ಅಗತ್ಯಕ್ಕಿಂತ ಹೆಚ್ಚು ತಾಮ್ರದ ನೀರು ಕುಡಿಯಬಾರದು.. ಯಾಕೆ..? ಏನಾಗುತ್ತದೆ..?
ತಾಾಮ್ರದ ತಂಬಿಗೆ ಅಥವಾ ಪಾತ್ರೆಯಲ್ಲಿ ರಾತ್ರಿಯಿಡೀ ನೀರನ್ನು ಇರಿಸಿ, ಮರುದಿನ ಬೆಳಿಗ್ಗೆ ಆ ನೀರನ್ನು ಕುಡಿದರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ತಾಮ್ರದ ತಂಬಿಗೆಯಲ್ಲಿರಿಸಿದ ನೀರನ್ನು ಅಗತ್ಯಕ್ಕಿಂತ ಹೆಚ್ಚು ಕುಡಿದರೆ, ನಮ್ಮ ಆರೋಗ್ಯಕ್ಕೆ ಅಪಾಯವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಈಗ ತಾಮ್ರದ ಬಾಟಲಿಯೇ ಬಂದಿದೆ. ಹಾಗಾಗಿ ಜನ ಇಡೀ ದಿನ ತಾಮ್ರದ ಬಾಟಲಿಯಲ್ಲಿರಿಸಿದ ನೀರನ್ನೇ ಕುಡಿಯುತ್ತಿದ್ದಾರೆ. ಆದರೆ ಇದು ದೇಹಕ್ಕೆ ಅಪಾಯಕಾರಿಯಾಗಿದೆ.
ರಾತ್ರಿಯಿಡೀ ತಾಮ್ರದ ಬಾಟಲಿಯಲ್ಲಿ ಇರಿಸಿದ ನೀರಿನಲ್ಲಿ ಬೆಳಿಗ್ಗೆ ತಿಂಡಿಗೂ ಮುಂಚೆ 1ರಿಂದ 2 ಗ್ಲಾಸ್ ನೀರು ಕುಡಿಯಬೇಕು. ಇದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೈ ಕಾಲು ನೋವು ಕಡಿಮೆಯಾಗುತ್ತದೆ. ಶಕ್ತಿ ಬರುತ್ತದೆ. ನಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಹೀಗೆ ಅನೇಕ ಅನೇಕ ಆರೋಗ್ಯ ಪ್ರಯೋಜನವಾಗುತ್ತದೆ.
ಏಕೆಂದರೆ, ತಾಮ್ರದ ಪಾತ್ರೆಯಲ್ಲಿ ರಾತ್ರಿಯಿಡೀ ನೀರನ್ನು ಇರಿಸುವುದರಿಂದ ತಾಮ್ರದಲ್ಲಿ ಕೆಲವ ಪ್ರಮಾಣ ನೀರನ್ನು ಸೇರುತ್ತದೆ. ಹಾಗೆ ಸೇರಿದ ತಾಮ್ರದ ಅಂಶ ನಮ್ಮ ದೇಹ ಸೇರುತ್ತದೆ. ಇದೇ ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡುತ್ತದೆ.
ಆದರೆ ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ತಾಮ್ರ ಸೇರಿದರೆ, ನಿಮ್ಮ ಆರೋಗ್ಯವೇ ಹಾಳಾಗಬಹುದು. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ 2 ಗ್ಲಾಸ್ ಮಾತ್ರವೇ ತಾಮ್ರದ ನೀರನ್ನು ಬಳಸಿ, ಆರೋಗ್ಯವಾಗಿರಿ.
==========
1-9 ನಿಯಮವನ್ನು ಅನುಸರಿಸಿದರೆ ನೀವು ಆರೋಗ್ಯವಾಗಿರುತ್ತೀರಿ.
ನಾವಿಂದು ನಿಮಗೆ 9 ಹೆಲ್ತ್ ಟಿಪ್ಸ್ ನೀಡಲಿದ್ದೇವೆ. ಅಂದ್ರೆ ನೀವು 1-9 ಅನ್ನೋ ನಿಯಮವನ್ನು ಅನುಸರಿಸಿದರೆ, ಆರೋಗ್ಯವಾಗಿ ಇರಲಿದ್ದೀರಿ. ಆದರೆ ಈ ನಿಯಮ ಅನುಸರಿಸುವಾಗ, ಎಚ್ಚರಿಕೆಯಿಂದಿರಬೇಕು.
1ನೇ ದಿನವೇ ನಾನು ಈ ಎಲ್ಲಾ ನಿಯಮ ಅನುಸರಿಸುತ್ತೀನಿ ಅಂದ್ರೆ ನಿಮ್ಮ ಆರೋಗ್ಯ ಹಾಳಾಗಬಹುದು. ಹಾಗಾಗಿ ಚುರು ಚುರು ನಿಯಮ ಅನುಸರಿಸಿ, ಅಭ್ಯಾಸವಾದ ಬಳಿಕ ಪೂರ್ತಿಯಾಗಿ 1-9 ನಿಯಮ ಅನುಸರಿಸಬಹುದು. ಹಾಗಾದ್ರೆ ಈ ನಿಯಮವೇನು ತಿಳಿಯೋಣ ಬನ್ನಿ..
9 ಅಂದ್ರೆ 9 ಸಾವಿರ ಹೆಜ್ಜೆ ನಡೆಯಬೇಕು. ಪ್ರತಿದಿನ ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿ. ದಿನಕ್ಕೆ 9 ಸಾವಿರ ಹೆಜ್ಜೆ ನಡೆಯಬೇಕು. ಆದರೆ ನೀವು ಪ್ರತಿದಿನ ಸ್ವಲ್ಪ ಸ್ವಲ್ಪ ನಡೆದು, ಬಳಿಕ ಪ್ರತಿದಿನ 9 ಸಾವಿರ ಹೆಜ್ಜೆ ನಡೆಯಬಹುದು.
8 ಅಂದ್ರೆ ಪ್ರತಿದಿನ 8 ಗ್ಲಾಸ್ ನೀರು ಕುಡಿಯಬೇಕು. ಹಾಗಂತ 1 ಸಲ 8 ಗ್ಲಾಸ್ ನೀರು ಕುಡಿಯಬೇಡಿ. ಪ್ರತಿದಿನ ನಿಮಗೆ ಜೀರ್ಣಿಸಿಕ“ಳ್ಳಲು ಸಾಧ್ಯವಾಗುವಷ್ಟು ಕುಡಿಯಿರಿ. ಬಳಿಕ 8 ಗ್ಲಾಸ್ ಕುಡಿಯಲು ಸಾಧ್ಯವಾದರೆ 8 ಗ್ಲಾಸ್ ನೀರು ಕುಡಿಯಿರಿ. ಇದರಿಂದ ನಿಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಸೌಂದರ್ಯವೂ ಹೆಚ್ಚುತ್ತದೆ.
7 ಅಂದ್ರೆ 7 ಗಂಟೆ ಚೆನ್ನಾಗಿ ನಿದ್ದೆ ಮಾಡಿ. ನಿದ್ದೆ ಮಾಡುವುದರಿಂದ ನಾವು ಫ್ರೆಶ್ ಆಗುತ್ತೇವೆ. 7 ಗಂಟೆ ಸತತವಾಗಿ ನಿದ್ದೆ ಮಾಡಿದರೆ, ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.
6 ಅಂದ್ರೆ ಪ್ರತಿದಿನ 6 ನಿಮಿಷ ಧ್ಯಾನ ಮಾಡಿ. ಇದರಿಂದ ಏಕಾಗೃತೆ ಹೆಚ್ಚುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ.
5 ಅಂದ್ರೆ 5 ರೀತಿಯ ತರಕಾರಿ ಮತ್ತು ಹಣ್ಣು ಪ್ರತಿದಿನ ಸೇವಿಸಿ. ಹಣ್ಣು ತರಕಾರಿಗಳ ಸೇವನೆಯಿಂದ ರೋಗ ರುಜಿನಗಳು ದೂರವಿರುತ್ತದೆ. ಅದರಲ್ಲೂ ಹಸಿ ತರಕಾರಿ ಸೇವನೆಯಿಂದ ನಾವು ಯಂಗ್ ಆಗಿ ಕಾಣುತ್ತೇವೆ.
4 ಅಂದ್ರೆ 4 ಸ್ಟ್ರೆಚ್ ವರ್ಕೌಟ್. ಅಂದ್ರೆ ನೀವು ಹೆಚ್ಚು ಸಮಯ ಕುಳಿತು ಕೆಲಸ ಮಾಡುತ್ತೀರಿ ಎಂದಲ್ಲಿ, 4 ಬಾರಿ ಬ್ರೇಕ್ ತೆಗೆದುಕ“ಂಡು, ಮೈ ಕೈ ಸ್ಟ್ರೆಚ್ ಮಾಡಿ. ಇದು ವ್ಯಾಯಾಮದ ರೀತಿ ಕೆಲಸ ಮಾಡುತ್ತದೆ.
3 ಅಂದ್ರೆ ಪ್ರತಿದಿನ 3 ಹೆಲ್ದಿ ಮೀಲ್ಸ್ ಸೇವಿಸಿ. ಅಂದ್ರೆ ತಿಂಡಿ, ಊಟ, ರಾತ್ರಿ ಫಲಹಾರ ಆರೋಗ್ಯಕರವಾಗಿರಲಿ ಮತ್ತು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ.
2 ಅಂದ್ರೆ ಮಲಗುವ 2 ಗಂಟೆ ಮುಂಚೆ ನೋ ಸ್ಕ್ರೀನ್ ಟೈಮ್. ಬೇಕಾದ್ರೆ ಪುಸ್ತಕ ಓದಿ. ಪ್ರೀತಿಪಾತ್ರರ ಜತೆ ಮಾತನಾಡಿ. ಮಕ್ಕಳ ಜತೆ ಆಟವಾಡಿ. ಏನಾದರೂ ಮಾಡಿ. ಆದರೆ Mobile, TV, Computer, Laptop ಬಳಕೆ ಮಾಡಬೇಡಿ.
1 ಅಂದ್ರೆ ಯೋಗಾ, ಜಿಮ್, ಡಾನ್ಸ್ ಇದರಲ್ಲಿ ಯಾವುದಾದರೂ 1ನ್ನು ಆರಿಸಿ, ಪ್ರತಿದಿನ ನಿಮ್ಮ ಜೀವನದಲ್ಲಿ ಅಳವಡಿಸಿಕ“ಳ್ಳಿ.

=======================
ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ
ಇಂದಿನ ಕಾಲದಲ್ಲಿ ಹುಲ್ಲಿರುವ ಜಾಗ ಕಾಣೋದೇ ಅಪರೂಪ. ಆದರೆ ನಿಮಗೇನಾದರೂ ಹುಲ್ಲಿರುವ ಜಾಗ ಕಂಡರೆ, ಅದರ ಮೇಲೆ ಚಪ್ಪಲಿ ಧರಿಸದೇ, ನಡೆಯಲು ಪ್ರಯತ್ನಿಸಿ. ಯಾಕಂದ್ರೆ ಹುಲ್ಲಿನ ಮೇಲೆ ಚಪ್ಪಲಿ ಇಲ್ಲದೇ, ನಡೆದರೆ, ಅದರಿಂದ ನಮ್ಮ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭವಿದೆ. ಹಾಗಾದ್ರೆ ಏನದು ಆರೋಗ್ಯ ಲಾಭ ಅಂತಾ ತಿಳಿಯೋಣ ಬನ್ನಿ..
ಬೆಳಗ್ಗಿನ ಜಾಗ ನೀವು ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ನಿಮ್ಮ ದೃಷ್ಟಿ ತುಂಬಾ ಉತ್ತಮ. ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ದೃಷ್ಟಿ ತೀಕ್ಷ್ಣವಾಗುತ್ತದೆ. ಹಸಿರು ಹುಲ್ಲನ್ನು ನೋಡುವುದರಿಂದ ಕಣ್ಣು ತಂಪಾಗಿ, ಗ್ಯಾಜೇಟ್ಸ್‌ನ ನೀಲಿಬಣ್ಣದ ಎಫೆಕ್ಟ್ ತುಂಬಾ ಕಡಿಮೆಯಾಗುತ್ತದೆ.
ತುಂಬಾ ಟೆನ್ಶನ್ ಇದೆ. ಮನಸ್ಸಿಗೆ ಸಮಾಧಾನವೇ ಇಲ್ಲ. ತಳಮಳವಿದೆ ಎಂದಲ್ಲಿ ನೀವು ಪ್ರತಿದಿನ ಬಿಡುವು ಮಾಡಿಕ“ಂಡು, ಬೆಳಗ್ಗಿನ ಜಾವ ಸ್ವಲ್ಪ ಸಮಯ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ವಾಕ್ ಮಾಡಿ. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಟೆನ್ಶನ್ ಕಡಿಮೆಯಾಗುತ್ತದೆ.
ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ, ಹೈ ಬಿಪಿ ಕಂಟ್ರೋಲಿಗೆ ಬರುತ್ತದೆ. ಬಿಪಿ ನಾರ್ಮಲ್ ಆಗುತ್ತದೆ. ಇನ್ನು ಕಡೆಯದಾಗಿ ಮೆದುಳಿನ ಆರೋಗ್ಯ ಚೆನ್ನಾಗಿರುತ್ತದೆ. ಮೆದುಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ.
ೃೃೃೃೃೃೃೃೃೃೃೃೃೃೃೃೃೃೃೃ
ಹಾಲಿನ ಸೇವನೆಯಿಂದ ಆರೋಗ್ಯಕ್ಕೇನು ಲಾಭ..?
ಹಾಲು ಅನ್ನೋದು ಮನುಷ್ಯ ಜನಿಸಿದಾಗಿನಿಂದ ಬೇಕಾಗುವ ಅವಶ್ಯಕ ಆರೋಗ್ಯ ಪೇಯ. ಮಗು ಜನಿಸಿದಾಗ, ತಾಯಿಹಾಲು ಕುಡಿಯುತ್ತದೆ. ಬೆಳೆದ ಮೇಲೆ ಹಸುವಿನ ಹಾಲು ಸೇವನೆ ಮಾಡಲಾಗುತ್ತದೆ. ಹೀಗೆ ಹಾಲು ಮನುಷ್ಯನ ಜೀವನದಲ್ಲಿ ಅಮೃತದಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಹಾಲಿನ ಸೇವನೆಯಿಂದ ಆರೋಗ್ಯಕ್ಕೇನು ಲಾಭ ಅಂತಾ ತಿಳಿಯೋಣ ಬನ್ನಿ..
ಬಾಲ್ಯದಿಂದ ವೃದ್ಧಾಪ್ಯದವರೆಗೂ ನೀವು ನಿಮ್ಮ ಮೂಳೆಯನ್ನು ಗಟ್ಟಿಮುಟ್ಟಾಗಿ ಇರಿಸಬೇಕು ಎಂದಿದ್ದೀರಾದರೆ, ನೀವು ಪ್ರತಿದಿನ ಹಾಲಿನ ಸೇವನೆ ಮಾಡಬೇಕು. ಪ್ಯಾಕೇಟ್ ಹಾಲಿಗಿಂತ, ಹಸುವಿನ ಹಾಲಿನ ಸೇವನೆ ಅತೀ ಉತ್ತಮ. ಏಕೆಂದರೆ, ಇದರಲ್ಲಿ ಕ್ಯಾಲ್ಶಿಯಂ ಇರುತ್ತದೆ. ಕ್ಯಾಲ್‌ಶಿಯಂ ಅಂಶ ನಮ್ಮ ದೇಹ ಸೇರುವುದರಿಂದ ನಮ್ಮ ಮೂಳೆ ಗಟ್ಟಿಮುಟ್ಟಾಗುತ್ತದೆ.
ಹಾಲಿನಲ್ಲಿ ವಿಟಾಮಿನ್ ಬಿ12 ಮತ್ತು ವಿಟಾಮಿನ್ ಎ ಇರುತ್ತದೆ. ಇವೆರಡೂ ನಿಮ್ಮ ತ್ವಚೆಯನ್ನು ಅಂದವಾಗಿರಿಸುತ್ತದೆ. ಅಲ್ಲದೇ, ನಿಮ್ಮ ಸ್ಕಿನ್ ಸಾಫ್ಟ್ ಮತ್ತು ಕ್ಲೀನ್ ಆಗಿರುವಂತೆ ಮಾಡುತ್ತದೆ.
ಇನ್ನು ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದಲ್ಲಿ, ಅನ್ನ ಊಟ ಮಾಡುವ ಬದಲು 1 ಗ್ಲಾಸ್ ಹಾಲು ಕುಡಿದರೆ ಸಾಕು. ಊಟ ಮಾಡಿದ್ದಕ್ಕಿಂತಲೂ ಹೆಚ್ಚಿನ ಲಾಭ ನಿಮಗೆ ಸಿಗುತ್ತದೆ. ಅದರಲ್ಲೂ ಡ್ರೈಫ್ರೂಟ್ಸ್ ತಿಂದು ಹಾಲು ಕುಡಿದರೆ, ಶಕ್ತಿಯೂ ಸಿಗುತ್ತದೆ. ದೇಹದ ತೂಕ ಇಳಿಯಲು ಸಹಾಯವಾಗುತ್ತದೆ.
ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿಲ್ಲ. ನೀವು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದಲ್ಲಿ, ರಾತ್ರಿ ಮಲಗುವಾಗ ಬಿಸಿ ಹಾಲಿಗೆ ಸ್ವಲ್ಪ ಅರಿಶಿನ ಮತ್ತು ಕಲ್ಲುಸಕ್ಕರೆ ಹಾಕಿ, ಕುದಿಸಿ, ಕುಡಿಯಿರಿ. ಇದರಿಂದ ನಿಮಗೆ ನಿದ್ದೆಯೂ ಬರುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಸಡನ್ ಆಗಿ ಬಿಪಿ ಲೋ ಆದರೆ ಏನು ಮಾಡಬೇಕು..?
ಬಿಸಿಲಿನ ತಾಪ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿರುವುದು, ಆರೋಗ್ಯಕರ ಆಹಾರ ಸೇವನೆ ಮಾಡದಿರುವುದು, ಹೆಚ್ಚು ಟೆನ್ಶನ್ ತೆಗೆದುಕ“ಳ್ಳುವುದು, ಇತ್ಯಾದಿ ಲೋ ಬಿಪಿ ಲಕ್ಷಣ. ಹಾಗಾದ್ರೆ ಸಡನ್ ಆಗಿ ಲೋ ಬಿಪಿ ಬಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಲೋ ಬಿಪಿಯಾದಾಗ, ನಮ್ಮ ದೇಹದ ಬಣ್ಣ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ದೇಹ ಬೆವರಲು ಶುರುವಾಗುತ್ತದೆ. ತಲೆ ತಿರುಗುತ್ತದೆ. ವಾಂತಿ ಬರುತ್ತದೆ. ಉಸಿರಾಡಲು ಸಮಸ್ಯೆಯಾಗುತ್ತದೆ. ಏನು ಕೆಲಸ ಮಾಡದಿದ್ದರೂ, ನಾಲ್ಕು ಹೆಜ್ಜೆ ನಡೆದರೂ ತುಂಬಾ ಸುಸ್ತಾಗುತ್ತದೆ. ನಿಮಗೂ ಹೀಗಾಗುತ್ತದೆ ಎಂದಲ್ಲಿ ಅದು ಲೋ ಬಿಪಿ ಲಕ್ಷಣ ಎಂದು ತಿಳಿದುಬಿಡಿ.
ಹೀಗಾದಾಗ ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೇ, ನೀವು 1 ಗ್ಲಾಸ್ ನೀರಿಗೆ, ಅರ್ಧ ಸ್ಪೂನ್ ಉಪ್ಪು, 1 ಸ್ಪೂನ್ ಸಕ್ಕರೆ ಹಾಕಿ ಕುಡಿಯಿರಿ. ಇದರಿಂದ ನಿಮ್ಮ ಬಿಪಿ ಸ್ವಲ್ಪ ಕಂಟ್ರೋಲಿಗೆ ಬರುತ್ತದೆ.
ಎರಡನೇಯದಾಗಿ ನೀವು ಸೋಫಾ ಮೇಲೆ ಕಾಲು ಮೇಲೆ ಮಾಡಿ ಮಲಗಬೇಕು. ಇದರಿಂದ ದೇಹದ ರಕ್ತಸಂಚಲನ ಉಲ್ಟಾ ಆಗುತ್ತದೆ. ಆಗ ಬಿಪಿ ಸರಿಯಾಗುತ್ತದೆ.
ಮೂರನೇಯದಾಗಿ 1 ಕಪ್ ಸ್ಟ್ರಾಂಗ್ ಟೀ ಅಥವಾ ಸ್ಟ್ರಾಂಗ್ ಕಾಫಿ ಮಾಡಿ ಕುಡಿಯಿರಿ. ಅದಕ್ಕೆ ಹಾಲು ಸಕ್ಕರೆ ಹಾಕಕೂಡದು. ಇದೆಲ್ಲ ಮಾಡುವುದರಿಂದ ತಕ್ಷಣಕ್ಕೆ ನಿಮ್ಮ ಬಿಪಿ ಸರಿಯಾಗಬಹುದು. ಆದರೆ ಲೋ ಬಿಪಿ ಇದ್ದಲ್ಲಿ ನೀವು ವೈದ್ಯರ ಬಳಿ ಹೋಗಿ ಪರೀಕ್ಷಿಸಿಕ“ಳ್ಳಿ. ಹಿಮೋಗ್ಲೋಬಿನ್ ಪ್ರಮಾಣದಲ್ಲಿ ಕುಸಿತ ಕಂಡಾಗಲೇ ಲೋ ಬಿಪಿ ಕಾಣಿಸಿಕ“ಳ್ಳುತ್ತದೆ.

ೃೃೃೃೃೃೃೃೃೃೃ
ಊಟದ ಬಳಿಕ ನೀವು ಮಾಡುವ ಈ ತಪ್ಪುಗಳೇ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ.
ಊಟ ಮಾಡುವ ಸಮಯಕ್ಕೆ ಸರಿಯಾಗಿ ಮಾಡಿದರೆ, ಆರೋಗ್ಯಕರ ಆಹಾರ ಸೇವಿಸಿದರೆ, ಹೆಚ್ಚು ಟೆನ್ಶನ್ ತೆಗೆದುಕ“ಳ್ಳದೇ, ನೆಮ್ಮದಿಯಾಗಿದ್ದರೆ, ಹಲವು ರೋಗಗಳು ನಮ್ಮಿಂದ ದೂರವಿರುತ್ತದೆ. ಆದರೆ ನೀವು ಊಟವಾದ ಬಳಿಕ ಮಾಡುವ ಕೆಲ ತಪ್ಪುಗಳು ನಿಮ್ಮ ಆರೋಗ್ಯವನ್ನು ನಿಮ್ಮಿಂದ ಕಸಿಯಬಹುದು. ಹಾಗಾದ್ರೆ ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ.
1. ಊಟವಾದ ತಕ್ಷಣ ಕಾಫಿ ಅಥವಾ ಟೀ ಕುಡಿಯುವುದು. ಇತ್ತೀಚಿನ ದಿನಗಳಲ್ಲಿ ನೀವು ಎಲ್ಲಾದರೂ ಕಾರ್ಯಕ್ರಮಕ್ಕೆ ಹೋದರೆ, ಅಲ್ಲಿ ಊಟವಾದ ತಕ್ಷಣ ನಿಮಗೆ ಕುಡಿಯಲು ಚಹಾ ಅಥವಾ ಕಾಫಿ ನೀಡಲಾಗುತ್ತದೆ. ಆದರೆ ಹೀಗೆ ಊಟದ ಬಳಿಕ ಚಹಾ, ಕಾಫಿ ಕುಡಿಯುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಪ್ರತಿದಿನ ಈ ಅಭ್ಯಾಸವಿದ್ದಲ್ಲಿ, ನಿಮ್ಮ ದೇಹದ ಶಕ್ತಿ ಕ್ರಮಣ ಹಾಳಾಗುತ್ತದೆ. ಮತ್ತು ನಿಮ್ಮ ದೇಹದಲ್ಲಿ ಕೆಟ್ಟ ಫ್ಯಾಟ್ ಹೆಚ್ಚಾಗುಚ್ಚದೆ.
2. ಊಟವಾಗಿ ಅರ್ಧ ಗಂಟೆ ಬಳಿಕ ನೀರು ಕುಡಿಯಬೇಕು ಅಂತಾ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಆದರೆ ಕೆಲವರು ಊಟ ಮಾಡುವಾಗ ಮತ್ತು ಊಟವಾದ ತಕ್ಷಣ ಹೆಚ್ಚು ನೀರು ಕುಡಿಯುತ್ತಾರೆ. ಇದು ನಮ್ಮ ಜೀರ್ಣಕ್ರಿಯಾ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ಉದರ ಸಮಸ್ಯೆಗಳು ಹೆಚ್ಚಾಗುತ್ತದೆ.
3. ಊಟವಾದ ತಕ್ಷಣ ನಿದ್ರೆ ಮಾಡುವುದು ಕೂಡ 1 ಕೆಟ್ಟ ಚಾಳಿ. ಹೀಗೆ ಮಾಡುವುದರಿಂದಲೂ ನಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಅಲ್ಲದೇ, ದೇಹದ ತೂಕ ಕೂಡ ಹೆಚ್ಚುತ್ತದೆ.
4. ಊಟವಾದ ತಕ್ಷಣ ಹಣ್ಣಿನ ಸೇವನೆ ಮಾಡಬಾರದು. ನಾವು ತಿಂಡಿ ಮತ್ತು ಊಟದ ಮಧ್ಯದಲ್ಲಿ ಸಿಗುವ ಸಮಯದಲ್ಲೇ ಹಣ್ಣಿನ ಸೇವನೆ ಮಾಡಬೇಕು. ಅದರಲ್ಲೂ ಸೂರ್ಯನಿರುವ ವೇಳೆ ಅಂದ್ರೆ ಬೆಳಿಗ್ಗೆ, ಮಧ್ಯಾಹ್ನ ಮಾತ್ರ ಹಣ್ಣಿನ ಸೇವನೆ ಮಾಡಬೇಕು. ಸೂರ್ಯಾಸ್ತದ ಬಳಿಕ ಹಣ್ಣಿನ ಸೇವನೆ ಉತ್ತಮವಲ್ಲ ಅಂತಾ ಹೇಳಲಾಗುತ್ತದೆ. ಅದರಲ್ಲೂ ನೀವು ಊಟದ ಬಳಿಕ ಹಣ್ಣಿನ ಸೇವನೆ ಮಾಡಿದರೆ, ಗ್ಯಾಸ್ ಉತ್ಪತ್ತಿಯಾಗುತ್ತದೆ. ಅಜೀರ್ಣವಾಗುತ್ತದೆ.
5. ಊಟ ಮಾಡಿದ ತಕ್ಷಣ ಬ್ರಶ್ ಮಾಡಬಾರದು. ಊಟವಾದ ಬಳಿಕ, ರಾತ್ರಿ ಮಲಗುವ ವೇಳೆ ಬ್ರಶ್ ಮಾಡುವುದು ಉತ್ತಮ ವಿಷಯ. ಆದರೆ ಊಟವಾಗಿ ಅರ್ಧಗಂಟೆ ಕಾದರೆ ಉತ್ತಮ. ಇಲ್ಲವಾದರೆ, ಊಟವಾದ ತಕ್ಷಣ ನಮ್ಮ ಎನಾಮಲ್ ಸಾಫ್ಟ್ ಆಗಿರುತ್ತದೆ. ತಕ್ಷಣ ಬ್ರಶ್ ಮಾಡಿದರೆ ಹಲ್ಲು ಕ್ರಮೇಣ ಕಳಪೆಯಾಗುತ್ತದೆ.
Discussion about this post