ಜೈಪುರ : ನ್ಯೂಜಿಲೆಂಡ್ ವಿರುದ್ದ ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಕೋಚ್ ರಾಹುಲ್ ದ್ರಾವಿಡ್ ಮೊದಲ ಪಂದ್ಯದಲ್ಲಿ ಜಯ ಕಂಡಿದ್ದಾರೆ.
ಸೂರ್ಯ ಕುಮಾರ್ ಯಾದವ್ ಹಾಗೂ ನಾಯಕ ರೋಹಿತ್ ಶರ್ಮಾ ಉತ್ತಮ ಜೊತೆಯಾಟದ ನೆರವಿನಿಂದ ಟೀಂ ಇಂಡಿಯಾ ಸರಣಿಯಲ್ಲಿ 1-0 ಅಂತರದಿಂದ ಕಾಯ್ದುಕೊಂಡಿದೆ. ಇಂದೋರ್‌ನ ಸ್ವಾಮಿ ಮಾನಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡಕ್ಕೆ ಭುವನೇಶ್ವರ್ ಕುಮಾರ್ ಆರಂಭಿಕ ಆಘಾತ ನೀಡಲಾಗಿತ್ತು.
ಇದನ್ನೂ ಓದಿ: Heavy rain: ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಭಾರೀ ಮಳೆ
ಡಿ ಮಿಚೆಲ್ ಶೂನ್ಯಕ್ಕೆ ಔಟಾಗಿ ಫೆವಿಲಿಯನ್ ಹಾದಿ ಹಿಡಿಯುತ್ತಲೇ ಮಾರ್ಟಿನ್ ಗುಫ್ಟಿಲ್‌ಗೆ ಜೊತೆಯಾದ ಮಾರ್ಕ್ ಚಾಂಪ್ ಮನ್ ಉತ್ತಮ ಜೊತೆಯಾಟ ನೀಡಿದ್ರು. ಮಾರ್ಟಿನ್ ಗುಫ್ಟಿಲ್ 42 ಎಸೆತಗಳಲ್ಲಿ 70 ರನ್ ಬಾರಿಸಿದ್ರೆ, ಮಾರ್ಕ್ ಚಾಂಪ್‌ಮನ್ 50 ಎಸೆತಗಳಲ್ಲಿ 63 ರನ್ ಸಿಡಿಸಿದ್ದಾರೆ.
ಸೈಫರ್ಟ್ ಹೊರತು ಪಡಿಸಿ ಉಳಿದ ಆಟಗಾರರು ಎರಡಂಕಿ ರನ್ ದಾಟುವಲ್ಲಿ ಎಡವಿದ್ದಾರೆ. ಅಂತಿಮವಾಗಿ ನ್ಯೂಜಿಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ರನ್ ಬಾರಿಸಿದೆ. ಭಾರತ ಪರ ಆರ್.ಅಶ್ವಿನ್ ಹಾಗೂ ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಪಡೆದ್ರೆ ದೀಪಕ್ ಚಹರ್ ಹಾಗೂ ಸಿರಾಜ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: High Court: ಡಿಸೆಂಬರ್ 30ರೊಳಗೆ ಸ್ಥಳೀಯ ಸಂಸ್ಥೆ ಚುನಾವಣೆ ಪೂರ್ಣಗೊಳಿಸಲು ಹೈಕೋರ್ಟ್ ಆದೇಶ
ನ್ಯೂಜಿಲೆಂಡ್ ನೀಡಿದ್ದ 165 ರನ್ ಗುರಿಯನ್ನು ಬೆನ್ನತ್ತಲು ಹೊರಟ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ರಾಹುಲ್ ಉತ್ತಮ ಜೊತೆಯಾಟದ ಭರವಸೆಯನ್ನು ನೀಡಿದ್ರು. ಆದರೆ ರಾಹುಲ್ 14 ಎಸೆತಗಳಲ್ಲಿ 15 ರನ್ ಗಳಿಸಿದ್ದಾಗ ಸ್ಟನ್ನರ್‌ಗೆ ವಿಕೆಟ್ ಒಪ್ಪಿಸಿದ್ರು. ನಂತರ ರೋಹಿತ್ ಶರ್ಮಾ ಜೊತೆಯಾದ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟ ನೀಡಿದ್ರು. 40 ಎಸೆತಗಳಲ್ಲಿ 62 ರನ್ ಗಳಿಸಿದ್ರೆ, ರೋಹಿತ್ ಶರ್ಮಾ 36 ಎಸೆತಗಳಲ್ಲಿ 48 ರನ್ ಗಳಿಸಿದ್ದಾರೆ.
ನಂತರದಲ್ಲಿ ರಿಷಬ್ ಪಂತ್ 17 ರನ್ ಸಿಡಿಸಿದ್ರು. ಶ್ರೇಯಸ್ ಅಯ್ಯರ್ ಹಾಗೂ ವೆಂಕಟೇಶ್ ಅಯ್ಯರ್ ಕೆಟ್ಟ ಹೊಡೆತಕ್ಕೆ ವಿಕೆಟ್ ಒಪ್ಪಿಸಿದ್ರೆ, ಅಕ್ಷರ್ ಪಟೇಲ್ 1 ರನ್ ಬಾರಿಸಿದ್ದಾರೆ. ಈ ಮೂಲಕ ಭಾರತ 19.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 166 ರನ್ ಗಳಿಸುವ ಮೂಲಕ ಗೆಲುವು ಕಂಡಿದೆ.
India win first match in T20I series
Discussion about this post