Health Tips: ವಾಕಿಂಗ್ ಮಾಡುವುದರಿಂದ ಏನೇನು ಆರೋಗ್ಯ ಲಾಭವಾಗಲಿದೆ..?
ಪ್ರತಿದಿನ ನಾವು ಅರ್ಧ ಗಂಟೆಯಾದರೂ ವಾಕಿಂಗ್ ಮಾಡಬೇಕು. ಆ ಸಮಯ ಅದಕ್ಕೆಂದೇ ಮೀಸಲಿಡಬೇಕು. ಯಾರು ಪ್ರತಿದಿನ ವಾಕಿಂಗ್‌ನ್ನು ಕ್ರಮಪ್ರಕಾರವಾಗಿ ಮಾಡುತ್ತಾರೋ, ಅವರಿಗೆ ಆರೋಗ್ಯ ಸಮಸ್ಯೆ ಬರುವುದು ಕಡಿಮೆ. ಹಾಗಾದ್ರೆ ಯಾಕೆ ವಾಕಿಂಗ್ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಸಮಯ ಉಳಿಸಿ ವಾಕಿಂಗ್ ಮಾಡಲು ಆಗದಿದ್ದಲ್ಲಿ, ನೀವು ಆಫೀಸಿಗೆ, ಅಥವಾ ಮಾರುಕಟ್ಟೆಗೆ ನಡೆದೇ ಹೋಗಲು ಪ್ರಯತ್ನಿಸಿ. ಆಫೀಸು ತುಂಬಾ ದೂರವಿದ್ದರೆ, 5 ನಿಮಿಷದ ವಾಕ್ ಮಾಡಲಾದರೂ ಪ್ರಯತ್ನಿಸಿ.
ಇನ್ನು ಹೆಚ್ಚು ಮೆಟ್ಟಿಲುಗಳನ್ನು ಬಳಸಲು ಪ್ರಯತ್ನಿಸಿ. ಎಸ್ಕಲೇಟರ್, ಮುಂತಾದ ಸೌಲಭ್ಯವಿದ್ದರೂ ನೀವು ಮೆಟ್ಟಿಲು ಬಳಸಿದ್ದಲ್ಲಿ, ನಿಮ್ಮ ಆರೋಗ್ಯ ಚೆನ್ನಾಗಿ ಸುಧಾರಿಸುತ್ತದೆ. ಏಕೆಂದರೆ ಇದು ಕೂಡ ವ್ಯಾಯಾಮದ 1 ಭಾಗ.
ವಾಕ್ ಮಾಡಲು ಸೌಲಭ್ಯ ಚೆನ್ನಾಗಿಲ್ಲವೆಂದಲ್ಲಿ ನೀವು, ನಿಮ್ಮ ಮನೆಯಲ್ಲಿ, ಅಥವಾ ಟೆರೆಸ್ ಮೇಲೆಯೇ ವಾಕ್ ಮಾಡಬಹುದು.

ೃೃೃೃೃೃೃೃೃೃೃೃೃೃೃಿ
ಶುಗರ್ ಲೆವಲ್ ನಿಭಾಯಿಸಲು ಈ 3 ವಸ್ತು ಬಳಸಿ..
ಇಂದಿನ ಕಾಲದಲ್ಲಿ ಹಲವರಿಗೆ ಬಿಪಿ, ಶುಗರ್ ಇರೋದು ಕಾಮನ್ ಆಗಿದೆ. ಚಿಕ್ಕ ಚಿಕ್ಕ ಮಕ್ಕಳಿರುವಾಗಲೇ, ಆರೋಗ್ಯ ಸಮಸ್ಯೆ ಉದ್ಭವಿಸುತ್ತಿದೆ. ಆದರೆ ನಾವು ನಮ್ಮ ಆಹಾರ ಸೇವನೆಯಿಂದಲೇ ಈ ಸಮಸ್ಯೆಗಳನ್ನು ಸರಿಪಡಿಸಬಹುದು. ಹಾಗಾದ್ರೆ ಶುಗರ್ ಲೆವಲ್ ನಿಭಾಯಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಶುಗರ್ ಲೆವಲ್ ನಿಭಾಯಿಸಬೇಕು ಅಂದ್ರೆ ಇರುವ ಸಿಂಪಲ್ ರೆಸಿಪಿ ಅಂದ್ರೆ ಮೆಂತ್ಯೆ ನೀರು. ನೀವು ರಾತ್ರಿ 1 ಗ್ಲಾಸ್ ನೀರಿಗೆ 1 ಸ್ಪೂನ್ ಮೆಂತ್ಯೆ ಹಾಕಿ, ನೆನೆಸಿಡಿ. ಬೆಳಿಗ್ಗೆ ಎದ್ದ ತಕ್ಷಣ ಆ ನೀರನ್ನು ಕುಡಿಯಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಕೆಲ ದಿನಗಳಲ್ಲಿ ನಿಮಗೆ ಫಲಿತಾಂಶ ತಿಳಿಯುತ್ತದೆ.
ಹಾಗಲಕಾಯಿ ಜ್ಯೂಸ್: ಹೆಸರು ಕೇಳುತ್ತಿದ್ದ ಹಾಗೆ ನಿಮಗೆ ವಾಕರಿಕೆ ಬರಬಹುದೇನೋ. ಆದರೆ ಶುಗರ್ ಕಂಟ್ರೋಲ್ ಮಾಡುವುದರಲ್ಲಿ ಪ್ರಮುಖ ಆದ್ಯತೆ ಇರುವ ಮದ್ದ ಅಂದ್ರೆ ಇದೆ. ಬೆಳಿಗ್ಗೆ ಖಾಲಿ ಹ“ಟ್ಟೆಯಲ್ಲಿ ನೀವು ಹಾಗಲಕಾಯಿ ಜ್ಯೂಸ್ ಕುಡಿದರೆ, ಶುಗರ್ ಲೆವಲ್ ಕಂಟ್ರೋಲಿನಲ್ಲಿರುತ್ತದೆ.
ಬಾರ್ಲಿ ಹುಡಿ: ಚಪಾತಿ ಮಾಡುವಾಗ ನೀವು ಗೋಧಿ ಹುಡಿಗೆ, ಬಾರ್ಲಿ ಹುಡಿಯನ್ನು ಸೇರಿಸಿ, ಚಪಾತಿ ಮಾಡಿ ತಿನ್ನಿ. ಅಧವಾ ಬಾರ್ಲಿ ಬೇಯಿಸಿ, ಅದರ ನೀರನ್ನು ಕುಡಿಯಿರಿ. ಇದರಿಂದಲೂ ಶುಗರ್ ನಿಭಾಯಿಸಬಹುದು.

=ೃೃೃೃೃೃೃೃೃೃೃೃೃೃೃೃೃೃೃೃೃೃೃೃ
ಆಹಾರ ಸೇವನೆ ಮಾಡಿದ ತಕ್ಷಣ ಮಲಗಬಾರದು.. ಯಾಕೆ..?
ಹಲವರು ಆಹಾರ ಸೇವನೆ ಮಾಡಿದ ತಕ್ಷಣ ನಿದ್ದೆ ಮಾಡಲೋ, ಅಥವಾ ಬರೀ ಮಲಗಿ ಸಮಯ ಕಳೆಯಲೋ ಹೋಗುತ್ತಾರೆ. ಆದರೆ ಇದು ಉತ್ತಮವಾದ ಅಭ್ಯಾಸವಲ್ಲ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದರಲ್ಲೂ ಉದರಕ್ಕೆ ಸಂಬಂಧಿಸಿದ ಸಮಸ್ಯೆ ಉದ್ಭವಿಸುತ್ತದೆ. ಹಾಗಾದ್ರೆ ಆಹಾರ ಸೇವನೆಯ ಬಳಿಕ ಮಲಗಿದರೆ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಊಟವಾದ ತಕ್ಷಣ ಮಲಗಬೇಕು ಹೌದು. ಆದರೆ ಅದರ ಮಧ್ಯೆ ಸ್ವಲ್ಪ ಗ್ಯಾಪ್ ಇರಬೇಕು. ಆ ಗ್ಯಾಪ್‌ನಲ್ಲಿ ನೀವು ಸಣ್ಣ ವಾಕಿಂಗ್ ಮಾಡಬೇಕು. ಅಥವಾ ಕುಳಿತುಕ“ಳ್ಳಬೇಕು. ಇದರಿಂದ ಸೇವಿಸಿದ ಆಹಾರ, ಬೇಗ ಮತ್ತು ಆರಾಮವಾಗಿ ಜೀರ್ಣವಾಗುತ್ತದೆ.
ನೀವು ಊಟ ಮಾಡಿದ ತಕ್ಷಣ ಮಲಗಿದರೆ, ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದಲೇ ಗ್ಯಾಸ್ಟಿಕ್ ಸಮಸ್ಯೆ ಸೇರಿ ಹಲವು ಉದರ ಸಮಸ್ಯೆ ಉದ್ಭವಿಸುತ್ತದೆ.
ನೀರು ಕುಡಿಯುವಾಗಲೂ ಹಾಗೇ. ನೀವು ಆಹಾರ ಸೇವಿಸಿದ ತಕ್ಷಣ ಅಥವಾ ಆಹಾರ ಸೇವಿಸುವ ಮಧ್ಯೆ ನೀರು ಕುಡಿಯಬಾರದು. ಆಹಾರ ಸೇವಿಸಿ ಅರ್ಧ ಅಥವಾ 1 ಗಂಟೆಯಾದ ತಕ್ಷಣ ನೀರು ಕುಡಿಯಬೇಕು.
ೃೃೃೃೃೃೃೃೃೃೃೃೃೃೃೃೃೃೃೃೃೃೃೃೃೃ
ವಾಶ್‌ರೂಮ್‌ನಲ್ಲಿ ಮೊಬೈಲ್ ಬಳಸುವುದರಿಂದ ಯಾವ ಆರೋಗ್ಯ ಸಮಸ್ಯೆ ಬರತ್ತೆ ತಿಳಿದಿದೆಯಾ..?
ಇಂದಿನ ಕಾಲದಲ್ಲಿ ಮೊಬೈಲ್ ಅನ್ನೋದು ಮನುಷ್ಯನ ಜೀವನದಲ್ಲಿ ಅದೆಂಥ ಮೋಡಿ ಮಾಡಿದೆ ಅಂದ್ರೆ, ಜನಕ್ಕೆ ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿ ಮಲಗುವ ಮುನ್ನ, ಆಹಾರ ಸೇವಿಸುವಾಗ, ನಡೆದಾಡುವಾಗ, ಅಲ್ಲದೇ ವಾಶ್‌ರೂಮ್‌ನಲ್ಲೂ ಮೊಬೈಲ್ ಬೇಕು. ಎಲ್ಲ ಕಡೆ ಓಕೆ, ಆದ್ರೆ ವಾಶ್‌ರೂಮ್‌ನಲ್ಲೂ ಮೊಬೈಲ್ ಏಕೆ..? ಅನ್ನೋದು ಪ್ರಶ್ನೆ.
ಕಸ ಆಚೆ ಹಾಕುವಾಗಲಾದ್ರೂ ಆ ಮೊಬೈಲ್‌ನನ್ನು ನೀವು ವಾಶ್‌ರೂಮ್‌ಗೆ ತೆಗೆದುಕ“ಂಡು ಹೋಗಬಾರದು. ಹಾಗಾದ್ರೆ ವಾಶ್‌ರೂಮ್‌ಗೆ ಮೊಬೈಲ್ ತೆಗೆದುಕ“ಂಡು ಹೋಗುವುದರಿಂದ ಆಗುವ ಆರೋಗ್ಯ ಸಮಸ್ಯೆಗಳೇನು ಅಂತಾ ತಿಳಿಯೋಣ ಬನ್ನಿ..
ವಾಶ್‌ರೂಮ್‌ಗೆ ಹೋದಾಗ, ನೀವು ಕಮಾಡ್ ಮೇಲೆ ಕುಳಿತಾಗ, ಜೀರ್ಣಾಂಗದ ಮೇಲೆ ಭಾರ ಬೀಳುತ್ತದೆ. ನಾವು ನಾರ್ಮಲ್ ಆಗಿ ಕುಳಿತುಕ“ಳ್ಳಲು ಮತ್ತು ಕಮಾಡ್ ಮೇಲೆ ಮಲ ವಿಸರ್ಜನೆಗೆ ಕುಳಿತುಕ“ಳ್ಳಲು ವ್ಯತ್ಯಾಸವಿದೆ.
ಹಾಗಾಗಿ ನಾವು ಮಲವಿಸರ್ಜನೆಗಾಗಿ ಕಮಾಡ್ ಮೇಲೆ ಕುಳಿತಾಗ, ನಮ್ಮ ಜೀರ್ಣಾಂಗದ ಮೇಲೆ ಭಾರ ಬೀಳುತ್ತಾರೆ. ಹಾಗಾಗಿ ನಾವು ಮಲ ವಿಸರ್ಜನೆ ಮಾಡಿದ ತಕ್ಷಣ, ಎದ್ದು ಬರಬೇಕು. ಅದನ್ನು ಬಿಟ್ಟು ಅಲ್ಲೇ ತುಂಬ ಸಮಯ ಕಳೆದರೆ, ಅದರಿಂದ ನಮಗೆ ಪೈಲ್ಸ್ ಬರುತ್ತದೆ. ಹಾಗಾಗಿಯೇ ವಾಶ್ರೂಮ್‌ಗೆ ಹೋಗುವಾಗ ಫೋನ್ ಬಳಸಬೇಡಿ ಅನ್ನೋದು.
ಇನ್ನು ನಾವು ಮಲವಿಸರ್ಜನೆ ಮಾಡಿ ಬಂದ ಬಳಿಕ, ಅಲ್ಲಿ ಕ್ಲೀನ್ ಮಾಡುತ್ತೇವೆ. ಕೈ ಕ್ಲೀನ್ ಮಾಡುತ್ತೇವೆ. ಕಾಲನ್ನು ಕೂಡ ವಾಶ್ ಮಾಡುತ್ತೇವೆ. ಆದರೆ ನೀವು ನಿಮ್ಮ ಫೋನನ್ನು ವಾಶ್ ಮಾಡುತ್ತೀರಾ..? ಖಂಡಿತ ಸಾಧ್ಯವಿಲ್ಲ. ಆಗ ವಾಶ್‌ರೂಮ್‌ನಲ್ಲಿ ಮಲದಲ್ಲಿದ್ದ ಬ್ಯಾಕ್ಟೀರಿಯಾ ಅದರ ಮೇಲೆ ತಾಕಿರುತ್ತದೆ. ಅದೇ ಫೋನ್ ಹಿಡಿದು, ಆಹಾರ ಸೇವಿಸಲು ಬರುತ್ತೀರಾ. ಅದೇ ಫೋನ್ ಹಿಡಿದು ಎಲ್ಲೆಡೆ ತಿರುಗುತ್ತೀರಾ. ಹೀಗಾದಾಗ ನಿಮ್ಮ ಆರೋಗ್ಯ ಹಾಳಾಗದೇ ಇದ್ದೀತಾ..? ಹಲವು ರೀತಿಯ ರೋಗ, ರುಜಿನ ಬರದೇ ಇದ್ದೀತಾ..? ಬಂದೇ ಬರುತ್ತದೆ. ಹಾಗಾಗಿ ಫೋನ್‌ನ್ನು ಎಂದಿಗೂ ವಾಶ್‌ರೂಮ್ಗೆ ತಗೆದುಕ“ಂಡು ಹೋಗಬೇಡಿ.
ೃೃೃೃೃೃೃೃೃೃೃೃೃೃೃೃೃೃೃೃೃೃ
ರಾತ್ರಿ ನಾವು ಸೇವಿಸುವ ಆಹಾರಕ್ಕೂ, ನಿದ್ರೆಗೂ ಏನು ಸಂಬಂಧ..?
ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ರಾತ್ರಿಯಿಡೀ ಪದೆ ಪದೆ ಎಚ್ಚರಾಗುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರುತ್ತಿಲ್ಲ ಎಂದಲ್ಲಿ, ನೀವು ಸೇವಿಸಿದ ಆಹಾರದಲ್ಲೇನೋ ಸಮಸ್ಯೆ ಇದೆ ಎಂದರ್ಥ. ಹಾಗಾದ್ರೆ ರಾತ್ರಿ ನಾವು ಸೇವಿಸುವ ಆಹಾರಕ್ಕೂ ನಿದ್ರೆಗೂ ಏನು ಸಂಬಂಧವೆಂದು ತಿಳಿಯೋಣ ಬನ್ನಿ..
ಮಸಾಲೆಯುಕ್ತ ಆಹಾರ: ನಾವು ಮಲಗುವ ಮುನ್ನ ಖಾರ ಖಾರವಾದ ಅಥವಾ ಮಸಾಲೆಯುಕ್ತ ಆಹಾರವಾಗಿರುವ ಬಿರಿಯಾನಿ, ಪುಲಾವ್, ಕರ್ರಿ ಹೀಗೆ ಇಂಥ ಆಹಾರ ಸೇವನೆ ಮಾಡಿ, ರಾತ್ರಿ ನಿದ್ರಿಸಿದರೆ, ನಮಗೆ ಗಾಢವಾದ, ಆರೋಗ್ಯಕರವಾಗಿರುವ ನಿದ್ದೆ ಬರಲು ಸಾಧ್ಯವಿಲ್ಲ. ಏಕೆಂದರೆ ಇಂಥ ಆಹಾರ ಜೀರ್ಣಕ್ರಿಯೆಯನ್ನು ನಿಧಾನವಾಗಿಸುತ್ತದೆ. ಮತ್ತು ಎದೆ ಉರಿ, ಉದರ ಸಮಸ್ಯೆ ಬರುವಂತೆ ಮಾಡುತ್ತದೆ. ಹಾಗಾಗಿ ರಾತ್ರಿ ಮಲಗುವ ವೇಳೆ ನೀವು ಖಾರವಲ್ಲದ, ಸಪ್ಪೆಯಾದರೂ ಆರೋಗ್ಯವಾಗಿರುವ ಆಹಾರ ಸೇವನೆ ಮಾಡುವುದು ಉತ್ತಮ.
ಎರಡನೇಯದಾಗಿ ಕಾಫಿ ಅಥವಾ ಚಹಾ. ನೀವು ರಾತ್ರಿ ಮಲಗುವಾಗ ಯಾವಾಗಲೂ ಹಾಲು ಕುಡಿದು ಮಲಗಬೇಕು. ಅದರಲ್ಲೂ ಬಿಸಿ ಬಿಸಿಯಾಗಿರುವ ಹಾಲು ಕುಡಿಯಬೇಕು. ಆದರೆ ನೀವು ಕಾಫಿ ಅಥವಾ ಚಹಾ ಸೇವನೆ ಮಾಡಿ, ನಿದ್ರಿಸಬೇಕು ಎಂದಿದ್ದರೆ, ಆ ಕಾಫಿ ಅಥವಾ ಚಹಾದಲ್ಲಿರುವ ಕೆಫೆನ್ ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ. ಹಾಗಾಗಿಯೇ ರಾತ್ರಿ ಕೆಲಸ ಮಾಡುವವರು ನಿದ್ರೆಗೆಡಬೇಕು ಎಂಬ ಕಾರಣಕ್ಕಾಗಿಯೇ ಹೆಚ್ಚಾಗಿ, ಚಹಾ, ಕಾಫಿ ಸೇವಿಸುತ್ತಾರೆ.
ಮೂರನೇಯದಾಗಿ ಕುಕೀಸ್, ಕೇಸ್, ಚಾಕೋಲೆಟ್ಸ್ ಸೇರಿ ಇತರೆ ಸಿಹಿ ತಿಂಡಿಗಳನ್ನು ನೀವು ರಾತ್ರಿ ಸೇವಿಸುವುದನ್ನು ಅವೈಡ್ ಮಾಡಬೇಕು. ಇದರಿಂದ ನಿದ್ರೆ ಸರಿಯಾಗಿ ಬರದಿರುವುದಲ್ಲದೇ, ನಿಮ್ಮ ದೇಹದ ತೂಕವೂ ಅನಾರೋಗ್ಯಕರ ರೀತಿಯಿಂದ ಹೆಚ್ಚಾಗುತ್ತದೆ. ಹಾಗಾಗಿ ರಾತ್ರಿ ಹೆಚ್ಚು ಸಿಹಿ ತಿಂಡಿ ಸೇವಿಸಬೇಡಿ.
ೃೃೃೃೃೃೃೃೃೃೃೃೃೃೃೃೃೃೃೃೃೃೃ
ನಿಧಾನವಾಗಿ ಆಹಾರ ಸೇವಿಸಬೇಕು ಅಂತಾ ಹೇಳೋದ್ಯಾಕೆ..?
ನಮ್ಮಲ್ಲಿ ಎಷ್ಟೋ ಜನ ಆಹಾರವನ್ನು ಗಡಿಬಿಡಿಯಲ್ಲಿ ತಿನ್ನುತ್ತಾರೆ. ಅದರಲ್ಲೂ ಕೆಲಸಕ್ಕೆ ಹೋಗುವವರದ್ದು ಪ್ರತಿದಿನ ಇದೇ ಗೋಳು. ಆದರೆ ನಾವು ಗಡಿಬಿಡಿಯಲ್ಲಿ ಆಹಾರ ಸೇವಿಸಿದರೆ, ಆರೋಗ್ಯ ಸಮಸ್ಯೆ ಫಿಕ್ಸ್ ಅಂತಲೇ ಅರ್ಥ. ಹಾಗಾಗಿ ನಾವಿಂದು ನಿಧಾನವಾಗಿ ಏಕೆ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ.
ಯಾಕೆ ನಿಧಾನವಾಗಿ ಆಹಾರ ಸೇವನೆ ಮಾಡಬೇಕು ಎಂದರೆ, ನಿಮ್ಮ ಆರೋಗ್ಯ ಚೆನ್ನಾಗಿರಬೇಕು. ಜೀರ್ಣಕ್ರಿಯೆ ಚೆನ್ನಾಗಿ ಆಗಬೇಕು ಅಂದ್ರೆ, ಗ್ಯಾಸ್ಟಿಕ್ ಸೇರಿ ಯಾವುದೇ ಉದರ ಸಮಸ್ಯೆ ಉದ್ಭವಿಸಬಾರದು ಅಂದ್ರೆ ನೀವು ನಿಧನವಾಗಿ, ಅಗಿದು ಅಗಿದು ಆಹಾರ ಸೇವನೆ ಮಾಡಬೇಕು.
ಅಲ್ಲದೇ ಬೇಗ ಬೇಗ ತಿನ್ನುವುದರಿಂದ ದೇಹದ ತೂಕ ಅನಾರೋಗ್ಯಕರವಾಗಿ ಹೆಚ್ಚಾಗುತ್ತದೆ. ಹಾಗಾಗಿಯೇ ನೀವು ಆಹಾರ ಸೇವನೆಗಾಗಿಯೇ 20 ನಿಮಿಷ ತೆಗೆದುಕ“ಳ್ಳಿ. ನಿಧಾನವಾಗಿ ಅಗಿದು ಆಹಾರ ಸೇವನೆ ಮಾಡಿದರೆ, ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಕೆಲಸಕ್ಕೆ ಲೇಟ್ ಆಯ್ತು, ಅಥವಾ ಯಾರಾದರೂ ಏನಾದ್ರೂ ಅಂತಾರೋ ಅಂತಾ, ನೀವು ಬಕಾ ಬಕಾ ಅಂತಾ ಊಟ ಮಾಡಿದರೆ, ನಿಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನಿಮ್ಮ ಆರೋಗ್ಯದ ಕಾಳಜಿ ನೀವು ಮಾತ್ರ ವಹಿಸಬೇಕು.
ಇನ್ನು ಆಹಾರ ಸೇವಿಸುವಾಗ ಆದಷ್ಟು ಕೈಯಿಂದ ತಿನ್ನಲು ಪ್ರಯತ್ನಿಸಿ. ಸ್ಪೂನ್ ಬಳಕೆ ಕಡಿಮೆ ಮಾಡಿ. ನಾವು ಕೈಯಿಂದ ಊಟ ಮಾಡಿದಾಗ, ನಮ್ಮ ಕೈ ಮೆದುಳಿಗೆ ಕನೆಕ್ಟ್ ಆಗುತ್ತದೆ. ಮತ್ತು ಅದು ನಮ್ಮ ಜೀರ್ಣಾಂಗಕ್ಕೆ ಸಂದೇಶ ನೀಡುತ್ತದೆ. ಹಾಗಾಗಿಯೇ ಯಾರು ಕೈ ಬಳಸಿ, ನಿಧಾನವಾಗಿ ಆಹಾರ ಸೇವಿಸುತ್ತಾರೋ, ಅವರ ಆರೋಗ್ಯ ಸದಾಕಾಲ ಅತ್ಯುತ್ತಮವಾಗಿರುತ್ತದೆ.

ಈ ತಿಂಡಿ ಆರೋಗ್ಯಕರ ಅನ್ನೋದೇ ನಮ್ಮ ಭ್ರಮೆ.. ಇದನ್ನು ಬೆಳಿಗ್ಗೆ ಅಂತೂ ತಿನ್ನಲೇಬೇಡಿ..
ಇತ್ತೀಚಿನ ದಿನಗಳಲ್ಲಿ ಜನ, ಅಮ್ಮ, ಅಜ್ಜಿ ಮಾಡ್ತಿದ್ದ ತಿಂಡಿ ಬಿಟ್ಟು, ಸೋಶಿಯಲ್ ಮೀಡಿಯಾದಲ್ಲಿ ಬರುವ ತಿಂಡಿಗಳನ್ನು ಮಾಡಿ ತಿನ್ನುತ್ತಿದ್ದಾರೆ. ಅದರಲ್ಲೂ ಡಯಟ್ ಅನ್ನೋ ಹೆಸರಲ್ಲಿ ಬರುತ್ತಿರುವ ಕೆಲ ಆಹಾರಗಳಂತೂ ನಮ್ಮ ಭಾರತೀಯರಿಗೆ ಹೇಳಿದ್ದಲ್ಲವೇ ಅಲ್ಲ. ಹಾಗಾದ್ರೆ ಯಾವ ಆಹಾರಗಳನ್ನು ನಾವು ಬೆಳಿಗ್ಗೆ ತಿಂಡಿಯಾಗಿ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..
ಮೈದಾದಿಂದ ಮಾಡಿದ ತಿಂಡಿ: ಮೈದಾದಿಂದ ಮಾಡಿದ ರೋಟಿ, ಬ್ರೇಡ್, ಬನ್, ಪರೋಟ ಸೇರಿ ಹಲವು ತಿಂಡಿಗಳನ್ನು ಮೈದಾದಲ್ಲಿ ಮಾಡಿರುತ್ತಾರೆ. ಇಂಥವುಗಳನ್ನು ನೀವು ಬೆಳಿಗ್ಗೆ ತಿಂಡಿಯಾಗಿ ತಿಂದರೆ, ನಿಮ್ಮ ದೇಹದ ತೂಕ ಹೆಚ್ಚಾಗಿ, ಹಲವು ರೋಗಗಳು ನಿಮ್ಮನ್ನು ಅಂಟಿಕ“ಳ್ಳುತ್ತದೆ. ಹಾಗಾಗಿ ಆದಷ್ಟು ಮೈದಾ, ಎಣ್ಣೆ ಬಳಸಿ ಮಾಡಿದ ಆಹಾರ ಸೇವನೆ ನಿಲ್ಲಿಸಿ.
ಪ್ಯಾಕ್ಡ್ ಜ್ಯೂಸ್: ಸೋಶಿಯಲ್ ಮೀಡಿಯಾ, ಟಿವಿಗಳಲ್ಲಿ ಬರುವ ವೀಡಿಯೋಗಳನ್ನು ನೋಡಿ, ಕೆಲವರು ಅದೇ ಆರೋಗ್ಯಕರವೆಂದು ಭಾವಿಸಿ, ಪ್ಯಾಕ್ ಮಾಡಿದ ಜ್ಯೂಸ್‌ಗಳನ್ನು ತಂದು, ತಾವು ಕುಡಿಯುತ್ತಾರೆ ಮತ್ತು ಮಕ್ಕಳಿಗೂ ನೀಡುತ್ತಾರೆ. ಆದರೆ ಇದೆಷ್ಟು ಡೇಂಜರ್ ಅನ್ನೋ ಅಂದಾಜು ಮಾತ್ರ ಅವರಿಗಿರುವುದಿಲ್ಲ. ಏಕೆಂದರೆ, ಇಂಥ ಜ್ಯೂಸ್‌ಗಳಲ್ಲಿ ಹಣ್ಣುಗಳನ್ನು ಬಳಸಿರುವುದೇ ಇಲ್ಲ. ಅಲ್ಲದೇ, ತುಂಬ ದಿನ ಉಳಿಯಲು ಕೆಮಿಕಲ್ ಬಳಸಿ, ಪ್ರಿಸರ್ವ್ ಮಾಡಿರುತ್ತಾರೆ. ಹಾಗಾಗಿ ಇಂಥ ಆಹಾರ ಸೇವಿಸಿದರೆ, ಅದರಲ್ಲೂ ಬೆಳಿಗ್ಗೆ ಇಂಥ ಆಹಾರ ಸೇವಿಸದರೆ, ಬೇಗ ನಿಮ್ಮ ಆರೋಗ್ಯ ಹಾಳಾಗುತ್ತದೆ.
ಸಕ್ಕರೆ ಬಳಸಿ ಮಾಡುವ ಚಹಾ: ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಸಕ್ಕರೆ, ಹಾಲು ಬಳಸಿ ಮಾಡಿದ ಕಾಫಿ, ಚಹಾ ಬೇಕೇ ಬೇಕಾಗುತ್ತದೆ. ಆಗಲೇ ಅವರ ದಿನ ಶುರುವಾಗೋದು. ಆದರೆ ಈ ಅಭ್ಯಾಸ ಉತ್ತಮವಲ್ಲ. ಬೆಳಿಗ್ಗೆ ಎದ್ದ ತಕ್ಷಣ ನೀವು ಚಹಾ, ಕಾಫಿ ಕುಡಿಯುವ ಬದಲು, ತಿಂಡಿಯಾದ ಬಳಿಕ, ಕಡಿಮೆ ಸಕ್ಕರೆ ಬಳಸಿದ ಚಹಾ ಸೇವಿಸಬಹುದು. ಆದರೆ ಅದು ಕೂಡ ಮಿತವಾಗಿರಬೇಕು.
=ೃೃೃೃೃೃೃೃೃೃೃೃೃೃೃೃೃೃೃ
ಈ 4 ಗಿಡಗಳನ್ನು ಬೆಳೆಸಿ ಮತ್ತು ಬಳಸಿ ಆರೋಗ್ಯ, ಸೌಂದರ್ಯ ವೃದ್ಧಿಸಿ
ನಮ್ಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡಬೇಕು ಅಂದ್ರೆ, ನಾವು ಮಾರುಕಟ್ಟೆಯಿಂದ ಖರೀದಿಸಿ ತರುವ ಬ್ಯೂಟಿ ಪ್ರಾಡಕ್ಟ್‌ಗಳನ್ನೇ ಬಳಸಬೇಕು ಎಂದೇನಿಲ್ಲ. ನಾವು ನಮ್ಮ ಗಾರ್ಡನ್‌ನಲ್ಲೇ ಇರುವ ಕೆಲ ಗಿಡಗಳ ಎಲೆಗಳನ್ನು ಬಳಸಿಯೇ ನಮ್ಮ ಆರೋಗ್ಯ, ಸೌಂದರ್ಯ ವೃದ್ಧಿಸಬಹುದು. ಹಾಗಾದ್ರೆ ಯಾವುದು ಆ ಗಿಡಗಳು ಅಂತಾ ತಿಳಿಯೋಣ ಬನ್ನಿ..
ತುಳಸಿ: ಹಿಂದೂಗಳ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಯಾಕಂದ್ರೆ ತುಳಸಿಯಲ್ಲಿ ಔಷಧಿಯ ಗುಣವಿರುವುದು ಮಾತ್ರವಲ್ಲದೇ, ಹಿಂದೂಗಳು ತುಳಸಿಯನ್ನು ದೇವಿಯಾಗಿ ಪೂಜಿಸುತ್ತಾರೆ. ಆದರೆ ನಿಮಗೆ ಕೆಮ್ಮಿನ ಸಮಸ್ಯೆ ಇದ್ದರೆ, ಜೀರ್ಣಕ್ರಿಯೆ ಸಮಸ್ಯೆ ಇದ್ದರೆ, ಕೆಮ್ಮು, ನೆಗಡಿ, ಜ್ವರ, ಕಫ, ಲೋ ಬಿಪಿ ಹೀಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ತುಳಸಿ ಎಲೆ ಸೇವನೆ ಅಥವಾ ತುಳಸಿ ಕಶಾಯ ಸೇವನೆ ಮಾಡಿದರೆ, ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.
ಆ್ಯಲೋವೆರಾ: ಆ್ಯಲೋವೆರಾ 1 ಅದ್ಭುತವಾದ ಗಿಡವಾಗಿದೆ. ಇದರ ಜ್ಯೂಸ್ ಬೆಳಿಗ್ಗೆ ಸೇವಿಸಿದರೆ, ದೇಹದ ತೂಕ ಆರೋಗ್ಯಕರವಾಗಿ ಕಡಿಮೆಯಾಗುತ್ತದೆ. ಇನ್ನು ಗಾಯ, ಕಲೆ, ಗುಳ್ಳೆ ಹೀಗೆ ತ್ವಚೆಯ ಯಾವುದೇ ಸಮಸ್ಯೆ ಇದ್ದರೂ ಆ್ಯಲೋವೆರಾ ಜೆಲ್ ಹಚ್ಚಿದ್ರೆ, ಆ ಚರ್ಮದ ಸಮಸ್ಯೆ ಮಾಯವಾಗುತ್ತದೆ.
ಪುದೀನಾ: ಪುದೀನಾ ಎಲೆಯ ಚಟ್ನಿ ಅಥವಾ ತಂಬುಳಿ ಅಥವಾ ಬರೀ ಎಲೆ ಸೇವನೆ ಮಾಡಿದರೂ ಉತ್ತಮ. ಇದು ತ್ವಚೆಯ ಆರೋಗ್ಯ ಚೆನ್ನಾಗಿರಿಸುತ್ತದೆ. ಅಲ್ಲದೇ, ಜೀರ್ಣಕ್ರಿಯೆ ಸುಲಭವಾಗಿಸುತ್ತದೆ. ಪುದೀನಾ ಪೇಸ್ಟ್ ಮಾಡಿ ನೀವು ಗುಳ್ಳೆಗಳ ಮೇಲೆ ಹಚ್ಚಿದರೆ, ಗುಳ್ಳೆಯೂ ಮಾಯವಾಗುತ್ತದೆ.
ತಿಮರೆ: ತಿಮರೆ ಎಂದರೆ, ಸರಸ್ವತಿ ಎಲೆ, ವಂದೆಲಗ. ಇದರ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿಯೇ ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ ತಿಮರೆಯ ತಂಬುಳಿ ಮಾಡಿಕ“ಡಲಾಗುತ್ತದೆ. ಇದನ್ನು ಬೆಳೆಸಲು ಹೆಚ್ಚು ಜಾಗ ಬೇಡ ಮತ್ತು ಇದು ಬೇಗ ಬೇಗ ಬೆಳೆಯುತ್ತದೆ.
Discussion about this post