ನವದೆಹಲಿ: ಭಾರತೀಯ ಸೇನೆಯ ಮೂರು ವಿಭಾಗಳಾದ ಭೂ ಸೇನೆ, ವಾಯುಸೇನೆ ಹಾಗೂ ನೌಕಾಪಡೆಯಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದಾಗಿ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ: Dowry: ವರದಕ್ಷಿಣೆ ಅನಿಷ್ಟ ಕೊನೆಗೊಳಿಸಲು ಕಾನೂನುಗಳಿದ್ದರೂ ಕೂಡ, ಜನರು ತಮ್ಮೊಳಗೆ ಬದಲಾಗಬೇಕು: ಸುಪ್ರೀಂಕೋರ್ಟ್
ಬಿಜೆಪಿ ಸಂಸದ ರಾಖೇಶ್ ಸಿನ್ಹಾ ಕೇಳಿರುವ ಪ್ರಶ್ನೆವೊಂದಕ್ಕೆ ಉತ್ತರ ನೀಡಿದ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ಸೇನೆಯಲ್ಲಿ ಒಟ್ಟು 1,04,653 ಹುದ್ದೆಗಳು ಖಾಲಿ ಇದ್ದು, ಭೂ ಸೇನಾ ವಿಭಾಗದಲ್ಲಿ 97,177 ಜವಾನ್ ಹುದ್ದೆಗಳು,7476 ರ್ಯಾಂಕ್ ಅಧಿಕಾರಿಗಳ ಪೋಸ್ಟ್ ಖಾಲಿ ಇವೆ ಎಂದಿದ್ದಾರೆ.
ಇದನ್ನೂ ಓದಿ: ಎರಡು ಡೋಸ್ ಕೊರೋನಾ ಲಸಿಕೆ ತೆಗೆದುಕೊಂಡಿದ್ದರೆ ಒಮಿಕ್ರಾನ್ ತೀವ್ರತೆ ಕಡಿಮೆ
ಇದರ ಜೊತೆಗೆ ವಾಯು ಸೇನೆಯಲ್ಲಿ 5,471 ಹುದ್ದೆಗಳು ಖಾಲಿ ಇದ್ದು, 4,850 ರ್ಯಾಂಕ್ ಏರ್ಮೆನ್ ಹಾಗೂ 621 ರ್ಯಾಂಕ್ ಆಫೀಸರ್ ಹುದ್ದೆಗಳಾಗಿವೆ ಎಂಬ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಒಮಿಕ್ರಾನ್ ಭೀತಿ: ಷೇರುಪೇಟೆಯಲ್ಲಿ ಸೆನ್ಸೆಕ್ಸ್ 949 ಅಂಕ ಕುಸಿತ
ನೌಕಾಪಡೆಯಲ್ಲಿ 12,431 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 11,166 ರ್ಯಾಂಕ್ ಯೋಧರು ಹಾಗೂ 1265 ರ್ಯಾಂಕ್ ಆಫೀಸರ್ ಹುದ್ದೆಗಳಾಗಿವೆ. ಭಾರತೀಯ ಸೇನೆಯ ಮೂರು ವಿಭಾಗಗಳಲ್ಲೂ ಸಿಬ್ಬಂದಿ ಕೊರತೆ ಇದ್ದು, ಆದಷ್ಟು ಬೇಗ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
More than 1 lakh vacancies in Indian Army
Discussion about this post