ವಿಶಾಖಪಟ್ಟಣ: ಭಾರತೀಯ ನೌಕಾಪಡೆಯಲ್ಲಿ 32 ವರ್ಷ ಸೇವೆ ಸಲ್ಲಿಸಿರುವ ಐಎನ್ಎಸ್ ಖುಕ್ರಿ ನೌಕೆಯನ್ನು ನಿವೃತ್ತಗೊಳಿಸಲಾಗಿದ್ದು, ವಿಶಾಖಪಟ್ಟಣದಲ್ಲಿ ಗುರುವಾರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ರಾಷ್ಟ್ರ ಧ್ವಜ, ನೌಕದಳದ ಬಾವುಟ ಮತ್ತು ನಿರ್ಗಮನದ ಪೆನ್ನೆಂಟ್ಗಳನ್ನು ಸಂಜೆ ಸೂರ್ಯಾಸ್ತದ ಸಮಯದಲ್ಲಿ ಅವರೋಹಣ ಮಾಡುವ ಮೂಲಕ ನೌಕೆಗೆ ವಿದಾಯ ಹೇಳಲಾಯಿತು.ಈ ಸಂದರ್ಭದಲ್ಲಿ ಪಶ್ಚಿಮ ನೌಕಾ ನೆಲೆಯ ಕಮಾಂಡರ್ ಇನ್ ಚೀಫ್ ಆದ ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್ಗುಪ್ತಾ ಹಾಜರಿದ್ದರು. ಐಎನ್ಎಸ್ ಖುಕ್ರಿಯಲ್ಲಿ ನೌಕೆಯಲ್ಲಿ ಸೇವೆ ಸಲ್ಲಿಸಿದ್ದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಜಗಾಂವ್ ಡಾಕ್ ಶಿಪ್ ಯಾರ್ಡ್ನಲ್ಲಿ ನಿರ್ಮಾಣಗೊಂಡ ಐಎನ್ಎಸ್ ಖುಕ್ರಿ ನೌಕೆಯನ್ನು 1989ರ ಆಗಸ್ಟ್ 23ರಂದು ನೌಕಾಪಡೆಯ ಸೇವೆಗೆ ಸೇರ್ಪಡೆ ಮಾಡಲಾಗಿತ್ತು. ಮುಂಬೈನಲ್ಲಿ ನಡೆದ ಇದರ ಆರಂಭಿಕ ಚಲನೆಯ ಕಾರ್ಯಕ್ರಮದಲ್ಲಿ ಆಗಿನ ರಕ್ಷಣಾ ಸಚಿವ ಕೃಷ್ಣ ಚಂದ್ರ ಪಂತ್ ಮತ್ತು 1971ರ ಪಾಕ್ ವಿರುದ್ಧ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಮಹೇಂದ್ರನಾಥ ಮುಲ್ಲ ಅವರ ಪತ್ನಿ ಸುಧಾ ಮುಲ್ಲ ಭಾಗಿಯಾಗಿದ್ದರು. ಈ ನೌಕೆಯು ಪಶ್ಚಿಮ ಮತ್ತು ಪೂರ್ವ ನೌಕಾ ನೆಲೆ ಎರಡರಲ್ಲೂ ಕಾರ್ಯನಿರ್ವಹಿಸಿತ್ತು. 32 ವರ್ಷದ ಅವಧಿಯಲ್ಲಿ ಈ ನೌಕೆಯನ್ನು 28 ಅಧಿಕಾರಿಗಳು ಮುನ್ನಡೆಸಿದ್ದಾರೆ. 6,44,987 ನಾಟಿಕಲ್ ಮೈಲಿಯನ್ನು ಇದು ಕ್ರಮಿಸಿದೆ. ಅಂದರೆ 30 ಸಾರಿ ವಿಶ್ವ ಪರ್ಯಟನೆಗೆ ಸಮವಾದ ದೂರ ಅಥವಾ ಭೂಮಿಯಿಂದ ಚಂದ್ರನಲ್ಲಿಗೆ ಮೂರು ಸಾರಿ ಪರಿಕ್ರಮಣದ ದೂರದಷ್ಟು ಸಂಚಾರ ನಡೆಸಿದೆ.
INS Khukri Decommissioned At Visakhapatnam
ಇದನ್ನು ಓದಿ: ‘INS Shivalik’: ‘ಐಎನ್ಎಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆ ಲೋಕಾರ್ಪಣೆ
Discussion about this post