ: Kabaddi: ಅಂತರರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಚಿನ್ನದ ಸಾಧನೆ ಮಾಡಿದ ಬಾಲಕಿಗೆ ಗ್ರಾಮಸ್ಥರ ಅದ್ಧೂರಿ ಸ್ವಾಗತ
Discussion about this post