ಚಿಕ್ಕಮಗಳೂರು: ನಗರದ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ನಡೆದ ಕನ್ನಡ ಗೀತಗಾಯನ ಕಾರ್ಯಕ್ರಮದ ಬಳಿಕ ಪೊಲೀಸ್ ಶ್ವಾನದಳದ ಪ್ರಾತ್ಯಾಕ್ಷಿಕೆ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಪ್ರದರ್ಶನ ಆರಂಭ ವಾಗುತ್ತಿದ್ದಂತೆ ದತ್ತ, ಪೃತ್ವಿ ಮತ್ತು ಟಿಪ್ಪು ಶ್ವಾನಗಳು ಅವರವರ ನಿರ್ವಾಹಕರ ಹಿಂದೆ ನಿಂತು ಜಿಗ್ಜಾಗ್, ಮಾರ್ಚ್ ಗೆ ಹೆಜ್ಜೆ ಹಾಕಿದಾಗ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಆಚ್ಚರಿಯಿಂದ ನೋಡುತ್ತಿದ್ದರು.
ಪ್ರಾತ್ಯಕಿಕೆ ಸಂದರ್ಭದಲ್ಲಿ ಜನರಿಂದ ಆಚೆ ಪ್ರದರ್ಶನವನ್ನು ವೀಕ್ಷಿಸಲು ಬಂದಿದ್ದ ಬೀದಿ ನಾಯಿಯನ್ನು ಕಂಡ ದತ್ತ ನಿರ್ವಾಹಕರ ಕಣ್ತಪ್ಪಿಸಿ ಒಮ್ಮೆಲೆ ಕಾಲ್ಕೀತ್ತು ಬೀದಿ ನಾಯಿಯನ್ನು ಅಟ್ಟಾಡಿಸಿ ಹೌಹಾರಿ ಅದನ್ನು ಓಡಿಸಿದ್ದು ಕೆಲವರಿಗೆ ಗಾಬರಿ ಹುಟ್ಟಿಸಿತು.
ಕೂಡಲೆ ಹಿಂಭಾಲಿಸಿದ ನಿರ್ವಾಹಕ ಸಮಾದಾನ ಪಡಿಸಿ ಟ್ರಾಕ್ಗೆ ಕರೆ ತರಲಾತು. ಆಯುಷ್ ಅಧಿಕಾರಿ ಡಾ.ಗೀತಾ ಅವರ ಪರ್ಸ್ನ್ನು ನೂರು ಮೀಟರ್ ದೂರಲ್ಲಿಟ್ಟು ಶ್ವಾನಕ್ಕೆ ಸ್ಮೆಲ್ ತೋರಿಸಿ ಬಿಟ್ಟಾಗ ಕ್ಷಣಮಾತ್ರದಲ್ಲಿ ಪತ್ತೆಹಚ್ಚಿ ನಿರ್ವಾಹಕನಿಗೆ ಸುಳಿವು ನೀಡಿ ಅಚ್ಚರಿಗೊಳಿಸಿತು.
ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಎಂ.ಎಚ್.ಅಕ್ಷಯ್ ಮಾತನಾಡಿ, ನಾಯಿಗಳನ್ನು ಬಹಳಷ್ಟು ಮನೆಯಲ್ಲಿ ಸಾಕಿ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇವೆ. ಇದೇ ರೀತಿ ಪೊಲೀಸ್ ಕುಟುಂಬದಲ್ಲಿ ದತ್ತ, ಪೃತ್ವಿ ಮತ್ತು ಟಿಪ್ಪು ೩ ಸದಸ್ಯರಿದ್ದಾರೆ. ಡಿಎಆರ್ ಇನ್ಸ್ಪೆಕ್ಟರ್ ಎಸ್.ವೈ.ಸಹದೇವ್ ಇದ್ದರು.
ಇದನ್ನೂ ಓದಿ: Kuvempu Puthali: ಕುವೆಂಪು ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾ ಕರವೇ ಮನವಿ
ಇದನ್ನೂ ಓದಿ: e Paper – October 29, 2021
ಇದನ್ನೂ ಓದಿ: e Paper – October 29, 2021

























Discussion about this post