ಚಿಕ್ಕಮಗಳೂರು : ಕನ್ನಡ ಚಿತ್ರರಂಗದಲ್ಲಿ ನಟನೆ ಜತೆಗೆ ವಿಶಿಷ್ಟ ವ್ಯಕ್ತಿತ್ವದ ಮೂಲಕ ತಮ್ಮದೇ ಛಾಪು ಮೂಡಿಸಿದ್ದ ನಟ ಪುನೀತ್ ರಾಜ್ ಕುಮಾರ್ ಅಗಲಿಕೆ ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಪಲ್ಲವಿ ಸಿ.ಟಿ.ರವಿ ಬೇಸರದಿಂದ ನುಡಿದರು.
ಭಾನುವಾರ ಕುವೆಂಪು ಕಲಾಮಂದಿರದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಹಾಗೂ ವಿವೇಕ ಅಕಾಡೆಮಿ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಮರೆಯಾದ ಮಾಣಿಕ್ಯ ಅಪ್ಪು “ಗೀತನಮನ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಹುಟ್ಟಿದ ಮೇಲೆ ಪ್ರತಿಯೊಬ್ಬರು ಒಂದಲ್ಲ ಒಂದು ದಿನ ಸಾವನ್ನಪ್ಪಲೆ ಬೇಕು ಆದರೆ ನಟ ಪುನೀತ್ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಗಲಿರುವುದು ಚಿತ್ರರಂಗಕ್ಕೆ ಹಾಗೂ ನಾಡಿಗೆ ಅಪಾರ ನಷ್ಟ ತಂದಿದೆ. ಸರಳ ವ್ಯಕ್ತಿತ್ವ ಹೊಂದಿದ್ದ ಅವರು ಎಲ್ಲರಿಗೂ ಮಾದರಿಯಾಗಿದ್ದರು. ಎಂದು ತಮ್ಮ ಹಾಗೂ ಅವರ ಕುಟುಂಬದ ನಡುವಿನ ಒಡನಾಟವನ್ನು ಸ್ಮರಿಸುತ್ತಾ ಅವರನ್ನು ಎಂದಿಗೂ ಮರೆಯುವುದು ಸಾಧ್ಯವಿಲ್ಲ ಎಂದರು.
ಹಿರಿಯ ಪತ್ರಕರ್ತರಾದ ಗಿರಿಜಾಶಂಕರ್ ಮಾತನಾಡಿ, ಪುನೀತ್ ಯಾವುದೇ ಪ್ರಚಾರವಿಲ್ಲದೇ ಮಾಡಿದ ಸಾಮಾಜಿಕ ಕಾರ್ಯಗಳಿಂದ ಅವರ ನೆನಪು ಶಾಶ್ವತ, ಸಮಾಜಕೋಸ್ಕರ ದುಡಿಯುವ ವ್ಯಕ್ತಿಗೆ ಯಾವತ್ತೂ ಸಾವಿಲ್ಲ. ಭೌತಿಕವಾಗಿ ಅವರಿಲ್ಲದಿದ್ದರೂ ಅವರ ಸೇವೆಯಿಂದ ಅವರು ಅಮರರಾಗುತ್ತಾರೆ ಎಂದು ಹೇಳಿದರು.
ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಪ್ರಾಂಶುಪಾಲ ಡಾ. ಕೆ.ಸುಬ್ಬರಾಯರು ಮಾತನಾಡಿ ಪುನೀತ್ ನಟನೆ, ಜತೆಗೆ ಸಾಮಾಜಿಕ ಕಳಕಳಿ ಹೊಂದಿದ್ದರು ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಅಧ್ಯಕ್ಷರಾದ ಪ್ರನೂಪ ನಾಗರಾಜ್, ಕೆನರಾಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ವಿನಯ್ ಕಲಾಪೋಷಕರಾದ ಶ್ರೀನಾರಾಯಣಮಲ್ಯ ಉಪಸ್ಥಿತರಿದ್ದರು.
ಪೂರ್ವಿ ಸುಗಮ ಸಂಗೀತ ಅಕಾಡೆಮಿಯ ರಾಯನಾಯಕ ಎಲ್ಲರನ್ನೂ ವಂದಿಸಿದರು. ದೀಪಕ್ ದೊಡ್ಡಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಮಾ ಪ್ರಸಾದ ಹಾಗೂ ರೂಪನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಪೂರ್ವಿ ಅಕಾಡೆಮಿಯ ಎಲ್ಲ ಗಾಯಕರು ಪುನೀತ್ ನಟಿಸಿದ ಚಿತ್ರಗಳ ಆಯ್ದ ಕೆಲವು ಗೀತೆಗಳನ್ನು ಹಾಡಿದರು.
ತುಮಕೂರಿನ ಪೂಜಾಮೋಹನ್ , ಅನುಷಾಅಂಚನ್, ರೂಪ ಅಶ್ವಿನ್, ರುಕ್ಸಾನಕಾಚೂರ್, ದೀಪಕ್, ಚೈತನ್ಯ, ವಿಷ್ಣುಭಾರದ್ವಾಜ್, ಸಾತ್ವಿಕ್, ಶ್ರೀಹರಿ, ಲಾಲಿತ್ಯ ಅನ್ವೇಕರ್, ಅನುರಾಧಭಟ್, ಶ್ವೇತಾಭಾರದ್ವಾಜ್, ಎಂ.ಎಸ್ ಸುಧೀರ್, ಗೀತೆಗಳು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿ ಪುನೀತ್ ಸ್ಮರಣೆ ಮಾಡಿದರು.

























Discussion about this post