Political News: ರಾಜ್ಯದಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ 160 ಸ್ಥಾನಗಳು ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೋಗಸ್ ಸರ್ವೆ ಮಾಡಿಸಿದ್ದಾರೆ ಎಂದು ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಹೇಳಿದ್ದಾರೆ.
ಅಲ್ಲದೇ, ವಿಜಯೇಂದ್ರಗೆ ಕ್ರಿಮಿನಲ್ ಬುದ್ಧಿ ಇದೆ. ಈಗೇನಾದರೂ ಚುನಾವಣೆ ನಡೆದರೆ, 160 ಸ್ಥಾನಗಳು ಬರುತ್ತದೆ ಎಂದು ಸರ್ವೆ ನಡೆಸಿದ್ದಾನೆ. ನಾನು ಕೂಡ 1 ಏಜೆನ್ಸಿಗೆ 1 ಕೋಟಿ ರೂಪಾಯಿ ನೀಡಿ ಯತ್ನಾಳ್ ಇಲ್ಲದೇ, ಬಿಜೆಪಿಗೆ 30 ಸ್ಥಾನ ಬರುತ್ತದೆ ಅಂತಾ ಸರ್ವೇ ಮಾಡಿಸುತ್ತೇನೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ Sandalwood News: ನಾನು ಯಾರೊಂದಿಗೂ ಹೋಗಿಲ್ಲ, ಅವನಿಗೆ ಏಡ್ಸ್, ಕ್ಯಾನ್ಸರ್ ಇತ್ತು: ಶ್ರೀಧರ್ ಪತ್ನಿ
ಈಗ ವಿಜಯೇಂದ್ರ ಜಿರೋ ಆಗಿದ್ದಾರೆ. ಜನಾಕ್ರೋಶ ಯಾತ್ರೆ ಸಂಪೂರ್ಣ ವಿಫಲವಾಗಿದೆ. ಅಲ್ಲದೇ ಪಕ್ಷದಲ್ಲಿ ಸಂಘಟನೆ ಇಲ್ಲವೆಂದು ಮಾಧ್ಯಮದಲ್ಲಿ ಬರುತ್ತಿದೆ. ಹೀಗಾಗಿ ಎಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕಳೆದು ಹೋಗುತ್ತದೆ ಅನ್ನೋ ಭಯದಲ್ಲಿ ಈ ರೀತಿ ಸರ್ವೇ ಮಾಡಿಸಿದ್ದಾನೆಂದು ಯತ್ನಾಳ್ ಆರೋಪಿಸಿದ್ದಾರೆ.
ಅವರಪ್ಪ ಇದ್ದಾಗಲೇ 110, 104 ಸ್ಥಾನಗಳು ಬಂದಿದೆ. ಹಾಗಿರುವಾಗ ಇವನನ್ನು ನೋಡಿ ಬಿಜೆಪಿಗೆ ಓಟ್ ಹಾಕುವವರು ಯಾರಿದ್ದಾರೆ ಎಂದು ಯತ್ನಾಳ್ ವಿಜಯೇಂದ್ರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ Sandalwood News: ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಲಯದಲ್ಲಿ ಹರಕೆ ತೀರಿಸಿದ ನಟ
ಅಲ್ಲದೇ, ಬಿಜೆಪಿಯಿಂದ ಎಸ್.ಟಿ.ಸೋಮಶೇಖರ್, ಹೆಬ್ಬಾರ್ ಉಚ್ಛಾಟನೆ ಮಾಡಿರುವುದು, ಬಿಜೆಪಿ ಹೈಕಮಾಂಡ್ ಬಿ.ವೈ.ವಿಜಯೇಂದ್ರಗೆ ನೀಡಿರುವ ನೇರ ಸಂದೇಶವಾಾಗಿದೆ. ಇಬ್ಬರೂ ವಿಜಯೇಂದ್ರಗೆ ತುಂಬಾ ಆತ್ಮೀಯರಿದ್ದರು. ಯತ್ನಾಳ್ ಅವರನ್ನಷ್ಟೇ ಪಕ್ಷದಿಂದ ಕಳಿಸುತ್ತೇನೆ. ಉಳಿದವರನ್ನು ಇರಿಸಿಕ“ಳ್ಳುತ್ತೇನೆ ಎಂದು ವಿಜಯೇಂದ್ರ ಅವರ ಅಪ್ಪನಿಗೆ ಹೇಳಿದ್ದರು. ಆದರೆ ಹೈಕಮಾಂಡ್ ಈ ಇಬ್ಬರನ್ನೂ ಪಕ್ಷದಿಂದ ಉಚ್ಛಾಟಿಸಿದೆ. ಇಬ್ಬರನ್ನೂ ವಿಜಯೇಂದ್ರ ಉಳಿಸಿಕ“ಳ್ಳಲು ಸಾಧ್ಯವಾಗಲಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
Dhaka News: ಮರಣದಂಡನೆಗೆ ಗುರಿಯಾಗಿದ್ದ ಉಗ್ರನಿಗೆ ಬಾಂಗ್ಲಾ ಸುಪ್ರೀಂನಿಂದ ಖುಲಾಸೆ
Discussion about this post