Health Tips: ಹಿಂದಿ ಭಾಷೆಯಲ್ಲಿ ದಾಳಿಂಬೆ ಹಣ್ಣಿನ ಬಗ್ಗೆ ಒಂದು ಮಾತಿದೆ. ಏಕ್ ಅನಾರ್ ಸೌ ಬಿಮಾರ್. ಅಂದ್ರೆ ಒಂದು ದಾಳಿಂಬೆ ಸೇವನೆ ನೂರು ರೋಗಗಳನ್ನ ಗುಣಪಡಿಸುವ ಶಕ್ತಿ ಹೊಂದಿದೆ ಎಂದರ್ಥ. ದಾಳಿಂಬೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆಯಲ್ಲೂ ಆರೋಗ್ಯಕರ ಗುಣವಿದೆ. ಔಷಧೀಯ ಗುಣವಿದೆ. ಹಾಗಾಗಿ ನಾವಿಂದು ದಾಳಿಂಬೆ ಹಣ್ಣಿನಲ್ಲಿರುವ ಆರೋಗ್ಯಕರ ಗುಣಗಳೇನು..? ಅದರ ಸೇವನೆಯಿಂದಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ.
1.. ತೂಕ ಇಳಿಸಿಕೊಳ್ಳಬೇಕೆನ್ನುವವರು ದಾಳಿಂಬೆ ಜ್ಯೂಸ್ ಸೇವಿಸಿ. ಒಂದು ಮಿಡಿಯಂ ಗ್ಲಾಸ್ ದಾಳಿಂಬೆ ಜ್ಯೂಸ್ ನೀವು ಸೇವಿಸಿದ್ದಲ್ಲಿ, ಅದು ಒಂದು ಹೊತ್ತಿಗೆ ಬೇಕಾಗುವ ಊಟದಷ್ಟು ಶಕ್ತಿ ನೀಡುತ್ತದೆ. ಹಾಗಾಗಿ ತುಂಬಾ ಹಸಿವಾದ ಸಂದರ್ಭದಲ್ಲಿ ಅನ್ನ ಸೇವಿಸುವ ಬದಲು ಜ್ಯೂಸ್ ಕುಡಿಯಬಹುದು. ಇದರಿಂದ ಹೊಟ್ಟೆಯೂ ತುಂಬುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶವೂ ದೊರೆಯುತ್ತದೆ.
2.. ದಾಳಿಂಬೆ ರಸ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ದಾಳಿಂಬೆ ರಸದ ಸೇವನೆಯಿಂದ ಹೊಟ್ಟೆಯ ಸಮಸ್ಯೆ ಇದ್ದರೆ ಕಡಿಮೆಯಾಗುತ್ತದೆ. ಈ ವೇಳೆ ಜ್ಯೂಸ್ ಕುಡಿಯುವಾಗ ಅದಕ್ಕೆ ಕೊಂಚ ಕಪ್ಪುಪ್ಪು, ಕಪ್ಪುಮೆಣಸಿನ ಪುಡಿ ಸೇರಿಸಿದ್ದಲ್ಲಿ ಹೊಟ್ಟೆ ನೋವಿಗೆ ಉತ್ತಮವಾಗಿರುತ್ತದೆ.
3.. ದಾಳಿಂಬೆ ರಸ ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡುವುದರಿಂದ, ಹೃದಯ ಸಂಬಂಧಿ ಖಾಲಿಯೆಗೆ ಉತ್ತಮ ಆಹಾರವಾಗಿದೆ. ನಿಮ್ಮ ಹೃದಯದ ಆರೋಗ್ಯ ಉತ್ತಮವಾಗಿರಬೇಕು, ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಬೇಕು ಅಂದ್ರೆ ದಾಳಿಂಬೆ ಸೇವಿಸಬೇಕು.
4.. ವಯಸ್ಸಾದಂತೆ ಮುಖ ಸುಕ್ಕುಗಟ್ಟಲು ಶುರುವಾಗುತ್ತದೆ, ಮುಖದ ಮೇಲೆ ರಿಂಕಲ್ಸ್ ಏಳಲು ಶುರುವಾಗುತ್ತದೆ. ಈ ಸಮಸ್ಯೆ ತಡೆಯಬೇಕೆಂದಿದ್ದಲ್ಲಿ ದಾಳಿಂಬೆ ಜ್ಯೂಸ್ ನಿಯಮಿತವಾಗಿ ಸೇವಿಸಿ. ಹಲವು ಸಿನಿಮಾ ಆ್ಯಕ್ಟರ್‌ಗಳು ಯಂಗ್ ಆಗಿ ಕಾಣುವ ಟಾಪ್ ಸಿಕ್ರೇಟ್ ಅಂದ್ರೆ ಇದೇ. ಅವರು ಹಣ್ಣುಗಳ ಜ್ಯೂಸ್ ಅಥವಾ ಹಣ್ಣುಗಳ ಸೇವನೆ ಮಾಡುತ್ತಾರೆ. ಅದರಲ್ಲೂ ಫ್ರೆಶ್ ಆಗಿರುವ ಹಣ್ಣುಗಳ ಸೇವನೆ ಆರೋಗ್ಯ ಮತ್ತು ಸೌಂದರ್ಯ ಎರಡರ ಅಭಿವೃದ್ಧಿಗೂ ಉತ್ತಮವಾಗಿದೆ.
5.. ಕಣ್ಣು ನೋವು, ಕಣ್ಣು ಕಪ್ಪುಗಟ್ಟುವುದು ಇತ್ಯಾದಿ ಸಮಸ್ಯೆಗಳಿಗೆ ದಾಳಿಂಬೆ ರಾಮಬಾಣವಾಗಿದೆ. ದಾಳಿಂಬೆ ಸೇವನೆಯಿಂದ ಕಣ್ಣಿನ ಸಮಸ್ಯೆ ಪರಿಹಾರವಾಗುತ್ತದೆ. ಅಲ್ಲದೇ, ಕಣ್ಣಿನ ದೃಷ್ಟಿ ಚುರುಕಾಗುತ್ತದೆ.
6.. ದೇಹದಲ್ಲಿ ರಕ್ತ ಕಡಿಮೆಯಾಗಿದ್ದಲ್ಲಿ, ದಾಳಿಂಬೆ ಜ್ಯೂಸ್ ಸೇವಿಸಿ. ದಾಳಿಂಬೆಯಲ್ಲಿ ದೇಹಕ್ಕೆ ಬೇಕಾಗುವಷ್ಟು ಐರನ್ ಅಂಶ ಇರುವುದರಿಂದ ಇದು ದೇಹವನ್ನ ಶಕ್ತಿಯುವತವಾಗಿರಿಸುವಲ್ಲಿ ಸಹಕಾರಿಯಾಗಿದೆ. ದಾಳಿಂಬೆ ರಸದೊಂದಿಗೆ ಕೊಂಚ ಬೀಟ್ರೂಟ್ ರಸ ಸೇರಿಸಿ ಕುಡಿಯಬಹುದು.
7.. ತ್ವಚೆಯ ಸಮಸ್ಯೆ ದೂರವಾಗಿಸಲು ದಾಳಿಂಬೆ ರಸ ಬಳಸಬಹುದು. ನೀವು ಬ್ಯೂಟಿಫುಲ್ ಆಗಿ ಕಾಣಬೇಕು. ನಾಲ್ಕು ಜನರ ಮಧ್ಯೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಬೇಕು ಅಂದ್ರೆ, ದಾಳಿಂಬೆ ಹಣ್ಣಿನ ಸೇವನೆ ಮಾಡಿ. ದಾಳಿಂಬೆ ಹಣ್ಣನ್ನ ಅಥವಾ ಜ್ಯೂಸನ್ನ ನಿಯಮಿತವಾಗಿ ಕುಡಿಯುವುದರಿಂದ ಮುಖದ ಮೇಲಿನ ಕಲೆ, ಗುಳ್ಳೆಗಳನ್ನ ಇದು ನಿವಾರಣೆ ಆಗುವಂತೆ ಮಾಡುತ್ತದೆ.
8.. ನಿಮಗೆ ತುಂಬಾ ಸುಸ್ತಾಗುತ್ತಿದೆ. ದೇಹದಲ್ಲಿ ಶಕ್ತಿಯೇ ಇಲ್ಲ ಅಂತಾ ಅನ್ನಿಸುತ್ತಿದ್ದರೆ, ಕೆಲಸ ಮಾಡಲು ತೊಂದರೆಯಾಗುತ್ತಿದ್ದರೆ, ನೀವು ದಾಳಿಂಬೆ ಹಣ್ಣಿನ ಸೇವನೆ ಮಾಡಿ. ದಾಳಿಂಬೆ ಜ್ಯೂಸ್ ಕೂಡ ಆರೋಗ್ಯಕ್ಕೆ ಉತ್ತಮ.
ಆದರೆ ನೀವು ಜ್ಯೂಸ್ ಮಾಡಿದಾಗ, ಅದರಲ್ಲಿರುವ ಪೋಷಕಾಂಶಗಳು ಅರ್ಧಕ್ಕರ್ಧ ಕಡಿಮೆಯಾಗುತ್ತದೆ. ಬಳಿಕ ನೀವು ಅದನ್ನು ಸೋಸಿದಾಗ, ಅದರಲ್ಲಿರುವ ನಾರಿನ ಅಂಶ ಹೊರಟು ಹೋಗುತ್ತದೆ. ಅದಕ್ಕೇನಾದ್ರೂ ಸಕ್ಕರೆ ಹಾಕಿದ್ರೆ, ಆರೋಗ್ಯಕರ ಜ್ಯೂಸ್ ಅನಾರೋಗ್ಯಕರವಾಗುತ್ತದೆ.
ಹಾಗಾಗಿ ಜ್ಯೂಸ್ ಮಾಡಿ ಕುಡಿಯುವ ಬದಲು, ಅಥವಾ ಬೀದಿಬದಿ ಜ್ಯೂಸ್ ಕುಡಿಯುವ ಬದಲು, ದಾಳಿಂಬೆ ಹಣ್ಣಿನ ಸೇವನೆ ಮಾಡಿ. ಇದರಿಂದ ದೇಹಕ್ಕೆ ಪಟ್ ಅಂತ ಶಕ್ತಿ ಸಿಗುತ್ತದೆ. ಯಾಕಂದ್ರೆ ದಾಳಿಂಬೆಯಲ್ಲಿ ವಿಟಾಮಿನ್ ಸಿ ಅಂಶವಿದೆ. ಇದೇ ಕಾರಣಕ್ಕೆ, ದಾಳಿಂಬೆ ಸೇವನೆ ಮಾಡಿದರೆ, ನಮ್ಮ ದೇಹಕ್ಕೆ ಇನ್‌ಸ್ಟಂಟ್ ಶಕ್ತಿ ಸಿಗುತ್ತದೆ.
9.. ಈಗಂತೂ ಮಳೆಗಾಲ ಶುರುವಾಗಿದೆ. ಎಲ್ಲಿ ನೋಡಿದರಲ್ಲಿ ಡೆಂಘ್ಯೂ ಕಾಟ ಶುರುವಾಗಿದೆ. ಹಾಗಾಗಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲೇಬೇಕಾಗಿದೆ. ಯಾಕಂದ್ರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ, ಯಾವ ರೋಗ ಕೂಡ ನಮ್ಮ ಬಳಿ ಬರುವುದಿಲ್ಲ. ಹಾಗಾಗಿ ನೀವು ದಾಳಿಂಬೆ ಹಣ್ಣಿನ ಸೇವನೆ ಮಾಡಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
10.. ಸರಿಯಾಗಿ ನೀರು ಕುಡಿಯದಿದ್ದರೆ, ಕಿಡ್ನಿ ಸಮಸ್ಯೆ, ಮೂತ್ರ ಸಮಸ್ಯೆ ಬರುತ್ತದೆ. ಹಾಗಾಗಿ ನೀವು ಹೆಚ್ಚು ನೀರು ಕುಡಿಯುವುದರ ಜೊತೆಗೆ, ದಾಳಿಂಬೆ ಹಣ್ಣಿನ ಸೇವನೆಯೂ ಮಾಡಿ. ಇದರಿಂದ ಕಿಡ್ನಿ ಸಮಸ್ಯೆ, ಮೂತ್ರದ ಸೋಂಕು, ಅಥವಾ ಮೂತ್ರ ನಿಂತಿರುವ ಸಮಸ್ಯೆ ಎಲ್ಲವೂ ಸರಿ ಹೋಗುತ್ತದೆ.
11.. ನಿಮಗೆ ಮರೆವು ಇದ್ದಲ್ಲಿ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ತಿನ್ನಬೇಕು ಅಂತಾ ಕೇಳಿರುತ್ತೀರಿ. ಆದರೆ ಬರೀ ಬಾದಾಮಿ ಮಾತ್ರವಲ್ಲ, ದಾಳಿಂಬೆ ಸೇವನೆಯೂ ಮಾಡಬಹುದು. ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ದಾಳಿಂಬೆ ರಸ ಸಹಕಾರಿಯಾಗಿದೆ. ಹಾಗಾಗಿ ನೀವು ದಾಳಿಂಬೆ ತಿನ್ನಲೂಬಹುದು, ಅಥವಾ ಅದರ ಜ್ಯೂಸ್ ಮಾಡಿ ಕುಡಿಯಬಹುದು.
12. ಇನ್ನೊಂದು ವಿಷಯ ಅಂದ್ರೆ ಗರ್ಭಿಣಿಯರಿಗೆ ಪ್ರತಿದಿನ ಅಥವಾ ವಾರದಲ್ಲಿ ಮೂರು ಬಾರಿಯಾದರೂ, ದಾಳಿಂಬೆ ಸೇವನೆ ಮಾಡಲು ಹೇಳಲಾಗುತ್ತದೆ. ಏಕೆಂದರೆ, ದಾಳಿ ಸೇವನೆಯಿಂದ ಮಗುವಿನ ನೆನಪಿನ ಶಕ್ತಿ, ರೋಗನಿರೋಧಕ ಶಕ್ತಿ ಸೇರಿ, ಇನ್ನೂ ಹಲವು ಆರೋಗ್ಯಕರ ಶಕ್ತಿಗಳು ಹೆಚ್ಚಾಗುತ್ತದೆ. ಮಗು ಚುರುಕಾಗಿ, ಆರೋಗ್ಯವಾಗಿ ಇರುತ್ತದೆ. ಅಲ್ಲದೇ, ತಾಯಿ ಮಗು ಇಬ್ಬರ ದೃಷ್ಟಿ ಕೂಡ ದಾಳಿಂಬೆ ಹಣ್ಣಿನ ಸೇವನೆಯಿಂದ ಅತ್ಯುತ್ತಮವಾಗಿರುತ್ತದೆ.
ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ, ಅಮೃತವೂ ವಿಷ ಅಂತಾ ಹಿರಿಯರು ಹೇಳುತ್ತಾರೆ. ಅದೇ ರೀತಿ ದಾಳಿಂಬೆ ಆರೋಗ್ಯಕ್ಕೆ ಉತ್ತಮ ಅಂತಾ, ಹೆಚ್ಚು ತಿನ್ನಬೇಡಿ. ಪ್ರತಿದಿನ ದಾಳಿಂಬೆ ತಿನ್ನಲಾಗದಿದ್ದರೂ, ವಾರಕ್ಕೆ ಮೂರು ಬಾರಿ ತಿನ್ನಬಹುದು. ಅಥವಾ ಒಂದು ದಿನ ಬಿಟ್ಟು ಒಂದು ದಿನ ನೀವು ದಾಳಿಂಬೆ ಸೇವನೆ ಮಾಡಬಹುದು.
Discussion about this post