ಚಿಕ್ಕಮಗಳೂರು : ದೇಶದಲ್ಲಿ ಅಸ್ಪೃಷ್ಯತೆ ಎಂಬುದು ಇನ್ನೂ ಜೀವಂತವಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳು ದಲಿತರನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆಯಷ್ಟೇ ಅವರನ್ನು ಉದ್ದಾರ ಮಾಡುವ ಆಶಯ ಯಾವುದೇ ಪಕ್ಷಕ್ಕಿಲ್ಲ ಎಂದು ಬಹುಜನ ಸಮಾಜವಾದಿ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಮಿತ್ರ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣವೊಂದರಲ್ಲಿ ಬಿಜೆಪಿಯಲ್ಲಿರುವ ದಲಿತ ನಾಯಕರು ಹೊಟ್ಟೆ ಪಾಡಿಗಾಗಿ ಬಿಜೆಪಿಯಲ್ಲಿ ಉಳಿದುಕೊಂಡಿದ್ದಾರೆ. ಇವರು ದಲಿತರ ಪರವಾಗಿ ಅಥವಾ ಶೋಷಿತರ ಪರವಾಗಿ ವಕಾಲತ್ತು ವಹಿಸುವುದಿಲ್ಲ ಎಂಬ ಹೇಳಿಕೆ ಸತ್ಯ. ಬಿಜೆಪಿಯ ಕೆಲವು ನಾಯಕರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿ ಎಂದು ಸಂವಿಧಾನ ವಿರೋಧಿಯಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಬಿಜೆಪಿಯ ಯಾವೊಬ್ಬ ದಲಿತ ನಾಯಕರು ಈ ಬಗ್ಗೆ ಪ್ರಶ್ನಿಸಲಿಲ್ಲ, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದ್ದರೂ ಮೂಕರಂತೆ ಮೌನವಹಿಸಿದ್ದಾರೆ ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಸಮರ್ಥವಾದುದು ಎಂದರು.
ದೇಶದಲ್ಲಿ ಅಸ್ಪೃಷ್ಯತೆ ಎಂಬುದು ಇನ್ನೂ ಜೀವಂತವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳನ್ನು ಯಾವುದೇ ಪಕ್ಷಗಳು ಈಡೇರಿಸುತ್ತಿಲ್ಲ, ಭಾರತ ಸಂವಿಧಾನವನ್ನು ಯಾವೊಂದು ಪಕ್ಷವು ತಮ್ಮ ಚುನಾವಣಾ ಪ್ರಣಾಳಿಕೆಯ್ನಾಗಿ ಮಾಡಿಕೊಂಡಿಲ್ಲ ಇಂತಹ ರಾಜಕೀಯ ಪಕ್ಷಗಳಿಗೆ ಸರ್ವ ಜನರ ಉದ್ದಾರ ಮಾಡುವುದು ಮಾನದಂಡವಲ್ಲ ಬದಲಾಗಿ ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಲ್ಲಾ ರಾಜಕೀಯ ಪಕ್ಷಗಳ ಮಾನದಂಡ ಸರ್ವ ಜನರ ಉದ್ದಾರ ಮಾಡುವುದಲ್ಲ ಬದಲಾಗಿ ತಮ್ಮ ವೈಯಕ್ತಿಕ ಲಾಭವಷ್ಟೇ, ಇಂತಹ ಪಕ್ಷಗಳಲ್ಲಿರುವ ದಲಿತ ಮುಖಂಡರು ತಮ್ಮ ವೈಯಕ್ತಿಕ ಲಾಭಕ್ಕಾಗಿಯೇ ವಿನಃ ಸರ್ವಜನರ ಉದ್ದಾರಕ್ಕಾಗಿ ಅಲ್ಲ, ದೇಶದ ಸಂವಿಧಾನವನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಿ ದಲಿತ ಸಮಾಜವನ್ನು ಉದ್ದಾರ ಮಾಡುವ ಯಾವುದೇ ಆಶಯ ಇವರಿಗಿಲ ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಸತ್ಯವಾಗಿದೆ, ದೇಶದ ಕಾನೂನನ್ನು ರಕ್ಷಿಸಲು ಎಲ್ಲಾ ಪಕ್ಷಗಳ ದಲಿತ ಮುಖಂಡರು ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬಿಎಸ್ಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವಸಂತ ಆರ್, ನಗರ ಖಜಾಂಚಿ ನವೀನ್, ರವಿಕುಮಾರ್, ವಿನುತ್ ಇದ್ದರು.

























Discussion about this post