ದೆಹಲಿ: ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಉಪ ಅಡ್ಮಿರಲ್ ಆರ್. ಹರಿ ನೇಮಕಗೊಂಡಿದ್ದಾರೆ.
ನ. 30ರಂದು ಹಾಲಿ ಮುಖ್ಯಸ್ಥ ಅಡ್ಮಿರಲ್ ಕರಮ್ಬಿರ್ ಸಿಂಗ್ ಅವರು ನಿವೃತ್ತರಾಗಲಿದ್ದು, ಆರ್. ಹರಿ ಕುಮಾರ್ ನೌಕಾಪಡೆಯ ಸಾಮರ್ಥ್ಯ ವಹಿಸಿಕೊಳ್ಳಲಿದ್ದಾರೆ.
ಉಪ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದ್ದು, ನ.30 ರ ಮಧ್ಯಾಹ್ನದಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಅಡ್ಮಿರಲ್ ಹರಿ ಕುಮಾರ್ಮ ವೆಸ್ಟ್ರನ್ ನೌಕಾ ಕಮಾಂಡ್ ನ ಫ್ಲಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹರಿ ಕುಮಾರ್ ಅವರು 1983ರಿಂದ ಸೇನಾ ಸೇವೆಯಲ್ಲಿ ನಿರತಕಾಗಿದ್ದರು, ಐಎನ್ಎಸ್ ನಿಶಾಂತ್, ಮಿಸೈಲ್ ಕಾರ್ವೆಟ್, ಐಎನ್ಎಸ್ ಕೋರಾ ಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.
Deputy Admiral R. Hari Appointment
ಇದನ್ನೂ ಓದಿ:Heavy rain: ರಾಜ್ಯದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ
ಇದನ್ನೂ ಓದಿ:Naxal leader B G Krishnamurthy: ಕೇರಳದಲ್ಲಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ- ಸಾವಿತ್ರಿ ಬಂಧನ
Discussion about this post