Beauty Tips: ನಾವು ಸೌಂದರ್ಯದ ಅಭಿವೃದ್ಧಿಗಾಗಿ ಏನೆಲ್ಲಾ ಮಾಡ್ತೀವಿ. ಫೇಸ್‌ಪ್ಯಾಕ್, ಫೇಸ್ ಮಾಸ್ಕ್, ಫೇಶಿಯಲ್ ಹೀಗೆ ಹಲವು ತರಹದ ಪ್ರಯೋಗಗಳನ್ನ ಮಾಡಿ, ಇರೋ ಬ್ಯೂಟಿನೂ ಕಳ್ಕೋತಿವಿ. ಇದನ್ನೆಲ್ಲ ಮಾಡೋ ಬದಲು ನಾಭಿ ಚಿಕಿತ್ಸೆ ಮಾಡಿಕೊಂಡ್ರೆ ಉತ್ತಮ ಫಲಿತಾಂಶ ನಿಮ್ಮದಾಗೋದ್ರಲ್ಲಿ ನೋ ಡೌಟ್.
ನಮ್ಮ ಮುಖದ ಸೌಂದರ್ಯದ ರಹಸ್ಯ ಹೊಕ್ಕಳಲ್ಲಿ ಅಡಗಿದೆ ಅಂದ್ರೆ ನೀವು ನಂಬ್ತೀರಾ..? ನಂಬ್ಲೇಬೇಕು. ನಾಭಿ ಚಿಕಿತ್ಸೆ ಅಂದರೆ ಹೊಕ್ಕಳಿಗೆ ಎಣ್ಣೆ ಹಾಕುವ ಮೂಲಕ ನಮ್ಮ ಸೌಂದರ್ಯವನ್ನ ನಾವು ಹೆಚ್ಚಿಸಿಕೊಳ್ಳಬಹುದು. ಇದು ಇತ್ತೀಚಿನ ಚಿಕಿತ್ಸೆ ಅಲ್ಲ. ಬದಲಾಗಿ ನಮ್ಮ ಪೂರ್ವಜರು ಕೂಡ ಈ ಚಿಕಿತ್ಸೆ ಅನುಸರಿಸಿ, ಆರೋಗ್ಯ, ಸೌಂದರ್ಯ ಪಡೆದುಕೊಳ್ಳುತ್ತಿದ್ದರಂತೆ.
ಹಲವು ಎಣ್ಣೆಯಿಂದ ಹಲವು ತರಹದ ಲಾಭಗಳಿದೆ. ಸಾಸಿವೆ ಎಣ್ಣೆ, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ಎಣ್ಣೆ, ಹರಳೆಣ್ಣೆ, ಬೇವಿನ ಎಣ್ಣೆ ಹೀಗೆ ಈ ಎಲ್ಲ ಎಣ್ಣೆಗಳಲ್ಲಿ ವಿವಿಧ ತರಹದ ಲಾಭಗಳಿದೆ. ಯಾವುದು ಆ ಲಾಭಗಳು ಅನ್ನೋದನ್ನ ತಿಳಿಯೋಣ ಬನ್ನಿ.
ಬಾದಾಮ್ ಎಣ್ಣೆ (Badam Oil)
ಬಾದಾಮ್ ಎಣ್ಣೆಯನ್ನ ಹೊಕ್ಕಳಿಗೆ ಹಾಕುವುದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು ಎಂಬುದು ಆಯುರ್ವೇದದ ಅಭಿಪ್ರಾಯ. ಇದರಲ್ಲಿ ವಿಟಮಿನ್ ಇ ಹೇರಳವಾಗಿದ್ದು, ಕೂದಲಿಗೆ ಉತ್ತಮವಾಗಿದೆ. ಇದನ್ನ ಹೊಕ್ಕಳಿಗೆ ಹಾಕುವುದರಿಂದ ಮುಖಕ್ಕೆ ನ್ಯಾಚುರಲ್ ಗ್ಲೋ ಬರುತ್ತದೆ. ಅಲ್ಲದೇ ಮುಖದ ಸುಕ್ಕು ಹೋಗಿ, ನೀವು ಯಂಗ್ ಆಗಿ ಕಾಣುವಂತೆ ಮಾಡುವಲ್ಲಿ ಈ ಬಾದಾಮ್ ಎಣ್ಣೆ ಸಹಾಯಕವಾಗಿದೆ. ಹಾಗಾಗಿ ನೀವು ಪ್ರತಿದಿನವಲ್ಲದಿದ್ದರೂ, ತಿಂಗಳಲ್ಲಿ ಮೂರು ಬಾರಿ ನಿಮ್ಮ ಬೆಲ್ಲಿಬಟನ್‌ಗೆ ಬಾದಾಮಿ ಎಣ್ಣೆಯನ್ನು ಕೊಂಚ ಕೊಂಚ ಹಾಕಬಹುದು.
ಬೇವಿನ ಎಣ್ಣೆ (Neem Oil)
ಬೇವಿನ ಎಣ್ಣೆಯನ್ನು ನಾಭಿಗೆ ಹಾಕಿದರೆ, ನಿಮ್ಮ ಮುಖದ ಮೇಲಾದ ಗುಳ್ಳೆಗಳು, ಫಂಗಲ್ ಇನ್‌ಫೆಕ್ಷನ್‌ಗಳು, ತುರಿಕೆಯುಂಟಾಗಿದ್ದರೆ ಕಡಿಮೆಯಾಗುತ್ತದೆ. ಬೇವಿನ ಎಣ್ಣೆ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟಿರಿಯಲ್ ಆಗಿ ಕಾರ್ಯನಿರ್ವಹಿಸುತ್ತದೆ. ನೀವು ಹೊಕ್ಕಳಿಗೆ ಬೇವಿನ ಎಣ್ಣೆ ಹಾಕಿದರೆ, ನಿಮ್ಮ ಮುಖ ಮೊಡವೆ, ಗುಳ್ಳೆ ಮುಕ್ತವಾಗುತ್ತದೆ. ಅಲ್ಲದೇ, ದೇಹದ ಆರೋಗ್ಯಕ್ಕೂ ಇದು ಉತ್ತಮವಾಗಿದೆ.
ಆಲಿವ್ ಎಣ್ಣೆ ಮತ್ತು ತೆಂಗಿನ ಎಣ್ಣೆ (olive oil or Coconut oil)
ತೆಂಗಿನ ಎಣ್ಣೆಯನ್ನ ಹೆಚ್ಚಾಗಿ ಕೂದಲಿಗೆ ಬಳಸಲಾಗುತ್ತದೆ. ತೆಂಗಿನ ಎಣ್ಣೆಯಿಂದ ಕೂದಲಿನ ಆರೋಗ್ಯ ಹೆಚ್ಚುವುದಲ್ಲದೇ, ಮೈಕಾಂತಿ ಹೆಚ್ಚಿಸುವುದರಲ್ಲಿ ತೆಂಗಿನ ಎಣ್ಣೆ ಸಹಕಾರಿಯಾಗಿದೆ. ಆಲಿವ್ ಎಣ್ಣೆಯನ್ನ ಸಲಾಡ್‌ಗಳಲ್ಲಿ ಬಳಸುವುದು ಹೆಚ್ಚು. ಆದ್ರೆ ಈ ಎಣ್ಣೆಗಳನ್ನ ಮಹಿಳೆಯರಾಗಲಿ, ಪುರುಷರಾಗಲಿ ಹೊಕ್ಕಳಿಗೆ ಹಾಕುವುದರಿಂದ ಫರ್ಟಿಲಿಟಿ(ಫಲವತ್ತತೆ) ಪ್ರಮಾಣ ಹೆಚ್ಚುತ್ತದೆ ಎನ್ನಲಾಗಿದೆ.
ಸಾಸಿವೆ ಎಣ್ಣೆ (Mustard oil)
ಚಳಿಗಾಲದಲ್ಲಿ ದೇಹವನ್ನ ಸಮಪ್ರಮಾಣದಲ್ಲಿಡುವುದಕ್ಕೆ ಸಾಸಿವೆ ಎಣ್ಣೆ ಬಳಸಲಾಗುತ್ತದೆ. ಸಾಸಿವೆ ಎಣ್ಣೆ ಉಷ್ಣವಾಗಿರುವುದರಿಂದ, ಚಳಿಗಾಲದಲ್ಲಿ ಇದರ ಬಳಕೆ ಉತ್ತಮ ಎನ್ನಲಾಗುತ್ತದೆ. ಅಡಿಗೆಗೂ ಸಾಸಿವೆ ಎಣ್ಣೆ ಬಳಸುವುದರಿಂದ ಅಡಿಗೆ ರುಚಿಕರವಾಗಿರುತ್ತದೆ. ಅದೇ ರೀತಿ ಹೊಕ್ಕಳಿಗೆ ಸಾಸಿವೆ ಎಣ್ಣೆ ಹಾಕುವುದರಿಂದ ತುಟಿ ಒಡೆಯುವುದನ್ನ ತಡೆಯಬಹುದು. ಚಳಿಗಾಲದಲ್ಲಿ ತುಟಿ ಹೆಚ್ಚು ಒಡೆಯುವುದರಿಂದ ಸಾಸಿವೆ ಎಣ್ಣೆ ಬಳಕೆ ಉತ್ತಮ ಎನ್ನುತ್ತದೆ ಆಯುರ್ವೇದ.
ಹರಳೆಣ್ಣೆ (Castor oil)
ಹರಳೆಣ್ಣೆಯನ್ನ ಹೊಕ್ಕಳಿಗೆ ಹಾಕುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಮುಟ್ಟಿನ ದಿನದಲ್ಲಾಗುವ ಹೊಟ್ಟೆನೋವನ್ನ ಕಡಿಮೆ ಮಾಡಲು ಹೊಕ್ಕಳಿಗೆ ಹರಳೆಣ್ಣೆ ಹಾಕುವುದು ಉತ್ತಮ.
ಈ ಎಲ್ಲ ಎಣ್ಣೆಗಳನ್ನ ಬಳಸಿದ ಮೇಲೆ ಹೊಕ್ಕಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಇನ್‌ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚು. ಅಲ್ಲದೇ, ಪದೇ ಪದೇ ಎಣ್ಣೆ ಹಾಕುವುದು ಒಳ್ಳೆಯದಲ್ಲ. ತಿಂಗಳಿಗೆ ಎರಡರಿಂದ ಮೂರು ಬಾರಿ ಬೆಲ್ಲಿ ಬಟನ್ ಆಯ್ಲಿಂಗ್ ಮಾಡಿಕೊಳ್ಳಬಹುದು. ನಾಭಿ ಚಿಕಿತ್ಸೆ ಮಾಡಿಕೊಂಡ ಮೇಲೂ ನಿಮ್ಮ ಸೌಂದರ್ಯದಲ್ಲಿ, ಆರೋಗ್ಯದಲ್ಲಿ ಉತ್ತಮ ಪರಿಣಾಮ ಕಂಡು ಬರದಿದ್ದಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ.
Discussion about this post