Health tips: ಬಾಳೆಹಣ್ಣು ತಿಂದ್ರೆ ದಪ್ಪ ಆಗ್ತಾರಾ..? ಇಲ್ಲಾ ಸಣ್ಣ ಆಗ್ತಾರಾ..? ತೂಕ ಹೆಚ್ಚಿಸಿಕೊಳ್ಳೋಕ್ಕೆ ಮತ್ತು ತೂಕ ಇಳಿಸಿಕೊಳ್ಳೋಕ್ಕೆ ಹೊರಟಿರೊ ಜನರಲ್ಲಿ ಮೂಡುವ ಸಾಮಾನ್ಯ ಪ್ರಶ್ನೆ ಇದು. ಕೆಲವರ ಪ್ರಕಾರ ತೂಕ ಕಳೆದುಕೊಳ್ಳೋಕ್ಕೆ ಬಾಳೆಹಣ್ಣು ತಿನ್ಬೇಕು. ಇನ್ ಕೆಲವರ ಪ್ರಕಾರ ಬಾಡಿ ಬಿಲ್ಡ್ ಮಾಡೋಕ್ಕೆ, ದಪ್ಪ ಆಗೋಕ್ಕೆ ಬಾಳೆಹಣ್ಣು ಸಹಕಾರಿ. ಆದ್ರೆ ಸಣ್ಣ ಆಗೋದು ಮತ್ತು ದಪ್ಪ ಆಗೋದು ನಾವ್ ಎಷ್ಟು ಮತ್ತು ಯಾವಾಗ ಬಾಳೆ ಹಣ್ಣು ತಿಂತೀವಿ ಅನ್ನೋದರ ಮೇಲೆ ಡಿಪೆಂಡ್ ಆಗಿರತ್ತೆ.
ಎಸ್.. ಎಲ್ಲಾ ಸೀಸನ್‌ನಲ್ಲೂ ಈಸಿಯಾಗಿ, ಕೈಗೆಟುಕೋ ಬೆಲೆಗೆ ಸಿಗೋ ಹಣ್ಣು ಅಂದ್ರೆ ಅದು ಬಾಳೆಹಣ್ಣು. ಈ ಬಾಳೆ ಹಣ್ಣನ್ನ ಕೆಲವರು ಊಟಾ ಆದ್ಮೇಲೆ ತಿಂತಾರೆ, ಕೆಲವರು ತಿಂಡಿ ಜೊತೆಗೂ ತಿಂತಾರೆ, ಇನ್ ಕೆಲವರು ಬಾಳೆಹಣ್ಣು ತಿಂದೇ ಹೊಟ್ಟೆ ತುಂಬಿಸ್ಕೋತಾರೆ.
ಬೇರೆ ಯಾವುದಾದರೂ ಹಣ್ಣು ತಿಂದ್ರೆ ಬೇಗ ಹೊಟ್ಟೆ ಹಸಿವಾಗತ್ತೆ. ಬೇಗ ಶಕ್ತಿ ಕುಂದತ್ತೆ. ಆದ್ರೆ ಬಾಳೆ ಹಣ್ಣು ತಿಂದಾಗ ತುಂಬಾ ಹೊತ್ತು ಶಕ್ತಿಯುತವಾಗಿರ್ತೀವಿ. ಕ್ರಿಯಾಶೀಲರಾಗಿರ್ತೀವಿ.
ಬಾಳೆಹಣ್ಣಿನಲ್ಲಿ ಕ್ಯಾಲೋರೀಸ್ ಇರುತ್ತದೆಂಬ ಕಾರಣಕ್ಕೆ ಕೆಲವರು ಇದನ್ನ ತಿನ್ನಲು ಹಿಂಜರಿಯುತ್ತಾರೆ. ಆದರೆ ಇದರ ಜೊತೆಗೆ ಬಾಳೆಹಣ್ಣಿನಲ್ಲಿ ಮ್ಯಾಗ್ನಿಷಿಯಮ್, ವಿಟಾಮಿನ್ ಬಿ6, ವಿಟಾಮಿನ್ ಸಿ, ಪೊಟ್ಯಾಷಿಯಮ್ ಇದೆ.
ಇನ್ನು ತೂಕ ಕಳೆದುಕೊಂಡು ಸ್ಲಿಮ್ ಆಗ್ಬೇಕು ಅಂದ್ರೆ ಬೆಳಿಗ್ಗೆ ಖಾಲಿ ಹೊಟ್ಟೇಲಿ ಒಂದು ಬಾಳೆಹಣ್ಣು ತಿನ್ನಿ. (ಕೆಲವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ, ನೆಗಡಿ, ಕೆಮ್ಮು ಉಂಟಾಗುತ್ತದೆ. ಅಂಥವರು ಬಾಳೆಹಣ್ಣು ತಿನ್ನದಿರುವುದು ಉತ್ತಮ.) ಇದರಿಂದ ತೂಕ ಕಳೆದುಕೊಳ್ಳಬಹುದು. ಆದ್ರೆ ನೆನಪಿರ್ಲಿ, ತೂಕ ಕಳೆದುಕೊಳ್ಳಬೇಕು ಅನ್ನೋ ಸ್ಪೀಡ್‌ನಲ್ಲಿ ಒಂದು ಬಾಳೆಹಣ್ಣು ತಿನ್ನುವಲ್ಲಿ 2, 3 ಬಾಳೆ ಹಣ್ಣು ತಿನ್ಬೇಡಿ. ಹೀಗ್ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ಇನ್ನು ದಪ್ಪ ಆಗ್ಬೇಕು ಅಂದ್ರೆ, ಬೆಳಿಗ್ಗೆ ತಿಂಡಿ ಆದ್ನಂತ್ರ ಮತ್ತು ಮಧ್ಯಾಹ್ನ ಊಟ ಮಾಡೋಕಿಂತ ಮುಂಚೆ ಎರಡು ಬಾಳೆ ಹಣ್ಣು ತಿನ್ನಿ. ಹೀಗೆ ಮಾಡಿದ್ರೆ ನಿಮ್ಮ ದೇಹದ ತೂಕ ಹೆಚ್ಚತ್ತೆ.
ಹಿರಿಯರು ಒಂದು ಮಾತು ಹೇಳಿದ್ದಾರೆ. ಊಟ ಆದ್ಮೇಲೆ ಒಂದು ಬಾಳೆಹಣ್ಣು ತಿಂದ್ರೆ ಆರೋಗ್ಯಕ್ಕೆ ಒಳ್ಳೇದು ಅಂತಾ. ಫಿಟ್ ಆ್ಯಂಡ್ ಫೈನ್ ಆಗಿರ್ಬೇಕು ಅಂದ್ರೆ ಹೀಗೆ ಮಧ್ಯಾಹ್ನಾ ಊಟ ಆದ್ಮೇಲೆ ಒಂದು ಬಾಳೆ ಹಣ್ಣು ತಿನ್ನಿ.
ಬಾಳೆ ಹಣ್ಣು ಇಷ್ಟ ಅಂತಾ ಅಥವಾ ಆರೋಗ್ಯಕ್ಕೆ ಒಳ್ಳೆದು ಅಂತಾ ಸಿಕ್ಕ ಸಿಕ್ಕ ಟೈಮಲ್ಲಿ ಬಾಳೆಹಣ್ಣು ತಿನ್‌ಬಾರ್ದು. ಅದ್ರಲ್ಲೂ ಸೂರ್ಯಾಸ್ತದ ನಂತರ ಬಾಳೆಹಣ್ಣು ತಿನ್ನೋದು ಆರೋಗ್ಯಕ್ಕೆ ಒಳ್ಳೆದಲ್ಲ. ಇನ್ನು ಬಾಳೆಹಣ್ಣು ತಿಂದ್ರೆ ನಿಮಗೆ ಅಲರ್ಜಿ ಅನ್ನೋದಾದ್ರೆ ಒಮ್ಮೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ.
Discussion about this post