ಚಿಕ್ಕಮಗಳೂರು: ಶ್ರೀರಾಮ ಸೇನೆಯ ೧೭ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ನಗರದ ಶಂಕರ ಮಠದಲ್ಲಿ ಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಸೋಮವಾರದಿಂದ ಏಳು ದಿನಗಳ ಕಾಲ ಅಭಿಯಾನ ನಡೆಯಲಿದೆ, ನವೆಂಬರ್ ೧೪ ರಂದು ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಪಾದುಕೆ ದರ್ಶನ ನಡೆಯಲಿದೆ ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ತಿಳಿಸಿದರು.
ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮಾಲಾಧಾರಣೆ ನಡೆಸಿ ನ.೧೪ ರಂದು ರಾಜ್ಯದ ವಿವಿಧ ಮಠಾಧೀಶರಿಂದ ದತ್ತಪಾದುಕೆ ದರ್ಶನ ಕಾರ್ಯಕ್ರಮ ನಡೆಯಲಿದೆ. ವಿಗ್ರಹ ಮೆರವಣಿಗೆಗೆ ಅವಕಾಶ ಸಿಗುವವರೆಗೂ ಶೋಭಾ ಯಾತ್ರೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.
ನ.೧೪ ರಂದು ದತ್ತಪೀಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಜಿಲ್ಲಾಡಳಿತ ಎಲ್ಲಾ ಭಕ್ತರಿಗೆ ಪೂಜೆಗೆ ಮುಕ್ತ ಅವಕಾಶ ನೀಡಬೇಕು, ನಿರ್ಭಂದ ಹೇರುವ ಮೂಲಕ ಉದ್ದಟತನ ತೋರಿದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್‌ಶೆಟ್ಟಿ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಸರ್ಕಾರದ ನಿಯಮ ಪಾಲಿಸುವ ಮೂಲಕ ದತ್ತಮಾಲಾ ಅಭಿಯಾನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ೧೭ ವರ್ಷದ ದತ್ತಮಾಲಾ ಅಭಿಯಾನ ಇದಾಗಿದ್ದು ಈ ಬಾರಿಯೂ ಯಾವುದೇ ಶೋಭಾಯಾತ್ರೆ ಇಲ್ಲದಿರುವುದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ವಿಗ್ರಹ ಮೆರವಣಿಗೆಗೆ ಅನುಮತಿ ಸಿಕ್ಕ ಬಳಿಕವಷ್ಠೇ ಶೋಭಾಯಾತ್ರೆ ನಡೆಸಲು ಉದ್ಧೇಶಿಸಲಾಗಿದೆ. ನ. ೧೪ ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನದ ಜೊತೆಗೆ ವಿವಿಧ ಮಠಾಧೀಶರಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
Dattamala Abhiyana :ದತ್ತಮಾಲಾ ಅಭಿಯಾನ ಕಾರ್ಯಕ್ರಮ ಸರಳ ಆಚರಣೆಗೆ ಜಿಲ್ಲಾಧಿಕಾರಿ ಸೂಚನೆ

























Discussion about this post